Manjeshwar, April 8, 2025 In a touching moment of resilience and hope, Tarkeshwar, a former RMP doctor from Bihar, was reunited with his family after 25 years of separation due to untreated mental illness and substance use.
His journey back began on May 10, 2022, when he was rescued by Thanal NGO in Kannur. He was later admitted to Snehalaya for treatment on March 22, 2025, and transferred to Sarddha just four days later for family reunification efforts.
Tarkeshwar, once lost and battling severe mental health issues without support, showed remarkable strength throughout his recovery. The emotional reunion saw him in tears as he embraced his family including his wife and now-grown children, who were toddlers when he disappeared.
Now home in Village Dharhara Kala, Amnour Block, Saran District, Bihar, Tarkeshwar’s story is a powerful testament to love, perseverance, and the life-changing efforts of Thanal NGO Snehalaya and Shraddha Foundations. His return is not just a reunion it’s a miracle.
25 ವರ್ಷಗಳ ದೀರ್ಘ ಅಗಲಿಕೆಯ ನಂತರ ಬಿಹಾರದ ಮಾಜಿ ಆರ್ ಎಂಪಿ ವೈದ್ಯರಾದ ತಾರಕೇಶ್ವರ್ ಕೊನೆಗೂ ತನ್ನ ಕುಟುಂಬವನ್ನು ಮರಳಿ ಸೇರಿದರು.
25 ವರ್ಷಗಳ ಕಾಲ ಚಿಕಿತ್ಸೆ ಪಡೆಯದೆ ಮಾನಸಿಕ ರೋಗ ಮತ್ತು ಮಾದಕ ದ್ರವ್ಯ ಸೇವನೆಯಿಂದಾಗಿ ತನ್ನ ಕುಟುಂಬದಿಂದ ಬೇರ್ಪಟ್ಟಿದ್ದ ತಾರಕೇಶ್ವರ್ ಏಪ್ರಿಲ್ 6, 2025 ರಂದು ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾದರು.
ಅವರ ಪುನರ್ಮೀಲನದ ಪ್ರಯಾಣವು ಕಣ್ಣೂರಿನ ಥಾನಲ್ ಎನ್‌ಜಿಒ ಅವರನ್ನು ಮೇ 10, 2022 ರಂದು ರಕ್ಷಿಸಿದಾಗ ಪ್ರಾರಂಭವಾಯಿತು. ಅವರು ಮಾರ್ಚ್ 22, 2025 ರಿಂದ ಸ್ನೇಹಾಲಯದಲ್ಲಿ ಚಿಕಿತ್ಸೆ ಮತ್ತು ಪುನರ್ವಸತಿ ಪಡೆದರು ಮತ್ತು ಶೀಘ್ರದಲ್ಲೇ ಪುನರ್ಮಿಲನಕ್ಕಾಗಿ ಶ್ರಾದ್ಧ ಫೌಂಡೇಶನ್ ಗೆ ವರ್ಗಾಯಿಸಲ್ಪಟ್ಟರು ಅನೇಕ ವರ್ಷಗಳ ಕಷ್ಟ, ಸಂಕಷ್ಟ, ನೋವು, ಅಗಲಿಕೆಯ ಮತ್ತು ನಿರಾಶೆಯ ಹೊರತಾಗಿಯೂ, ತಾರಕೇಶ್ವರ್‌ರ ಮನೋಬಲವು ಪ್ರಕಾಶಿಸಿತು.
ತಾರಕೇಶ್ವರ್ ಅವರ ಈ ಭಾವನಾತ್ಮಕ ಪುನರ್ಮಿಲನದಲ್ಲಿ ಕುಟುಂಬದವರು ಅವರನ್ನು ಕಣ್ಣೀರಿನೊಂದಿಗೆ ಆಲಿಂಗಿಸಿದರು, ತಾರಕೇಶ್ವರ್ ಅವರು ನಾಪತ್ತೆಯಾದ ದಿನದಿಂದ ಅವರ ಕುಟುಂಬವು ಅವರನ್ನು ಹುಡುಕುವುದನ್ನು ಎಂದಿಗೂ ನಿಲ್ಲಿಸಿರಲಿಲ್ಲ. ಅವರು ಕಣ್ಮರೆಯಾದಾಗ ಅವರ ಮಕ್ಕಳು ಚಿಕ್ಕವರಾಗಿದ್ದರು; ಈಗ ಬೆಳೆದಿರುವ ಅವರ ಮಗ ಮುಂಬೈನಲ್ಲಿ ಉದ್ಯೋಗ ಮಾಡುತ್ತಾನೆ, ಮತ್ತು ಅವರ ಪತ್ನಿ ಅವರೊಂದಿಗೆ ಬಿಹಾರದ ಧರ್ಹರ ಕಾಲ ಗ್ರಾಮದಲ್ಲಿ ವಾಸಿಸುತ್ತಾರೆ.
ಥಾನಲ್ ಎನ್‌ಜಿಒ ಮತ್ತು ಸ್ನೇಹಾಲಯದ ಪರಿಶ್ರಮದಿಂದ ಸಾಧ್ಯವಾದ ಈ ಹೃದಯಸ್ಪರ್ಶಿ ಮರಳುವಿಕೆಯು ಆಶೆ, ಭರವಸೆ, ಪ್ರೀತಿ ಮತ್ತು ಸಹನಶೀಲತೆಯ ಶಕ್ತಿಯನ್ನು ಎತ್ತಿ ತೋರಿಸುತ್ತದೆ.