Manjeshwar, February 28, 2025 – In a remarkable display of compassion, Mr. Kiran, a concerned citizen, played a pivotal role in rescuing 45-year-old Ringu Kumar, who was found in a state of neglect on the streets of Karkala. Kumar had been wandering for days without assistance, suffering from poor hygiene and in urgent need of medical attention.
Recognizing the gravity of the situation, Mr. Kiran acted swiftly, ensuring that Kumar was admitted to Snehalaya Rehabilitation Center on February 28. There, he is now receiving the necessary treatment and support. Medical professionals are currently assessing his health to address any underlying conditions.
Thanks to Mr. Kiran’s timely intervention, Ringu Kumar has been given a fresh start and the opportunity for a better life.
If you have any information regarding Ringu Kumar, please contact 9446547033 or 7994087033.
ರಿಂಗು ಕುಮಾರ್ ಅವರನ್ನು ರಕ್ಷಸಿ ಹೊಸ ಜೀವನದ ಭರವಸೆಯ ದೀಪ ಬೆಳಗಿದ ಸ್ನೇಹಾಲಯ
ಮಂಜೇಶ್ವರ : ಫೆಬ್ರವರಿ 28, 2025 — ಮಾನವೀಯ ಸೇವೆಯ ಅನನ್ಯ ಉದಾಹರಣೆಯನ್ನು ತೋರುತ್ತಾ ಸ್ನೇಹಾಲಯದ ಹಿತೈಷಿಯಾದ ಶ್ರೀ ಕಿರಣ್ ರವರು ಕಾರ್ಕಳದ ಬೀದಿಗಳಲ್ಲಿ ನಿರ್ಲಕ್ಷಿತ ಸ್ಥಿತಿಯಲ್ಲಿ, ಯಾರ ಸಹಾಯ ದೊರಕದೆ ಅಲೆಮಾರಿ ಸ್ಥಿತಿಯಲ್ಲಿದ್ದ 45 ವರ್ಷ ಪ್ರಾಯದ ರಿಂಗು ಕುಮಾರ್ ಅವರನ್ನು ರಕ್ಷಿಸಿ ಸ್ನೇಹಾಲಯದಲ್ಲಿ ದಾಖಲಿಸಿದರು.
ಪತ್ತೆಯಾದ ಸಮಯದಲ್ಲಿ ರಿಂಗು ಅವರು ಅಸ್ಥಿರ ಸ್ಥಿತಿಯಲ್ಲಿದ್ದು, ಮಲಿನ ಬಟ್ಟೆಗಳನ್ನು ಧರಿಸಿ, ತೀವ್ರ ಮಾನಸಿಕ ಒತ್ತಡದ ಲಕ್ಷಣಗಳನ್ನು ತೋರಿಸುತ್ತಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಶ್ರೀ. ಕಿರಣ್ ತಕ್ಷಣ ಕ್ರಮ ಕೈಗೊಂಡು ಫೆಬ್ರವರಿ 28ರಂದು ಅವರನ್ನು ಸ್ನೇಹಾಲಯ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದರು. ಪ್ರಸ್ತುತಃ ರಿಂಗು ಅವರು ಸ್ನೇಹಾಲಯದಲ್ಲಿ ಉತ್ತಮ ಚಿಕಿತ್ಸಾ ಸಹಾಯ ಮತ್ತು ಆರೈಕೆಯನ್ನು ಪಡೆಯುತ್ತಿದ್ದಾರೆ. ವೈದ್ಯಕೀಯ ತಜ್ಞರು ಅವರ ಆರೋಗ್ಯವನ್ನು ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಶ್ರೀ. ಕಿರಣ್ ಅವರ ಸೂಕ್ತ ಸಮಯ ಪ್ರಜ್ನೆ ಮತ್ತು ಹಸ್ತಕ್ಷೇಪದಿಂದ, ರಿಂಗು ಕುಮಾರ್ ಹೊಸ ಜೀವನವನ್ನು ಆರಂಭಿಸಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಅವಕಾಶವನ್ನು ಪಡೆಯಲು ಸಾಧ್ಯವಾಗಿದೆ. ರಿಂಗು ಕುಮಾರ್ ಅವರನ್ನು ಅವರ ಪ್ರೀತಿಯವರೊಂದಿಗೆ ಪುನರ್ಮಿಲನಗೊಳಿಸಲು ನಿಮ್ಮ ಸಹಾಯ ಮತ್ತು ಬೆಂಬಲವು ಅತ್ಯಂತ ಅಮೂಲ್ಯವಾಗಿದೆ. ರಿಂಗು ಕುಮಾರವರ ಕುಟುಂಬದ ಬಗ್ಗೆ ಯಾವುದೇ ಸುಳಿವು, ಮಾಹಿತಿ ಇದ್ದಲ್ಲಿ ಸಾರ್ವಜನಿಕರು ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.