Manjeshwar September 14, 2025 : Snehalaya Charitable Trust, Manjeshwar, helped reunite Mr. Vithoba with his sister after he had been missing for one year.
Vithoba, who has lived with mental illness for the past 15 years, was separated from his family under difficult circumstances. His family, along with villagers and neighbors, never stopped searching and supported each other throughout.
On July 13, 2025, the Snehalaya team found Vithoba near the Auto Stand at Manjeshwar Junction. After proper identification and counseling, they contacted his family and ensured his safe return. The reunion was very emotional, with his family expressing great happiness and gratitude to Snehalaya for their dedicated efforts.
The reunion was made possible with the support of Shraddha Foundation, Mumbai, and Snehalaya Charitable Trust, Manjeshwar.
The local community also shared in the joy of his safe return and thanked both organizations for their compassionate service. Snehalaya Trust continues its mission of re-uniting people with their families and appreciates everyone who helps make such reunions possible.

ವಿಠೋಬಾರನ್ನು ಮರಳಿ ಮನೆ ಸೇರಲು ನೆರವಾದ ಸ್ನೇಹಾಲಯ ಮತ್ತು ಶ್ರದ್ದಾ ಫೌಂಡೇಷನ್
ಮಂಜೇಶ್ವರ್ 2025 ಸೆಪ್ಟೆಂಬರ್ 14: ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಒಂದು ವರ್ಷದ ಅಗಲಿಕೆಯ ನಂತರ ಶ್ರೀ ವಿಠೋಬಾರನ್ನು ಅವರ ತಂಗಿಯೊಂದಿಗೆ ಮರುಸೇರ್ಪಡೆಗೊಳಿಸಲು ನೆರವಾಯಿತು.
ಕಳೆದ 15 ವರ್ಷಗಳಿಂದ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ವಿಠೋಬಾ ಅವರು ಕಠಿಣ ಪರಿಸ್ಥಿತಿಯಲ್ಲಿ ಕುಟುಂಬದಿಂದ ದೂರವಾಗಿದ್ದರು. ಅವರ ಕುಟುಂಬ, ಹಳ್ಳಿಯವರು ಮತ್ತು ನೆರೆಹೊರೆಯವರು ಅವರನ್ನು ಹುಡುಕಲು ಭಗೀರಥ ಪ್ರಯತ್ನ ನಡೆಸಿದರೂ ಅವರ ಶ್ರಮ ಫಲಿಸಲಿಲ್ಲ
2025 ಜುಲೈ 13 ರಂದು, ಸ್ನೇಹಾಲಯದ ತಂಡವು ಮಂಜೇಶ್ವರ ಜಂಕ್ಷನ್ನ ಆಟೋಸ್ಟ್ಯಾಂಡ್ ಬಳಿ ವಿಠೋಬಾರನ್ನು ಪತ್ತೆ ಹಚ್ಚಿತು. ಸ್ನೇಹಾಲಯದಲ್ಲಿ ಅವರಿಗೆ ಅವರ ಸಮಸ್ಯೆಯನ್ನು ಗುರುತಿಸಿ, ಉತ್ತಮ ವೈಧ್ಯಕೀಯ ಸೇವೆ, ಸಮಗ್ರ ಆರೈಕೆ ಮತ್ತು ಬೆಂಬಲವನ್ನು ನೀಡಿದ ಬಳಿಕ, ಅವರ ಕುಟುಂಬವನ್ನು ಸಂಪರ್ಕಿಸಿ ವಿಠೋಬಾ ಅವರನ್ನು ಸುರಕ್ಷಿತವಾಗಿ ಆತನ ಮನೆಗೆ ತಲುಪಿಸಲಾಯಿತು. ಈ ಪುನರ್ಮಿಲನ ತುಂಬಾ ಭಾವನಾತ್ಮಕವಾಗಿದ್ದು, ಅವರ ಕುಟುಂಬವು ಅಪಾರ ಸಂತೋಷ ವ್ಯಕ್ತಪಡಿಸಿ ಸ್ನೇಹಾಲಯದ ತ್ಯಾಗಮಯ ಪ್ರಯತ್ನಗಳಿಗೆ ಕೃತಜ್ಞತೆ ಸಲ್ಲಿಸಿತು. ಗ್ರಾಮಸ್ಥರೂ ಸಹ ಈ ಸಂತೋಷದಲ್ಲಿ ಪಾಲುಗೊಂಡು, ಎರಡೂ ಸಂಸ್ಥೆಗಳ ಕರುಣೆಯ ಸೇವೆಗೆ ಹೃದಯದಿಂದ ಧನ್ಯವಾದಗಳನ್ನು ಅರ್ಪಿಸಿದರು.
ಈ ಮರುಸೇರ್ಪಡೆ ಮುಂಬೈನ ಶ್ರದ್ಧಾ ಫೌಂಡೇಷನ್ ಮತ್ತು ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಸಹಕಾರದಿಂದ ಸಾಧ್ಯವಾಯಿತು.ಜನರನ್ನು ಅವರ ಕುಟುಂಬಗಳಿಗೆ ಮರುಸೇರ್ಪಡಿಸುವ ಗುರಿಯಲ್ಲಿ ಸ್ನೇಹಾಲಯ ನಿತ್ಯ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಮರುಭೇಟಿಗಳನ್ನು ಸಾಧ್ಯಮಾಡುವ ಎಲ್ಲರಿಗೂ ಮನಪೂರ್ವಕ ಧನ್ಯವಾದ ತಿಳಿಸುತ್ತಿದೆ.
