A Journey of Hope: After the Separation of Two Months, Snehalaya reunites a man with his family

/

Manjeshwar: In a moving story of compassion and perseverance, the Snehalaya team successfully reunited Mr. Ramesh with his family in Navi Mumbai, Maharashtra, after rescuing him from the streets of Dakshina Kannada

The journey began on November 29, 2024, when Mr. Ramesh was found wandering near the Mangalore Highway, disoriented and struggling with poor hygiene, depression, and substance abuse. Isolated and lost, his future seemed uncertain.

The Snehalaya team, known for their dedication to rehabilitating vulnerable individuals, immediately took him under their care. Through weeks of medical and psychological support, Mr. Ramesh began to regain his mental clarity and recall fragments of his life. Slowly, his memory returned, including vital details about his home and family.

The team worked tirelessly to piece together this information, eventually locating his family in Navi Mumbai. On January 13, 2025, after weeks of rehabilitation and coordination, an emotional reunion took place, bringing Mr. Ramesh back to the arms of his loved ones.

This heartwarming reunion is a testament to the unwavering commitment of the Snehalaya team, whose compassion transformed Mr. Ramesh’s life. Their work brings hope to countless others, reminding us all of the power of care, determination, and family.

snehalaya-ramesh-reunion-16feb2025-02 snehalaya-ramesh-reunion-16feb2025-03 snehalaya-ramesh-reunion-16feb2025-04. snehalaya-ramesh-reunion-16feb2025-05

ಎರಡು ತಿಂಗಳ ವಿಯೋಗದ ಬಳಿಕ ಶ್ರೀ ರಾಮೇಶ್ ಅವರನ್ನು ಪುನಃ ತನ್ನ ಕುಟುಂಬಕ್ಕೆ ಪುನರ್ಮಿಲನಗೊಳಿಸಿದ ಸ್ನೇಹಾಲಯ

ಮಂಜೇಶ್ವರ: ಅನುಕಂಪ ಮತ್ತು ಅಚಲ ಸೇವೆಯ ಸ್ಫೂರ್ತಿದಾಯಕ ಸಮಾಗಮದಲ್ಲಿ, ಸ್ನೇಹಾಲಯ ತಂಡ ದಕ್ಷಿಣ ಕನ್ನಡದ ಮಂಗಳೂರಿನ ಬೀದಿಗಳಲ್ಲಿ ನಿರ್ದಿಷ್ಟ ಗುರಿ ಇಲ್ಲದೆ ಅಲೆದಾಡುತ್ತಿದ್ದ ಶ್ರೀ ರಾಮೇಶ್ ಅವರನ್ನು ರಕ್ಷಿಸಿ, ಮಹಾರಾಷ್ಟ್ರದ ನವಿ ಮುಂಬೈನಲ್ಲಿರುವ ಅವರ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಿತು.

ಶ್ರೀ ರಾಮೇಶ್ ಅವರ ಜೀವನದ ಈ ಪಯಣವು 2024ರ ನವೆಂಬರ್ 29ರಂದು ಪ್ರಾರಂಬವಾಯಿತು. ಶ್ರೀ ರಾಮೇಶ್ ಮಂಗಳೂರು ಹೆದ್ದಾರಿಯ ಬಳಿ ತಿರುಗಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಾನಸಿಕವಾಗಿ ಅವರು ಭ್ರಮಿತ ಸ್ಥಿತಿಯಲ್ಲಿದ್ದು, ವಯಕ್ತಿಕ ಸ್ವಚ್ಛತೆಯ ಕೊರತೆ, ನಿರಾಸೆ ಮತ್ತು ಮಾದಕ ಪದಾರ್ಥಗಳ ಅತ್ಯಧಿಕ ಬಳಕೆಯಿಂದ ಬಳಲುತ್ತಿದ್ದರು. ಒಂದು ನಿರಾಶಜನಕ, ಗೊಂದಲದ ಸ್ಥಿತಿಯಲ್ಲಿ, ಅವರ ಭವಿಷ್ಯ ಅನಿಶ್ಚಿತವಾಗಿತ್ತು.

ಶ್ರೀ ರಾಮೇಶ್ ಅವರ ಪತ್ತೆಯಾದ ಕೂಡಲೇ ಸ್ನೇಹಾಲಯವು ಆತನನ್ನು ತನ್ನ ಸಂರಕ್ಷೆಣೆಗೆ ತೆಗೆದುಕೊಂಡಿತು. ವಾರಗಳ ವೈದ್ಯಕೀಯ ಮತ್ತು ಮಾನಸಿಕ ಚಿಕಿತ್ಸೆಯ ಮೂಲಕ, ಶ್ರೀ ರಾಮೇಶ್ ಅವರ ಮನಸ್ಸು ಸ್ವಲ್ಪಸ್ವಲ್ಪವಾಗಿ ಚೇತರಿಸಿಕೊಳ್ಳಲು ಪ್ರಾರಂಭವಾಯಿತು ಹಾಗೂ ತನ್ನ ಕುಟುಂಬದ ಕೆಲವು ಮುಖ್ಯ ಮಾಹಿತಿಗಳು ನೆನಪಿಗೆ ಬಂದವು.

ಸ್ನೇಹಾಲಯದ ನುರಿತ ಸಿಬ್ಬಂದಿಗಳು ಶ್ರೀ ರಾಮೇಶ್ ಅವರ ಜೀವನದ ತುಣುಕು ಸ್ಮ್ರತಿಗಳನ್ನು ಪುನಃ ಜೋಡಿಸಿ ಪುನರ್ಮಿಲನಕ್ಕೆ ಅಗತ್ಯವಿರುವ ಮಾಹಿತಿಯನ್ನು ಸಂಕಲಿಸಲು ನಿರಂತರ ಶ್ರಮಪಟ್ಟರು ಮತ್ತು ಕೊನೆಗೂ ನವಿ ಮುಂಬೈನಲ್ಲಿರುವ ಶ್ರೀ ರಾಮೇಶ್ ಅವರ ಕುಟುಂಬವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. 2025ರ ಜನವರಿ 13ರಂದು, ಅತ್ಯುತ್ತಮ ಪುನರ್ವಸತಿ ಮತ್ತು ಸಮನ್ವಯದ ಬಳಿಕ, ಭಾವುಕಮಯ ಪುನರ್ಮಿಲನ ಸಂಭವಿಸಿತು, ಶ್ರೀ ರಾಮೇಶ್ ಅವರು ತಮ್ಮ ಕುಟುಂಬದ ಅಪ್ಪುಗೆಗೆ ಮರಳಿದರು.

ಈ ಮನಮಿಡಿಯುವ ಪುನರ್ಮಿಲನ ಸ್ನೇಹಾಲಯ ತಂಡದ ಅಪಾರ ಬದ್ಧತೆ ಮತ್ತು ಕರುಣೆಯ ಸಾಕ್ಷಿಯಾಗಿದೆ. ನಿಸ್ವಾರ್ಥ ಸೇವೆಯ ಮೂಲಕ ಅನೇಕ ಪೀಡಿತರಿಗೆ, ದಾರಿ ತಪ್ಪಿದವರಿಗೆ ಹೊಸ ಜೀವನದ ಆಶೆಯನ್ನು ನೀಡುತ್ತದೆ,

Leave a Reply

Your email address will not be published. Required fields are marked *

Need Help?