Muskan, a young woman from Modi Garden, Bangalore, was reunited with her mother, Mrs. Sabana, on April 2, 2025, after months of separation. Once married and settled, Muskan’s life took a tragic turn when illness left her homeless and abandoned.
On January 22, 2025, Snehalaya’s team found her near Pumpwell, Mangalore, and provided her with medical care, emotional support, and rehabilitation. As she regained her strength, the team worked tirelessly to locate her family. After weeks of searching, they found her mother, who was overjoyed to learn that Muskan was alive.
Their reunion was an emotional moment of relief and love. Muskan’s story highlights the power of compassion and the life-changing work of organizations like Snehalaya. Now, with her family by her side, she looks forward to a hopeful future.
ಮುಸ್ಕಾನ್ ಅವರ ಭಾವನಾತ್ಮಕ ಪುನರ್ಮಿಲನದ ಪ್ರವಾಸ
ಬೆಂಗಳೂರಿನ ಮೋದಿ ಗಾರ್ಡನ್‌ನ ಯುವತಿ ಮುಸ್ಕಾನ್, ಅನೇಕ ತಿಂಗಳ ವಿಭಜನೆಯ ಬಳಿಕ 2025ರ ಏಪ್ರಿಲ್ 2ರಂದು ತನ್ನ ತಾಯಿ ಶಬಾನಾ ಅವರೊಂದಿಗೆ ಪುನರ್ಮಿಲನಗೊಂಡರು. ಆರಂಬದಲ್ಲಿ ಮದುವೆಯಾಗಿ ಸುಖೀ ಜೀವನ ಸಾಗಿಸುತ್ತಿದ್ದ ಮುಸ್ಕಾನ್, ಅಸ್ವಸ್ಥತೆಯ ಕಾರಣದಿಂದ ಗೃಹಹೀನಳಾಗಿ ನಿರಾಶ್ರಿತಳಾದಳು.
2025ರ ಜನವರಿ 22ರಂದು, ಮಂಗಳೂರು ಪಂಪ್ವೆಲ್ ಬಳಿ ಸ್ನೇಹಾಲಯ ರಕ್ಷಣಾ ತಂಡ ಮುಸ್ಕಾನ್ ಅವರನ್ನು ಪತ್ತೆ ಹಚ್ಚಿ, ಅವರಿಗೆ ಅಗತ್ಯವಿರುವ ವೈದ್ಯಕೀಯ ಸಹಾಯ, ಭಾವನಾತ್ಮಕ ಬೆಂಬಲ ಮತ್ತು ಪುನರ್ವಸತಿಯನ್ನು ನೀಡಿತು. ಅವರು ಚೇತರಿಸಿದಂತೆ, ಅವರ ಕುಟುಂಬವನ್ನು ಹುಡುಕಲು ತಂಡ ಕಠಿಣ ಪ್ರಯತ್ನ ಮಾಡಲಾಯಿತು. ಹಲವಾರು ವಾರಗಳ ಹುಡುಕಾಟದ ಬಳಿಕ, ಕೊನೆಗೂ ಅವರ ತಾಯಿಯ ವಿಳಾಸವನ್ನು ಪತ್ತೆ ಹಚ್ಚಲಾಯಿತು. ಮುಸ್ಕಾನ್ ಬದುಕಿದ್ದಾಳೆ ಎಂಬ ಸುದ್ದಿ ಕೇಳಿ ತಾಯಿ ಆನಂದಭಾರಿತಳಾದರು.
ಅವರ ಪುನರ್‌ಸಂಯೋಗವು ಒಂದು ಭಾವನಾತ್ಮಕ ಮತ್ತು ಆನಂದದಿಂದ ತುಂಬಿದ ಕ್ಷಣವಾಗಿತ್ತು.
ಮುಸ್ಕಾನ್ ಅವರ ಕಥೆ “ದಯೆಯೇ ಧರ್ಮದ ಮೂಲ” ಎನ್ನುವ ಶಕ್ತಿಯನ್ನು ಮತ್ತು ಸ್ನೇಹಾಲಯದಂತಹ ಪರೋಪಕಾರಿ ಸಂಸ್ಥೆಗಳ ಅವಿರತ ಸಮಾಜ ಕಲ್ಯಾಣದ ಕಾರ್ಯಗಳನ್ನು ಬಿಂಬಿಸುತ್ತದೆ. ಈಗ ಕುಟುಂಬದ ಬೆಂಬಲದೊಂದಿಗೆ, ಮುಸ್ಕಾನ್ ಭರವಸೆ ಮತ್ತು ಹೊಸ ನಿರೀಕ್ಷೆಗಳ ಜೀವನವನ್ನು ಜೀವಿಸುತ್ತಿದ್ದಾರೆ.