Manjeshwar, August 1, 2025 : A 35 year old Hindi-speaking man, identified as Hari Chand, was found in a severely disoriented state, showing signs of mental distress near the Mulki–Surathkal Highway. He was first noticed by a local businessman, Mr. Kiran Karkala, who promptly informed Mr. Joseph Crasta, the founder of Snehalaya Charitable Trust.
Following the alert, a rapid-response team from Snehalaya quickly reached the location and safely rescued Hari Chand. He has since been admitted to the Snehalaya Psycho-Social Rehabilitation Center in Manjeshwar for ongoing care and recovery.
According to a preliminary report from the Snehalaya team, Hari Chand appeared to be experiencing psychological distress and seemed unaware of his surroundings. He is currently receiving essential mental health care and support services aimed at stabilizing his condition and eventually reuniting him with his family.
If you have any information regarding Hari Chand or his family, please contact Snehalaya Charitable Trust at 9446547033 or 7994087033.
“A small act of kindness can lead to a life-changing transformation for someone like Mr. Hari Chand.”

ಸುರತ್ಕಲ್ ಹೆದ್ದಾರಿಯಲ್ಲಿ ತೊಂದರೆಗೊಳಗಾದ ಶ್ರೀ ಹರಿಚಂದ್ ರವರಿಗೆ ಸ್ನೇಹಾಲಯದ ಶ್ರೀರಕ್ಷೆಯ ಕವಚ
ಮಂಜೇಶ್ವರ, ಆಗಸ್ಟ್ 1, 2025: ಮೂಲ್ಕಿ ಸುರತ್ಕಲ್ ಹೆದ್ದಾರಿಯ ಬಳಿಯಲ್ಲಿ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳೊಂದಿಗೆ ತೀವ್ರ ಅಸ್ತವ್ಯಸ್ತ ಸ್ಥಿತಿಯಲ್ಲಿದ್ದು ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದ 35 ವರ್ಷದ ಹರಿಚಂದ್ ಎಂಬ ವ್ಯಕ್ತಿಯನ್ನು ಸ್ಥಳೀಯ ಉದ್ಯಮಿ ಹಾಗೂ ಸಮಾಜಮುಖಿ ಶ್ರೀ ಕಿರಣ್ ಕಾರ್ಕಳ ಅವರು ಗಮನಿಸಿ ತಕ್ಷಣವೇ ಸ್ನೇಹಾಲಯ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತಾ ಅವರನ್ನು ಸಂಪರ್ಕಿಸಿದರು. ಇದರ ಬಳಿಕ, ಸ್ನೇಹಾಲಯದ ರಕ್ಷಣಾ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ, ಹರಿಚಂದ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಮಂಜೇಶ್ವರದಲ್ಲಿರುವ ಸ್ನೇಹಾಲಯ ಮಾನಸಿಕ ಪುನರ್ವಸತಿ ಕೇಂದ್ರದ ಪುರುಷರ ವಿಭಾಗದಲ್ಲಿ ದಾಖಲಿಸಿದರು.
ಪ್ರಾಥಮಿಕ ತಪಾಸಣೆಯ ನಂತರ ದೊರೆತ ವರದಿಯ ಪ್ರಕಾರ, ಹರಿಚಂದ್ ಅವರು ಮಾನಸಿಕ ಒತ್ತಡದಿಂದ ಬಳಲುತ್ತಿರುವಂತೆ ಕಂಡುಬಂದಿದೆ ಹಾಗೂ ತನ್ನ ಸುತ್ತ ನಡೆಯುತ್ತಿರುವ ವಿಷಯಗಳನ್ನು ಗ್ರಹಿಸದ ಮತ್ತು ಅವುಗಳಿಗೆ ಸ್ಪಂದಿಸದ ಸ್ಥಿತಿಯಲ್ಲಿ ಇದ್ದಾರೆ. ಇದೀಗ, ಸ್ನೇಹಾಲಯದಲ್ಲಿ ಅವರಿಗೆ ಅಗತ್ಯವಿರುವ ಮಾನಸಿಕ ಚಿಕಿತ್ಸೆ, ಹಾಗೂ ಸಮಗ್ರ ಆರೈಕೆಯನ್ನು ನೀಡಲಾಗುತ್ತದೆ. ಶ್ರೀ ಹರಿಚಂದ್ ಅವರನ್ನು ಪುನಃ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು ಅವರ ಕುಟುಂಬದ ಬಗ್ಗೆ ಮಾಹಿತಿ ಇರುವವರು ದಯವಿಟ್ಟು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ 9446547033 ಅಥವಾ 7994087033 ಸಂಖ್ಯೆಯನ್ನು ಸಂಪರ್ಕಿಸಲು ವಿನಂತಿಸಿಕೊಳ್ಳಲಾಗುತ್ತದೆ.
“ನಮ್ಮ ಸಣ್ಣ ಸಹಾಯವು, ಶ್ರೀ ಹರಿಚಂದ್ ಅವರ ಜೀವನದಲ್ಲಿ ಸುಖ ಸಂತೋಷವನ್ನು ಮರಳಿ ತರುವುದರ ಜೊತೆಗೆ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.”
