May 16, 2025 Snehalaya, with the help of Mumbai’s Shraddha Foundation, reunited a young man named Shabhan, whose real name is Acchavair, with his family after he was separated due to mental illness. Acchavair, a farmer by profession, had been receiving treatment for his mental condition for the past ten years. Three years ago, he suddenly disappeared from home. His family searched for him extensively but couldn’t find him, leading them to fear he might have passed away.
On September 24, 2024, Acchavair was brought to Snehalaya by taxi drivers Suchindra, Anil, Krishna Prasad, and Naveen. At the facility, he received proper treatment, responded well, and recovered quickly. After tracing his address, they discovered he was the son of Jagali from Nabula Naurania in Saur Khurd, Kushinagar, Uttar Pradesh. Snehalaya contacted his brother and, with the support of Shraddha Foundation, successfully reunited him with his family.
The reunion was an emotional moment, with family members shedding tears of joy. They expressed heartfelt gratitude to Snehalaya for bringing Acchavair back. The villagers also shared their happiness over his return. Snehalaya has reunited many people with their families, and on this occasion, the organization acknowledges and thanks all those who support its efforts.
ಮೇ 16, 2025 ಮಾನಸಿಕ ಅಸ್ವಸ್ಥತೆಯ ಕಾರಣ ಕುಟುಂಬದಿಂದ ದೂರವಾಗಿದ್ದ ಶಭನ ಎಂಬ ಯುವಕನನ್ನು ಸ್ನೇಹಾಲಯವು ಮುಂಬೈಯ ಶ್ರದ್ಧಾ ಫೌಂಡೇಶನ್ ನ ಮುಖಾಂತರ ತನ್ನ ಕುಟುಂಬದೊಂದಿಗೆ ಮರುವಿಲೀನಗೊಳಿಸಿದೆ.
ಶಭನ ಈತನ ನಿಜವಾದ ಹೆಸರು ಅಚ್ಚವೈರ್. ಈತ ಮಾನಸಿಕ ಅಸ್ವಸ್ಥನಾಗಿದ್ದು ಕಳೆದ ಹತ್ತು ವರ್ಷಗಳಿಂದ ತನ್ನ ಅಸ್ವಸ್ಥತೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದ. ವೃತ್ತಿಯಲ್ಲಿ ಕೃಷಿಕನಾಗಿದ್ದ ಈತ ಮೂರು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದ. ಕುಟುಂಬ ಸದಸ್ಯರು ಈತನನ್ನು ಸಾಕಷ್ಟು ಕಡೆಗಳಲ್ಲಿ ಹುಡುಕಿದರು ಇವನು ಪತ್ತೆ ಆಗಿರಲಿಲ್ಲ. ಹಾಗಾಗಿ ಅವರೆಲ್ಲರೂ ಈತ ಮರಣ ಹೊಂದಿರಬಹುದು ಎಂದೇ ಶಂಕಿಸಿದ್ದರು.
2024ರ ಸೆಪ್ಟೆಂಬರ್ 24ರಂದು ಅಚ್ಚವೈರ್ ಅವರನ್ನು ಟ್ಯಾಕ್ಸಿ ಚಾಲಕರಾದ ಸುಚೀಂದ್ರ, ಅನಿಲ್, ಕೃಷ್ಣ ಪ್ರಸಾದ್ ಮತ್ತು ನವೀನ್ ಸ್ನೇಹಾಲಯಕ್ಕೆ ತಂದರು. ಅಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಅವರು ಚಿಕಿತ್ಸೆಗೂ ಸ್ಪಂದಿಸಿ ಶೀಘ್ರದಲ್ಲೇ ಚೇತರಿಸಿಕೊಂಡರು. ನಂತರ ವಿಳಾಸವನ್ನು ಪತ್ತೆ ಹಚ್ಚಿದಾಗ ಇವನು ಉತ್ತರ ಪ್ರದೇಶದ ಕುಶಿನಗರ ಸೌರ ಖುರ್ಡ್ ನ ನಬುಲ ನೌರಾನಿಯಾದ ಜಗಲಿ ಎಂಬುವವರ ಮಗನೆಂದು ತಿಳಿಯಿತು. ಸ್ನೇಹಾಲಯವು ತನ್ನ ಸಿಬ್ಬಂದಿಗಳ ಮೂಲಕ ಅವನ ಸಹೋದರನನ್ನು ಸಂಪರ್ಕಿಸಿ ಮುಂಬೈಯ ಶ್ರದ್ಧಾ ಫೌಂಡೇಶನ್ ನ ನೆರವನ್ನು ಪಡೆದು ಅವನನ್ನು ಮರುವಿಲೀನಗೊಳಿಸುವಲ್ಲಿ ಯಶಸ್ವಿಯಾಗಿದೆ. ಈತನ ಮರುವಿಲಿನದ ಸಮಯವು ತುಂಬಾ ಭಾವನಾತ್ಮಕ ಸಮಯವಾಗಿದ್ದು ಆತನ ಕುಟುಂಬ ಸದಸ್ಯರು ಆನಂದ ಭಾಷ್ಪವನ್ನು ಸುರಿಸಿದರು. ಅಚ್ಚಾವೈರ್ ನನ್ನು ತನ್ನ ಕುಟುಂಬದೊಂದಿಗೆ ಸೇರಿಸಿದ್ದಕ್ಕಾಗಿ ಕುಟುಂಬದ ಸದಸ್ಯರು ಸ್ನೇಹಾಲಯ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಮರುವಿಲಿನದಿಂದ ಆತನ ಗ್ರಾಮಸ್ಥರು ಕೂಡ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈವರೆಗೆ ಸ್ನೇಹಾಲಯವು ಹಲವಾರು ಮಂದಿಯನ್ನು ತನ್ನ ಕುಟುಂಬ ಸದಸ್ಯರೊಂದಿಗೆ ಮರುವಿಲೀನಗೊಳಿಸಿದ್ದನ್ನು ಈ ವೇಳೆಯಲ್ಲಿ ನಾವು ಸ್ಮರಿಸಬಹುದು ಅಲ್ಲದೆ ಸ್ನೇಹಾಲಯವು ತನ್ನ ಸಂಸ್ಥೆಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುವ ಮಹನೀಯರನ್ನು ಸ್ಮರಿಸುತ್ತದೆ. ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತದೆ.