Manjeshwar, 10-07-2025 : A 65-year-old woman named Asha was rescued from the streets of Bejai, Mangalore, by the Snehalaya team after being informed by Ms. Likitha, Mangalore. She has since been placed under the care of the Snehalaya Psycho-Social Rehabilitation Home for Women, where she is receiving support and medical attention.
Upon her rescue, Asha appeared to be in poor physical condition with poor personal hygiene and was primarily communicating in Tulu and Kannada. Early assessments indicate that she may be experiencing psychiatric symptoms.
We urgently seek the public’s assistance in gathering any information regarding Asha’s identity, family, or background. If you have any details that could help reunite her with her loved ones, please contact us immediately at 9446547033 or 7994087033.
Your cooperation is crucial in helping Asha reconnect with her family. Any information, no matter how small, could make a difference.

ನಿರಾಶ್ರಿತ ಆಶಾರವರ ಬಾಳಿನಲ್ಲಿ ಆಶಾಕಿರಣವಾದ ಸ್ನೇಹಾಲಯ .
ಮಂಜೇಶ್ವರ, 10-07-2025 : ಮಂಗಳೂರಿನ ಶ್ರೀಮತಿ ಲಿಕಿತಾ ಅವರಿಂದ ಪಡೆದ ಮಾಹಿತಿ ಮೇರೆಗೆ ಸ್ನೇಹಾಲಯ ರಕ್ಷಣಾ ತಂಡವು 65 ವರ್ಷದ ಶ್ರೀಮತಿ ಆಶಾ ಎಂಬ ಮಹಿಳೆಯನ್ನು ಮಂಗಳೂರಿನ ಬಿಜೈಯ ರಸ್ತೆ ಬದಿಯಿಂದ ರಕ್ಷಿಸಿತು. ಪ್ರಸ್ತುತ ಆಕೆಯನ್ನು ಈಗ ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಗೃಹದ ಮಹಿಳೆಯರ ವಿಭಾಗದಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಆಕೆಗೆ ಅಗತ್ಯವಿರುವ ಬೆಂಬಲ ಮತ್ತು ಸಂಪೂರ್ಣ ವೈದ್ಯಕೀಯ ಗಮನ ನೀಡಲಾಗುತ್ತಿದೆ.
ರಕ್ಷಣೆಯ ಸಮಯದಲ್ಲಿ, ಆಶಾ ದೈಹಿಕವಾಗಿ ದುರ್ಬಲ ಸ್ಥಿತಿಯಲ್ಲಿದ್ದರು ಹಾಗೂ ವೈಯಕ್ತಿಕ ಸ್ವಚ್ಛತೆಯ ಕೊರತೆಯಿಂದ ಬಳಲುತ್ತಿದ್ದರು. ಶ್ರೀಮತಿ ಆಶಾರವರು ಮುಖ್ಯವಾಗಿ ತುಳು ಮತ್ತು ಕನ್ನಡದಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಆರಂಭಿಕ ಮೌಲ್ಯಮಾಪನವು ಆಕೆಗೆ ಮಾನಸಿಕ ರೋಗಲಕ್ಷಣಗಳಿರಬಹುದು ಎಂದು ಸೂಚಿಸುತ್ತದೆ.
ಶ್ರೀಮತಿ ಆಶಾ ಅವರ ಯಾವುದಾದರೂ ಸುಳಿವು, ಗುರುತು ಅಥವಾ ಕುಟುಂಬದ ಹಿನ್ನೆಲೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯಲು ನಾವು ಸಾರ್ವಜನಿಕರ ಸಹಾಯವನ್ನು ತುರ್ತಾಗಿ ಕೋರುತ್ತೇವೆ. ಆಕೆಯನ್ನು ಆಕೆಯ ಪ್ರೀತಿಪಾತ್ರರೊಂದಿಗೆ ಮತ್ತೆ ಒಂದುಗೂಡಿಸಲು ಸಹಾಯವಾಗುವ ಯಾವುದೇ ವಿವರಗಳಿದ್ದರೆ, ದಯವಿಟ್ಟು ತಕ್ಷಣವೇ 9446547033 ಅಥವಾ 7994087033 ಸಂಖ್ಯೆಗಳಲ್ಲಿ ನಮ್ಮನ್ನು ಸಂಪರ್ಕಿಸಿ.
ಆಶಾ ಅವರನ್ನು ಆಕೆಯ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ನಿಮ್ಮ ಸಹಕಾರವು ಬಹಳ ಮುಖ್ಯವಾಗಿದೆ. ನಿಮ್ಮ ಸಹಾಯ, ಸೇವೆ ಎಷ್ಟೇ ಸಣ್ಣದಾದರೂ ಆಶಾರವರ ಬದುಕಿನಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರಬಹುದು.
