Mentally Disturbed Man Rescued Near Mukka Highway, Shifted to Snehalaya for Treatment

/

Manjeshwar, July 29, 2025: A man named Mr. Santhosh, found in a mentally disturbed state near Mukka Highway in Mangalore, was compassionately assisted by Businessman Mr. Kiran Karkala and his wife.

Recognizing Mr. Santhosh’s distressed condition, Mr. Kiran promptly informed Br. Joseph Crasta, the founder of Snehalaya. The couple then personally transported Mr. Santhosh to the Snehalaya Psychosocial Rehabilitation Centre in Manjeshwar, where he was safely admitted on July 29.

According to Mr. Kiran, Mr. Santhosh appeared disoriented at the time of the rescue and showed clear signs of mental distress. The medical team at Snehalaya is now closely monitoring his condition and taking appropriate steps to provide the necessary treatment.

Meanwhile, efforts are underway by the Snehalaya team to trace Mr. Santhosh’s family, with the hope of a possible reunion in the coming days.

Anyone with information about Mr. Santhosh or his family is kindly requested to contact the following numbers:
📞 94465 47033 / 79940 87033

Your one call could help reunite Mr. Santhosh with his loved ones. Let us all come together and spread the light of compassion.

snehalaya-santhosh-reunion-05aug2025-03. snehalaya-santhosh-reunion-05aug2025-04 snehalaya-santhosh-reunion-05aug2025-05.

ಮಂಗಳೂರಿನ ಮುಕ್ಕಾ ಹೈವೇ ಬಳಿ ಕಂಡುಬಂದ ಮಾನಸಿಕ ಅಸ್ಥಿರ ವ್ಯಕ್ತಿಗೆ ಮಂಜೇಶ್ವರ ಸ್ನೇಹಾಲಯದಲ್ಲಿ ಆಶ್ರಯ

ಮಂಜೇಶ್ವರ, ಜುಲೈ 29, 2025: ಮಂಗಳೂರು ಮುಕ್ಕಾ ಹೈವೇ ಬಳಿಯಲ್ಲಿ ಮಾನಸಿಕ ಅಸ್ಥಿರತೆಯಲ್ಲಿದ್ದ ಶ್ರೀ ಸಂತೋಷ್ ಎಂಬ ವ್ಯಕ್ತಿಗೆ ಉದ್ಯಮಿಯಾದಂತಹ ಶ್ರೀ ಕಿರಣ್ ಕಾರ್ಕಳ ಹಾಗೂ ಅವರ ಪತ್ನಿಯವರು ಮಾನವೀಯತೆ ಮೆರೆದ ಸಹಾಯವನ್ನು ನೀಡಿದರು.

ಶ್ರೀ ಸಂತೋಷ್ ರವರ ಸ್ಥಿತಿಗತಿಗಳನ್ನು ಸರಿಯಾಗಿ ಅರ್ಥಮಾಡಿಕೊಂಡ ಶ್ರೀ ಕಿರಣ್, ವಿಷಯವನ್ನು ತಕ್ಷಣ ಸ್ನೇಹಾಲಯದ ಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ಅವರ ಗಮನಕ್ಕೆ ತಂದರು. ನಂತರ, ದಂಪತಿ ತಮ್ಮ ಸ್ವಂತ ವಾಹನದಲ್ಲಿ ಶ್ರೀ ಸಂತೋಷ್ ಅವರನ್ನು ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದು, ಜುಲೈ 29ರಂದು ಸುರಕ್ಷಿತವಾಗಿ ದಾಖಲಿಸಿದರು.

ಶ್ರೀ ಕಿರಣ್ ಅವರ ಪ್ರಕಾರ, ರಕ್ಷಣೆ ಸಂದರ್ಭದಲ್ಲಿ ಶ್ರೀ ಸಂತೋಷ್ ಗೊಂದಲಗೊಂಡ ಸ್ಥಿತಿಯಲ್ಲಿ ಇದ್ದರು ಮತ್ತು ಮಾನಸಿಕ ತೊಂದರೆಯ ಲಕ್ಷಣಗಳು ಗೋಚರಿಸುತ್ತಿದ್ದವು. ಇದೀಗ ಸ್ನೇಹಾಲಯದ ವೈದ್ಯಕೀಯ ತಂಡ ಅವರ ಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಈ ನಡುವೆ, ಶ್ರೀ ಸಂತೋಷ್ ಅವರ ಕುಟುಂಬಸ್ಥರನ್ನು ಪತ್ತೆಹಚ್ಚುವ ಯತ್ನ ಸ್ನೇಹಾಲಯದ ತಂಡದಿಂದ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅವರ ಪುನರ್ಮಿಲನ ಸಾಧ್ಯವಾಗುವಂತೆ ನೆರವು ನೀಡಲಾಗುತ್ತಿದೆ.

ಶ್ರೀ ಸಂತೋಷ್ ಕುರಿತು ಅಥವಾ ಅವರ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಇರುವವರನ್ನು, ದಯವಿಟ್ಟು ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ವಿನಂತಿಸಲಾಗುತ್ತದೆ:
📞 94465 47033 / 79940 87033

ನಿಮ್ಮ ಒಂದು ಕರೆ, ಶ್ರೀ ಸಂತೋಷ್ ಅವರ ಕುಟುಂಬವನ್ನು ಮರಳಿ ಕಣ್ತುಂಬುವ ಅವಕಾಶ ನೀಡಬಹುದು. ಬನ್ನಿ, ನಾವು ಎಲ್ಲರೂ ಒಟ್ಟಾಗಿ ಸಹಾನುಭೂತಿಯ ಬೆಳಕು ಹರಡೋಣ.

Leave a Reply

Your email address will not be published. Required fields are marked *

Need Help?