Manjeshwar, August 29, 2025: With the support of the Kasaragod Women’s Police Department, 30-year-old Pramila was rescued from the Sakhi One-Stop Center and is now safely receiving care at the Snehalaya Psycho-Social Rehabilitation Center in Manjeshwar.
During the rescue, Pramila was found in a distressed state and exhibiting poor personal hygiene, according to Kasaragod Women’s Police officials, who informed Brother Joseph Crasta, founder of Snehalaya. She primarily communicates in Hindi. Following preliminary assessments, doctors have indicated the possibility of mental health issues. She is currently receiving medical treatment and counseling.
Snehalaya staff are actively working to trace Pramila’s family. Efforts are underway to identify her background and reunite her with her loved ones. The public is requested to provide any information that may help by contacting 9446547033 or 7994087033.
Founded by Brother Joseph Crasta, Snehalaya has been providing rescue and rehabilitation services for the homeless in Mangalore and Kasaragod for the past 16 years. The organization offers medical care, shelter, and rehabilitation to those in need, regardless of caste, religion, or language.
Pramila’s safe reunion with her family depends on public support, and the organization appeals for any assistance in this regard.

ಕಾಸರಗೋಡು ಪೊಲೀಸರ ನೆರವಿನಿಂದ ಮಹಿಳೆ ರಕ್ಷಣೆ ಮತ್ತು ಸ್ನೇಹಾಲಯ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ದಾಖಲು
ಮಂಜೇಶ್ವರ, ಆಗಸ್ಟ್ 29, 2025: ಕಾಸರಗೋಡು ವನಿತಾ ಪೊಲೀಸ್ ಇಲಾಖೆಯವರ ಸಹಕಾರದಿಂದ ಸಖಿ ವನ್ ಸ್ಟಾಪ್ ಸೆಂಟರ್‌ನಿಂದ ರಕ್ಷಿಸಲ್ಪಟ್ಟ 30 ವರ್ಷದ ಪ್ರಮೀಲಾ, ಈಗ ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ–ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಸುರಕ್ಷಿತವಾಗಿ ಆರೈಕೆಯನ್ನು ಪಡೆಯುತ್ತಿದ್ದಾರೆ.
ರಕ್ಷಣೆಯ ವೇಳೆ ಪ್ರಮೀಲಾ ಅವರು ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡ ಸ್ಥಿತಿಯಲ್ಲಿ, ಅಸ್ವಚ್ಛತೆಯೊಂದಿಗೆ ಪತ್ತೆಯಾಗಿದ್ದಾರೆ ಎಂದು ಕಾಸರಗೋಡು ವನಿತಾ ಪೊಲೀಸ್ ಇಲಾಖೆಯ ಸಿಬ್ಬಂದಿಯವರು, ಸ್ನೇಹಾಲಯದ ಸಂಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾರವರಿಗೆ ತಿಳಿಸಿದ್ದಾರೆ. ಅವರು ಮುಖ್ಯವಾಗಿ ಹಿಂದಿಯಲ್ಲಿ ಸಂವಹನ ಮಾಡುತ್ತಿದ್ದರು. ಪ್ರಾಥಮಿಕ ಪರೀಕ್ಷೆಗಳ ನಂತರ, ಅವರಿಗೆ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದಿರುವ ಸಾಧ್ಯತೆಯನ್ನು ವೈದ್ಯರು ಸೂಚಿಸಿದ್ದಾರೆ. ಪ್ರಸ್ತುತ ಅವರು ವೈದ್ಯಕೀಯ ಚಿಕಿತ್ಸೆ ಮತ್ತು ಸಮಾಲೋಚನೆ ಪಡೆಯುತ್ತಿದ್ದಾರೆ.
ಸ್ನೇಹಾಲಯದ ಸಿಬ್ಬಂದಿ ಪ್ರಮೀಲಾ ಅವರ ಕುಟುಂಬದ ಮಾಹಿತಿಯನ್ನು ಹುಡುಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಗುರುತು ಹಾಗೂ ಮನೆತನವನ್ನು ಪತ್ತೆಹಚ್ಚಿ, ಅವರನ್ನು ತಮ್ಮ ಆತ್ಮೀಯರೊಂದಿಗೆ ಮರುಸೇರಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಈ ಕಾರ್ಯದಲ್ಲಿ ಸಾರ್ವಜನಿಕರಿಂದ ಯಾವುದೇ ಮಾಹಿತಿ ಲಭ್ಯವಾದರೆ, ದಯವಿಟ್ಟು 9446547033 ಅಥವಾ 7994087033 ಗೆ ಸಂಪರ್ಕಿಸುವಂತೆ ವಿನಂತಿಸುತ್ತೇವೆ.
ಬ್ರೊ. ಜೋಸೆಫ್ ಕ್ರಾಸ್ತಾ ಅವರು ಸ್ಥಾಪಿಸಿದ ಸ್ನೇಹಾಲಯವು ಕಳೆದ 16 ವರ್ಷಗಳಿಂದ ಮಂಗಳೂರು ಹಾಗೂ ಕಾಸರಗೋಡು ಪ್ರದೇಶಗಳಲ್ಲಿ ನಿರಾಶ್ರಿತರ ರಕ್ಷಣೆ ಮತ್ತು ಪುನರ್ವಸತಿ ಸೇವೆಯನ್ನು ನಿರಂತರವಾಗಿ ನೀಡುತ್ತಿದೆ. ಜಾತಿ, ಧರ್ಮ, ಭಾಷೆ ಬೇಧವಿಲ್ಲದೆ ಅಗತ್ಯವಿರುವವರಿಗೆ ವೈದ್ಯಕೀಯ ಸೇವೆ, ವಸತಿ ಹಾಗೂ ಪುನರ್ವಸತಿ ಒದಗಿಸುವುದೇ ಇದರ ಉದ್ದೇಶವಾಗಿದೆ.
ಪ್ರಮೀಲಾ ಅವರು ತಮ್ಮ ಕುಟುಂಬದವರನ್ನು ಮರುಭೇಟಿ ಮಾಡುವಲ್ಲಿ ನಿಮ್ಮ ಸಹಾಯ ಅತ್ಯಂತ ಮಹತ್ವದ್ದಾಗಿದೆ. ನಿಮ್ಮ ಸಹಕಾರವನ್ನು ಕೋರುತ್ತೇವೆ.
