Manjeshwar, 08/07/2025: A 52-year-old man named Kayyum was rescued by the Snehalaya team from Padubidre Street in Mangalore. He is originally from Saharanpur, Uttar Pradesh, and is a Hindi speaker. businessman Kiran Kumar from Karkala, helped bring him to safety.
When Kayyum was found, he was in poor hygiene, dressed in shabby clothes, speaking incoherently, muttering to himself, smiling inappropriately, and socially withdrawn. The initial assessment indicates that he is experiencing mental health issues.
Mr.Kiran Kumar informed the authorities about Kayyum’s condition, and efforts are now underway to reunite him with his family.
If anyone has any information about Kayyum’s family or background, please contact the relevant authorities:
📞 9446547033 or 7994087033

ಕಯ್ಯೂಂ ಅವರ ಬಾಳಿಗೆ ದಾರಿದೀಪವಾದ ಸ್ನೇಹಾಲಯ.
ಮಂಜೇಶ್ವರ, 08/07/2025 ರಂದು ಮಂಗಳೂರಿನ ಪಡುಬಿದ್ರೆ ಬೀದಿಯಲ್ಲಿ 52 ವರ್ಷದ ಕಯ್ಯೂಂ ಎಂಬ ವ್ಯಕ್ತಿಯನ್ನು ಸ್ನೇಹಾಲಯ ತಂಡ ರಕ್ಷಿಸಿದೆ. ಅವರು ಉತ್ತರ ಪ್ರದೇಶದ ಸಾರಂಗ್ ಪುರದವರಾಗಿದ್ದು, ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಕಾರ್ಕಳದ ಕಿರಣ್ ಕುಮಾರ್ ಎಂಬ ಸಹೃದಯಿ ಸಾರ್ವಜನಿಕರು ಕಯ್ಯೂಂ ಅವರನ್ನು ಸ್ನೇಹಾಲಯಕ್ಕೆ ಕರೆ ತರಲು ಸಹಾಯ ಮಾಡಿದ್ದಾರೆ.
ಕಯ್ಯೂಂ ಅವರನ್ನು ಪತ್ತೆಹಚ್ಚಿದಾಗ ಅವರು ಸ್ವಚ್ಛತೆಯ ಕೊರತೆಯಲ್ಲಿದ್ದು, ಹರಿದ ಉಡುಪಿನಲ್ಲಿ, ಗೊಂದಲದಿಂದ ತಮ್ಮೊಳಗೆ ಮಾತಾಡಿಕೊಂಡು, ತನ್ನಷ್ಟಕ್ಕೆ ನಗುತ್ತಾ ಗೊಂದಲದ ಸ್ಥಿತಿಯಲ್ಲಿ ಇದ್ದರು. ಆರಂಭಿಕ ತಪಾಸಣೆಯಲ್ಲಿ ಅವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯ ಲಕ್ಷಣಗಳು ಕಂಡುಬಂದಿವೆ.
ಕಯ್ಯೂಂ ಅವರನ್ನು ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ಪ್ರಯತ್ನಗಳು ನಡೆಯುತ್ತಿವೆ. ಅವರ ಕುಟುಂಬ ಅಥವಾ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿ ಇದ್ದರೆ ದಯವಿಟ್ಟು ಕೆಳಗಿನ ಸಂಖ್ಯೆಗಳಿಗೆ ಸಂಪರ್ಕಿಸಿ:
📞 9446547033 ಅಥವಾ 7994087033
ನಿಮ್ಮ ಸಹಾಯ ಎಷ್ಟೇ ಸಣ್ಣದಾದರೂ ಅದು ಕಯ್ಯೂಂ ಅವರ ಬಾಳಿನಲ್ಲಿ ಒಂದು ಆಶಾಕಿರಣವಾಗಬಹುದು.
