Manjeshwar: In a deeply emotional moment, 25-year-old Ismail Khan was reunited with his father on June 1, 2025, in Surya Nagar, Islampura, near Noorani Masjid, Vikhroli, Maharashtra. Missing for four months, Ismail’s return has brought immense relief and joy to his struggling family.
Ismail had been battling severe mental illness for over 15 years. The grief of losing his mother during the COVID-19 pandemic and the family’s ongoing financial hardship had only deepened the cracks. He has a younger brother, and together they’ve faced years of quiet suffering.
On February 25, 2025, concerned citizens alerted authorities about a disoriented man wandering the streets. The Manjeshwar Police responded with empathy and urgency, rescuing Ismail and admitting him to Snehalaya Charitable Trust. There, he received two months of essential medication and counseling.
Later, Ismail was transferred to Shraddha Foundation, where efforts were made to locate his family and facilitate his recovery. With love, patience, and professional care, the Trust guided Ismail toward healing and home.
His return stands as a powerful testament to the compassion and commitment of Snehalaya and Shraddha Foundation, who work tirelessly to restore dignity and reunite lost souls with their families.

“ಮೌನದ ನಾಲ್ಕು ತಿಂಗಳ ಕಥೆಗೆ ಸುಖಾಂತ:
ಮಗನ ಮರಳುವಿಕೆಯ ಹೃದಯಸ್ಪರ್ಶಿ ಕ್ಷಣ!”
ಮಂಜೇಶ್ವರ: ಜೂನ್ 1, 2025 ರಂದು ಮಹಾರಾಷ್ಟ್ರದ ವಿಖ್ರೋಲಿಯ ಸೂರ್ಯ ನಗರ, ಇಸ್ಲಾಂಪುರದ ನೂರಾನಿ ಮಸೀದಿ ಸಮೀಪದಲ್ಲಿ 25 ವರ್ಷದ ಇಸ್ಮಾಯಿಲ್ ಖಾನ್ ತನ್ನ ತಂದೆಯೊಂದಿಗೆ ಅತ್ಯಂತ ಸಂತೋಷದಿಂದ ಪುನರ್ಮಿಲನಗೊಂಡರು. ನಾಲ್ಕು ತಿಂಗಳ ಕಾಲ ಕಾಣೆಯಾಗಿದ್ದ ಇಸ್ಮಾಯಿಲ್ನ ಮರಳುವಿಕೆಯು ಅವನ ಕಷ್ಟದಾಯಕ ಕುಟುಂಬಕ್ಕೆ ಅಪಾರ ಸಂತಸ ಮತ್ತು ಶಾಂತಿಯನ್ನು ತಂದಿತು.
ಇಸ್ಮಾಯಿಲ್ ಕಳೆದ 15 ವರ್ಷಗಳಿಂದ ತೀವ್ರವಾದ ಮಾನಸಿಕ ಖಾಯಿಲೆಯೊಂದಿಗೆ ಹೋರಾಡುತ್ತಿದ್ದ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖ ಮತ್ತು ಕುಟುಂಬದ ನಿರಂತರ ಆರ್ಥಿಕ ಕಷ್ಟಗಳು ಈ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿದ್ದವು. ಇಸ್ಮಾಯಿಲನಿಗೆ ಒಬ್ಬ ಕಿರಿಯ ಸಹೋದರನಿದ್ದಾನೆ, ಕಳೆದ ಆರು ವರ್ಷಗಳಿಂದ ಇಡೀ ಕುಟುಂಬ ಮೌನವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರು.
ಫೆಬ್ರವರಿ 25, 2025 ರಂದು, ಸಾಮಾಜಿಕ ಕಾಳಜಿಯುಳ್ಳ ಕೆಲವು ನಾಗರಿಕರು ದಿಕ್ಕುತಪ್ಪಿ ಬೀದಿಗಳಲ್ಲಿ ಅಲೆಯುತ್ತಿದ್ದ ಒಬ್ಬ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಮಂಜೇಶ್ವರ ಪೊಲೀಸರು ಸಹಾನುಭೂತಿಯಿಂದ ತುರ್ತಾಗಿ ಸ್ಪಂದಿಸಿ, ಇಸ್ಮಾಯಿಲ್ನನ್ನು ರಕ್ಷಿಸಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ಗೆ ದಾಖಲಿಸಿದರು. ಅಲ್ಲಿ ಅವನಿಗೆ ಎರಡು ತಿಂಗಳ ಕಾಲ ಅಗತ್ಯ ಔಷಧ ಮತ್ತು ಸಮಾಲೋಚನೆಯನ್ನು ಒದಗಿಸಲಾಯಿತು. ನಂತರ, ಇಸ್ಮಾಯಿಲ್ನನ್ನು ಶ್ರದ್ಧಾ ಫೌಂಡೇಶನ್ಗೆ ವರ್ಗಾಯಿಸಲಾಯಿತು, ಅಲ್ಲಿ ಅವನ ಕುಟುಂಬವನ್ನು ಪತ್ತೆಹಚ್ಚಲು ಮತ್ತು ಅವನ ಚೇತರಿಕೆಗೆ ಸಹಾಯ ಮಾಡಲು ಪ್ರಯತ್ನಗಳು ನಡೆದವು. ಪ್ರೀತಿ, ತಾಳ್ಮೆ ಮತ್ತು ವೃತ್ತಿಪರ ಕಾಳಜಿಯೊಂದಿಗೆ, ಟ್ರಸ್ಟ್ ಇಸ್ಮಾಯಿಲ್ನನ್ನು ಗುಣಮುಖನಾಗಿ ಮನೆಗೆ ಮರಳಲು ಮಾರ್ಗದರ್ಶನ ಮಾಡಿತು.
ಅವನ ಮರಳುವಿಕೆಯು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ನ ಕರುಣೆ ಮತ್ತು ಬದ್ಧತೆಗೆ ಶಕ್ತಿಯುತ ಸಾಕ್ಷಿಯಾಗಿದೆ, ಈ ಸಂಸ್ಥೆಗಳು ಕಳೆದ ಅನೇಕ ವರ್ಷಗಳಿಂದ ಕಳೆದುಹೋದ ಜೀವಗಳನ್ನು ಪತ್ತೆ ಹಚ್ಚಿ ಸಮಾಜದಲ್ಲಿ ಪುನರ್ಸ್ಥಾಪಿಸಲು ಮತ್ತು ಅವರನ್ನು ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ಅವಿರತವಾಗಿ ಕೆಲಸ ಮಾಡುತ್ತಾರೆ.
