Manjeshwar, July 30, 2025: The Snehalaya Charitable Trust successfully rescued a 40-year-old woman identified as Sheela from Mangalore Central Railway Station on Wednesday. She has been admitted to the Snehalaya Psycho-Social Rehabilitation Home for Women in Manjeshwar, where she is receiving care and support.
During the rescue, Sheela was found in a distressed state, exhibiting poor personal hygiene and communicating primarily in Hindi. Initial assessments by the Snehalaya team indicate that she may be experiencing psychiatric symptoms, prompting immediate medical attention and counseling at the rehabilitation center.
The Snehalaya team is actively working to trace Sheela’s identity, family, and background to reunite her with her loved ones. The organization appeals to the public for any information that could assist in this effort. If you have details about Sheela or her family, please contact Snehalaya Charitable Trust at 9446547033 or 7994087033.
Snehalaya, founded by Joseph Crasta, has been a beacon of hope for over 16 years, rescuing and rehabilitating destitute individuals across Mangalore and Kasaragod. The organization remains committed to providing medical care, shelter, and rehabilitation to those in need, irrespective of caste, creed, or religion.
Your cooperation in helping reunite Sheela with her family is greatly appreciated.

ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ನಿಂದ ಶೀಲಾ ಎಂಬ ಮಹಿಳೆಯನ್ನು ರಕ್ಷಿಸಿದ ಸ್ನೇಹಾಲಯ ತಂಡ
ಮಂಜೇಶ್ವರ, ಜುಲೈ 30, 2025 – ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ತಂಡವು ಬುಧವಾರ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ನಿಂದ 40 ವರ್ಷದ ಶೀಲಾ ಎಂಬ ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಿತು. ಪ್ರಸ್ತುತಃ ಆಕೆಯನ್ನು ಮಂಜೇಶ್ವರದ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ (ಮಹಿಳೆಯರಿಗಾಗಿ) ದಾಖಲಿಸಲಾಗಿದೆ, ಅಲ್ಲಿ ಆಕೆಗೆ ಆರೈಕೆ ಮತ್ತು ಬೆಂಬಲವನ್ನು ಒದಗಿಸಲಾಗುತ್ತಿದೆ.
ರಕ್ಷಣೆಯ ಸಂದರ್ಭದಲ್ಲಿ, ಶೀಲಾರವರಲ್ಲಿ ವೈಯಕ್ತಿಕ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಅವರು ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ಮಾತುಕತೆ ನಡೆಸುತ್ತಿದ್ದರು. ಸ್ನೇಹಾಲಯ ತಂಡದ ಆರಂಭಿಕ ಮೌಲ್ಯಮಾಪನದಿಂದ ಆಕೆಗೆ ಮಾನಸಿಕ ರೋಗಲಕ್ಷಣಗಳಿರುವ ಸಾಧ್ಯತೆ ಕಂಡುಬಂದಿದ್ದು, ತಕ್ಷಣದ ವೈದ್ಯಕೀಯ ಉಪಚಾರ ಮತ್ತು ಸಮಗ್ರ ಆರೈಕೆಯನ್ನು ಸ್ನೇಹಾಲಯದ ಪುನರ್ವಸತಿ ಕೇಂದ್ರದಲ್ಲಿ ಒದಗಿಸಲಾಗುತ್ತಿದೆ.
ಸ್ನೇಹಾಲಯ ತಂಡವು ಶೀಲಾ ಅವರ ಗುರುತು, ಕುಟುಂಬ ಮತ್ತು ಹಿನ್ನೆಲೆಯನ್ನು ಪತ್ತೆಹಚ್ಚಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ, ಆಕೆಯನ್ನು ಆಕೆಯ ಪ್ರೀತಿಪಾತ್ರರೊಂದಿಗೆ ಮತ್ತೆ ಒಂದುಗೂಡಿಸುವ ಗುರಿಯನ್ನು ಹೊಂದಿದೆ. ಈ ಪ್ರಯತ್ನಕ್ಕೆ ಸಹಾಯವಾಗುವ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಂದ ಒದಗಿಸಲು ಸಂಸ್ಥೆಯು ಮನವಿ ಮಾಡಿದೆ. ಶೀಲಾ ಅಥವಾ ಆಕೆಯ ಕುಟುಂಬದ ಬಗ್ಗೆ ಯಾವುದೇ ವಿವರಗಳಿದ್ದರೆ, ದಯವಿಟ್ಟು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನನ್ನು 9446547033 ಅಥವಾ 7994087033 ಸಂಖ್ಯೆಯಲ್ಲಿ ಸಂಪರ್ಕಿಸಿ.
ಜೋಸೆಫ್ ಕ್ರಾಸ್ಟಾ ಅವರಿಂದ ಸ್ಥಾಪಿತವಾದ ಸ್ನೇಹಾಲಯವು ಕಳೆದ 16 ವರ್ಷಗಳಿಂದ ಭಾರತದಾದ್ಯಂತ ಮತ್ತು ವಿಷೇಶವಾಗಿ ಮಂಗಳೂರು ಮತ್ತು ಕಾಸರಗೋಡಿನಾದ್ಯಂತ ನಿರಾಶ್ರಿತರನ್ನು ರಕ್ಷಿಸಿ, ಪುನರ್ವಸತಿ ಮಾಡುತ್ತಿದೆ. ಜಾತಿ, ಧರ್ಮ ಅಥವಾ ಕುಲವನ್ನು ಲೆಕ್ಕಿಸದೆ, ಅಗತ್ಯವಿರುವವರಿಗೆ ವೈದ್ಯಕೀಯ ಆರೈಕೆ, ಆಶ್ರಯ ಮತ್ತು ಪುನರ್ವಸತಿಯನ್ನು ಒದಗಿಸುವಲ್ಲಿ ಸಂಸ್ಥೆಯು ಬದ್ಧವಾಗಿದೆ.
ಶೀಲಾರಂತಹ ಅನೇಕ ಅಸಾಹಾಯಕರನ್ನು ರಕ್ಷಿಸಿ ಅವರ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ನಿಮ್ಮ ಸಹಕಾರವು ಸಹಾ ಬಹಳ ಅಗತ್ಯವಾಗಿದೆ.
