Manjeshwar, July 8, 2025: Mr. Pallab Bhowmik was found wandering in a state of mental distress on the streets of Suratkal. Kiran, a resident of Karkala, noticed him and immediately informed Br. Joseph Crasta, the founder of Snehalaya.
Acting promptly on this information, the Snehalaya Psycho-Social Rehabilitation team reached the spot, rescued Mr. Pallab Bhowmik, and admitted him to the Snehalaya Rehabilitation Centre in Manjeshwar on 08/07/2025.
During the rescue, Mr. Pallab Bhowmik was observed to be mentally disturbed and unable to communicate clearly. Initial medical and psychiatric assessments are underway to understand his condition better. He has been provided with psychiatric treatment, counselling, and safe shelter at the Snehalaya Rehabilitation Centre.
Snehalaya has appealed to the public to come forward with any information regarding his family. Their cooperation is crucial to reunite Mr. Pallab Bhowmik with his loved ones.
Contact:
📞 94465 47033 / 79940 87033
This incident highlights the urgent need for compassion and support for mentally ill and distressed individuals living on the streets.

ಸುರತ್ಕಲ್ ರಸ್ತೆಯಲ್ಲಿ ತೊಂದರೆ ಅನುಭವಿಸುತ್ತಿದ್ದ ಪಲ್ಲಬ್ ಭೌಮಿಕ್ ಗೆ ಆಶ್ರಯ ನೀಡಿದ ಸ್ನೇಹಾಲಯ
ಮಂಜೇಶ್ವರ, ಜುಲೈ 8, 2025: ಶ್ರೀ ಪಲ್ಲಬ್ ಭೌಮಿಕ್ ಸುರತ್ಕಲ್ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥತೆಯ ಸ್ಥಿತಿಯಲ್ಲಿ ಅಲೆದಾಡುತ್ತಿರುವುದನ್ನು ಕಂಡ ಕಾರ್ಕಳದ ನಿವಾಸಿ ಕಿರಣ್ ರವರು ಇದನ್ನು ಗಮನಿಸಿ, ಸ್ನೇಹಾಲಯದ ಸ್ಥಾಪಕರಾದ ಬ್ರ. ಜೋಸೆಫ್ ಕ್ರಾಸ್ತಾ ರವರಿಗೆ ತಕ್ಷಣ ಮಾಹಿತಿ ನೀಡಿದರು.
ಈ ಮಾಹಿತಿಯನ್ನು ಪಡೆದ ಸ್ನೇಹಾಲಯದ ತಂಡವು ತಕ್ಷಣ ಸ್ಥಳಕ್ಕೆ ಧಾವಿಸಿ, ಶ್ರೀ ಪಲ್ಲಬ್ ಭೌಮಿಕ್ ರವರನ್ನು ರಕ್ಷಿಸಿ, ಮಂಜೇಶ್ವರದಲ್ಲಿರುವ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದ ಪುರುಷರ ವಿಭಾಗಕ್ಕೆ ದಾಖಲಿಸಲಾಯಿತು.
ರಕ್ಷಣೆ ವೇಳೆ, ಶ್ರೀ ಪಲ್ಲಬ್ ಭೌಮಿಕ್ ರವರು ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿದ್ದು, ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಕಂಡುಬಂತು. ಅವರ ಆರೋಗ್ಯ ಸ್ಥಿತಿಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ವೈದ್ಯಕೀಯ ಮತ್ತು ಮನೋವೈದ್ಯಕೀಯ ಕಾರ್ಯವು ನಡೆಯುತ್ತಿದೆ. ಸ್ನೇಹಾಲಯ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ, ಸಲಹಾ ಸೇವೆ ಹಾಗೂ ಸುರಕ್ಷಿತ ಆಶ್ರಯ ಒದಗಿಸಲಾಗುತಿದೆ.
ಪಲ್ಲಬ್ ಭೌಮಿಕ್ ರವರ ಕುಟುಂಬದ ಬಗ್ಗೆ ಮಾಹಿತಿ ಇರುವವರು ಮುಂದೆ ಬಂದು ಸಹಕರಿಸಬೇಕೆಂದು ಸ್ನೇಹಾಲಯ ವಿನಂತಿಸಿದೆ. ಅವರ ಕುಟುಂಬದೊಂದಿಗೆ ಪುನರ್ಮಿಲನ ಮಾಡಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ.
ಸಂಪರ್ಕಿಸಿ:
📞 94465 47033 / 79940 87033
ರಸ್ತೆಗಳಲ್ಲಿ ತೊಂದರೆ ಅನುಭವಿಸುತ್ತಿರುವ ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗೆ ಸಹಾನುಭೂತಿ ಮತ್ತು ಬೆಂಬಲ ನೀಡುವ ಅಗತ್ಯವನ್ನು ಈ ಘಟನೆ ಮತ್ತೆ ನೆನಪಿಸುತ್ತದೆ.
