Manjeshwar, May 31, 2025 – In a quiet act of humanity, a woman identified only as Sathni, believed to be around 35 years old, was found wandering in a disoriented state near Mudipu by the Konaje Police. Disheveled and confused, Sathni showed signs of extreme distress, poor personal hygiene, and communicated solely in Hindi, making it difficult to determine her origins or the circumstances that led her there.
Recognizing her need for immediate care, the police ensured she was safely admitted to Snehalaya Psycho-Social Rehabilitation Home for Women a sanctuary for those in psychological and emotional turmoil. Early evaluations suggest that Sathni may be experiencing significant psychiatric challenges, and she is currently receiving compassionate treatment and support at the facility.
Yet, while she is now safe, Sathni remains a mystery.
Snehalaya and the local authorities are urgently appealing to the public for any information that could help trace her identity or reconnect her with her family. Every small clue a name, a photograph, a shared memory — could bring her one step closer to home.
If you recognize Sathni or have any information that could help, please reach out to: 9446547033 or 7994087033
Every life has a story. Let’s help Sathni find hers again.
“ಸತ್ನಿಯ ಬದುಕಲ್ಲಿ ಬೆಳಗಿದ ಆಶಾದೀಪ”
ಮುಡಿಪು ಬಳಿ ರಕ್ಷಣೆಗೊಳಗಾದ ಮಹಿಳೆಗೆ ಸ್ನೇಹಾಲಯದಲ್ಲಿ ಆಶ್ರಯ
ಮಂಜೇಶ್ವರ, ಮೇ 31, 2025 – ಪರೋಪಕಾರದ ಇನ್ನೊಂದು ಮಾನವೀಯ ಕಾರ್ಯದಲ್ಲಿ, ಸತ್ನಿ ಎಂದು ಗುರುತಿಸಲ್ಪಟ್ಟ, ಸುಮಾರು 35 ವರ್ಷ ವಯಸ್ಸಿನ ಮಹಿಳೆಯೊಬ್ಬಳು ಮುಡಿಪು ಬಳಿಯಲ್ಲಿ ಗೊಂದಲದ ಸ್ಥಿತಿಯಲ್ಲಿ ಅಲೆದಾಡುತ್ತಿರುವುದನ್ನು ಕಂಡು ಕೊಣಾಜೆ ಇಲಾಕೆಯ ಪೊಲೀಸರು ಅವಳನ್ನು ತಕ್ಷಣ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಗೃಹಕ್ಕೆ ಕರೆದೊಯ್ದರು. ಪತ್ತೆಯಾದ ಸಮಯದಲ್ಲಿ ಶಾರೀರಿಕ ನೈರ್ಮಲ್ಯದ ಕೊರತೆಯ ಜೊತೆಗೆ ಗೊಂದಲದ ಸ್ಥಿತಿಯಲ್ಲಿದ್ದ ಸತ್ನಿ, ತೀವ್ರವಾದ ಮಾನಸಿಕ ಒತ್ತಡದ ಚಿಹ್ನೆಗಳನ್ನು ಪ್ರದರ್ಶಿಸುತ್ತಿದ್ದಳು ಮತ್ತು ಕೇವಲ ಹಿಂದಿಯಲ್ಲಿ ಮಾತನಾಡುತ್ತಿದ್ದಳು, ಇದರಿಂದ ಅವಳ ಮೂಲಸ್ಥಾನ ಮತ್ತು ಅವಳನ್ನು ಆ ಸ್ಥಿತಿಗೆ ತಂದ ಕಾರಣಗಳನ್ನು ಗುರುತಿಸುವುದು ಕಷ್ಟವಾಯಿತು. ಪ್ರಸ್ತುತಃ ಅವಳನ್ನು ಅಗತ್ಯದ ಚಿಕಿತ್ಸೆ ಮತ್ತು ಆರೈಕೆಗಾಗಿ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದ ಮಹಿಳೆಯರ ವಿಭಾಗದಲ್ಲಿ ದಾಖಲಿಸಲಾಗಿದೆ. ಕಳೆದ ಹದಿನಾರು ವರ್ಷಗಳಿಂದ ಮಂಜೇಶ್ವರದ ಸ್ನೇಹಾಲಯ, ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ತೊಂದರೆಯಲ್ಲಿರುವವರಿಗೆ ಒಂದು ಆಶ್ರಯಸ್ಥಾನವಾಗಿದೆ.
ಆರಂಭಿಕ ಮೌಲ್ಯಮಾಪನಗಳು ಸತ್ನಿಯು ಗಂಭೀರವಾದ ಮಾನಸಿಕ ಒತ್ತಡ ಮತ್ತು ಆತಂಕವನ್ನು ಎದುರಿಸುತ್ತಿರಬಹುದು ಎಂದು ಸೂಚಿಸುತ್ತವೆ. ಪ್ರಸ್ತುತಃ ಆಕೆ ಸ್ನೇಹಾಲಯದಲ್ಲಿ ಸಮಗ್ರ ವೈದ್ಯಕೀಯ ಚಿಕಿತ್ಸೆ, ಪ್ರೀತಿಯ ಆರೈಕೆ ಚಿಕಿತ್ಸೆ ಮತ್ತು ಮಾನಸಿಕ ಬೆಂಬಲದ ಸಂರಕ್ಷಣೆಯಲ್ಲಿ ಚೇತರಿಕೆ ಪಡೆಯುತ್ತಿದ್ದಾಳೆ.
ಸದ್ಯಕ್ಕೆ ಸತ್ನಿ ಸುರಕ್ಷಿತವಾಗಿದ್ದರೂ, ಆಕೆಯ ಗುರುತು ಮತು ನೆಲೆ ಇನ್ನೂ ಒಂದು ರಹಸ್ಯವಾಗಿಯೇ ಉಳಿದಿದೆ. ಸ್ನೇಹಾಲಯದ ನುರಿತ ಸಿಬ್ಬಂದಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಸತ್ನಿಯ ಗುರುತನ್ನು ಕಂಡುಹಿಡಿಯಲು ಅಥವಾ ಅವಳನ್ನು ಆಕೆಯ ಕುಟುಂಬದೊಂದಿಗೆ ಮತ್ತೆ ಒಂದುಗೂಡಿಸಲು ಸಕಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತದೆ ಏನೆಂದರೆ ಸತ್ನಿಗೆ ಸಹಾಯ ಮಾಡಬಹುದಾದ ಯಾವುದೇ ಸುಳಿವು ಇದ್ದಲ್ಲಿ ಅಥವಾ ಸತ್ನಿಯನ್ನು ಗುರುತಿಸುವ ಅಥವಾ ಸಹಾಯ ಮಾಡಬಹುದಾದ ಮಾಹಿತಿ ಇದ್ದರೆ, ದಯವಿಟ್ಟು 9446547033 ಅಥವಾ 7994087033 ಕ್ಕೆ ಸಂಪರ್ಕಿಸಿ: ನಿಮ್ಮ ಸತ್ನಿಯನ್ನು ಪುನ ಮನೆ ಸೇರಿಸಲು ನಿಮ್ಮ ಸಹಾಯ ಅಗತ್ಯವಾಗಿದೆ.