Snehalaya and Shraddha Foundation Reunite Missing Woman with Family After 17 Months

/

Manjeshwar | June 17, 2025 — After being missing for nearly 1 year and 5 months, 42-year-old Sairabanu was finally reunited with her two brothers in a deeply emotional homecoming filled with tears, joy, and relief. She was rescued on April 15, 2025, by the Snehalaya Charitable Trust team near Manjeswar, Kasaragod. Sairabanu had been battling mental illness for over five years, worsened by the tragic loss of her parents and sister. Grief-stricken and delusional, she believed her late parents were still alive at a dargah and left home searching for them — never to return.
Following three months of psychiatric care and rehabilitation at Snehalaya, she began to recover and was transferred to Shraddha Foundation for further support. On June 17, she was joyfully reunited with her family in Gomtipur, Ahmedabad.
Her brothers, moved to tears, welcomed her back with open hearts. The local community also responded warmly, celebrating her return.
Sairabanu’s story is a powerful reminder of how love, mental health support, and timely intervention can bring someone back from the shadows of despair.

snehalaya-sairabanu-reunion-01july2025-02 snehalaya-sairabanu-reunion-01july2025-03 snehalaya-sairabanu-reunion-01july2025-04 snehalaya-sairabanu-reunion-01july2025-05

ಸೈರಾಬಾನು ಅವರ ಸಂತೋಷದ ಪುನರ್ಮಿಲನ

ಮಂಜೇಶ್ವರ | ಜೂನ್ 17, 2025 — ಸುಮಾರು 1 ವರ್ಷ ಮತ್ತು 5 ತಿಂಗಳುಗಳ ತನಕ ಕಾಣೆಯಾಗಿದ್ದ 42 ವರ್ಷದ ಸೈರಾಬಾನು ತನ್ನ ಇಬ್ಬರು ಸಹೋದರರೊಂದಿಗೆ ಕೊನೆಗೂ ಒಂದಾದರು. ಇದು ಕಣ್ಣೀರು, ಸಂತೋಷ ಮತ್ತು ಭಾವುಕತೆಯಿಂದ ಕೂಡಿದ ಭಾವನಾತ್ಮಕ ಪುನರ್ಮಿಲನವಾಗಿತ್ತು.

ಏಪ್ರಿಲ್ 15, 2025 ರಂದು ಕಾಸರಗೋಡಿನ ಮಂಜೇಶ್ವರದ ಬಳಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟಿನ ರಕ್ಷಣಾ ತಂಡವು ಆಕೆಯನ್ನು ರಕ್ಷಿಸಿತು. ಸೈರಾಬಾನು ಕಳೆದ ಐದು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಡುತ್ತಿದ್ದರು. ತನ್ನ ತಂದೆ-ತಾಯಿ ಮತ್ತು ಸಹೋದರಿಯ ದುರಂತ ಸಾವಿನಿಂದ ಆಕೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿತು. ದುಃಖದಿಂದ ಕೂಡಿದ ಮತ್ತು ಭ್ರಮೆಯ ಸ್ಥಿತಿಯಲ್ಲಿ, ತನ್ನ ತಂದೆ-ತಾಯಿ ಇನ್ನೂ ದರ್ಗಾದಲ್ಲಿ ಜೀವಂತವಾಗಿದ್ದಾರೆಂದು ಭಾವಿಸಿ, ಆಕೆ ಅವರನ್ನು ಹುಡುಕಲು ಮನೆಯಿಂದ ಹೊರಟವರು ಮರಳಿ ಬರಲಿಲ್ಲ.

ಸ್ನೇಹಾಲಯದಲ್ಲಿ ಮೂರು ತಿಂಗಳ ಮಾನಸಿಕ ಚಿಕಿತ್ಸೆ ಮತ್ತು ಪುನರ್ವಸತಿಯ ನಂತರ, ಆಕೆ ಚೇತರಿಸಿಕೊಳ್ಳಲು ಆರಂಭಿಸಿದಳು ಮತ್ತು ಮುಂದಿನ ಪುನರ್ಮಿಲನ ಪ್ರಕ್ರಿಯೆ ಹಾಗೂ ಬೆಂಬಲಕ್ಕಾಗಿ ಆಕೆಯನ್ನು ಶ್ರದ್ಧಾ ಫೌಂಡೇಶನ್‌ಗೆ ವರ್ಗಾಯಿಸಲಾಯಿತು ಜೂನ್ 17 ರಂದು, ಆಕೆಯನ್ನು ಅಹಮದಾಬಾದ್‌ನ ಗೊಮ್ಟಿಪುರದಲ್ಲಿ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಒಂದುಗೂಡಿಸಲಾಯಿತು. ಆಕೆಯ ಸಹೋದರರು ಕಣ್ಣೀರಿನೊಂದಿಗೆ ತೆರೆದ ಹೃದಯದಿಂದ ಆಕೆಯನ್ನು ಸ್ವಾಗತಿಸಿದರು. ಸ್ಥಳೀಯ ಸಮುದಾಯವೂ ಆಕೆಯ ಮರಳುವಿಕೆಯನ್ನು ಉತ್ಸಾಹದಿಂದ ಸಂಭ್ರಮಿಸಿತು.

ಸೈರಾಬಾನು ಅವರ ಕಥೆಯು ಪ್ರೀತಿ, ಮಾನಸಿಕ ಆರೋಗ್ಯ, ಬೆಂಬಲ ಮತ್ತು ಸಕಾಲಿಕ ಮಧ್ಯಸ್ಥಿಕೆಯು ಒಬ್ಬ ವ್ಯಕ್ತಿಯನ್ನು ದಿಗ್ಭ್ರಾಂತಿಯ ಕತ್ತಲೆಯಿಂದ ಜೀವನದ ಆಶಾಕಿರಣದತ್ತ ಕೊಂಡೊಯ್ಯಬಲ್ಲದು ಎಂಬುದರ ಒಂದು ಜ್ವಲಂತ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

Need Help?