Manjeshwar: On February 26, 2025, a 48-year-old woman named Gangamaa was rescued from the streets of Mangalore by Mr. Jovial Mathew, a trustee of Snehalaya, and the rehabilitation team. Gangamaa, disoriented and struggling with poor personal hygiene, was found speaking only Kannada and exhibiting signs of severe psychiatric distress.
She has been admitted to Snehalaya Psycho-Social Rehabilitation Home for Women, where she is receiving care. However, little is known about her past, family, or the circumstances that led her to the streets.
The Snehalaya team is now urgently seeking help to uncover Gangamaa’s identity and reconnect her with her loved ones. Any information, no matter how small, could be vital to reuniting her with her family and aiding in her recovery.
If you have any details regarding Gangamaa’s background or family, please contact:
* 9446547033
* 7994087033
Your support could make all the difference in giving Gangamaa a second chance at life.
ಗಂಗಮ್ಮನವರನ್ನು ಆಕೆಯ ಕುಟುಂಬದೊಂದಿಗೆ ಪುನಃ ಸೇರಿಸಲು ಸಹಾಯ ಕೋರಿ ನಮ್ರ ನಿವೇದನೆ
ಮಂಜೇಶ್ವರ: 2025 ಫೆಬ್ರವರಿ 26ರಂದು, 48 ವರ್ಷದ ಗಂಗಮ್ಮ ಎಂಬ ಮಹಿಳೆಯನ್ನು ಮಂಗಳೂರು ಬೀದಿಗಳಲ್ಲಿ ಗುರಿ ಇಲ್ಲದೆ ಅಲೆದಾಡುವ ಸ್ಥಿತಿಯಲ್ಲಿ ಸ್ನೇಹಾಲಯದ ಟ್ರಸ್ಟಿ ಶ್ರೀ ಜೋವಿಯಲ್ ಮ್ಯಾಥ್ಯೂ ಮತ್ತು ಸಹ ಕರ್ಮಿಗಳು ರಕ್ಷಿಸಿದರು. ಪತ್ತೆಯಾದ ಸಮಯದಲ್ಲಿ ಗಂಗಮ್ಮ, ಅಸಮಂಜಸ ಮಾತು, ಮತ್ತು ವೈಯಕ್ತಿಕ ಸ್ವಚ್ಛತೆಯ ಕೊರತೆ ಮತ್ತು ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಹಾಗೂ ಕೇವಲ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದರು.
ಪ್ರಸ್ತುತಃ ಗಂಗಮ್ಮ ಅವರನ್ನು ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಗೃಹದ ಮಹಿಳೆಯರ ವಿಭಾಗದಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಅಗತ್ಯವಿರುವ ದೈಹಿಕ, ಮಾನಸಿಕ ಆರೈಕೆ, ವೈದ್ಯಕೀಯ ನೆರವು ಮತ್ತು ಸಂರಕ್ಷಣೆಯನ್ನು ನೀಡಲಾಗುತ್ತಿದೆ. ಆಕೆಯ ಹಿಂದಿನ ಜೀವನ, ಕುಟುಂಬ ಅಥವಾ ಬೀದಿಗೆ ಬರುವಂತಹ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ಸ್ನೇಹಾಲಯದ ನುರಿತ ತಂಡವು ಗಂಗಮ್ಮನ ಗುರುತನ್ನು ತಿಳಿಯಲು ಮತ್ತು ಅವಳನ್ನು ಪ್ರಿಯಜನರೊಂದಿಗೆ ಪುನಃ ಸಂಪರ್ಕಿಸಲು ಸಾರ್ವಜನಿಕರ ಸಹಾಯವನ್ನು ಹುಡುಕುತ್ತಿದೆ.
ಗಂಗಮ್ಮನವರ ಕುಟುಂಬದ ಬಗ್ಗೆ ಯಾರಿಗಾದರೂ ಯಾವುದೇ ಸುಳಿವು, ಮಾಹಿತಿ ಇದ್ದಲ್ಲಿ ಸಾರ್ವಜನಿಕರು ದಯವಿಟ್ಟು 9446547033 ಅಥವಾ 7994087033 ಸಂಖ್ಯೆಗೆ ಸಂಪರ್ಕಿಸಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ. ನಿಮ್ಮ ಸಹಯೋಗದಿಂದ ಗಂಗಮ್ಮನವರನ್ನು ಆಕೆಯ ಪ್ರೀತಿಯವರೊಂದಿಗೆ ಪುನರ್ಮಿಲನಗೊಳಿಸಲು ನಿಮ್ಮ ಸಹಾಯ ಮತ್ತು ಬೆಂಬಲವು ಅತ್ಯಂತ ಅಮೂಲ್ಯವಾಗಿದೆ.