Missing for Three Months, Devlal Nirala Reunites with Family After Rescue and Recovery

/

Manjeshwar: Devlal Nirala,  from Raigarh, Chhattisgarh, has been joyfully reunited with his family after being missing for three months. His disappearance was the culmination of a tragic downward spiral following the loss of his wife, which left him mentally distressed and dependent on drugs and alcohol. His mental health deteriorated further, eventually leading to him going missing.

On Christmas Day, December 25, 2024, Snehalaya Charitable Trust rescued Devlal, from Central Railway station Mangalore and provided him with much-needed medical attention, counseling, and support. After his recovery, he was transferred to Shraddha Foundation, where the process of reuniting him with his family began. On February 10, 2025, Devlal was finally reunited with his overjoyed family, including his daughter, parents, and brother. The emotional reunion was marked by heartfelt tears, especially when he saw his daughter after months of separation.

The family, alongside villagers and neighbors, welcomed Devlal back with open arms, expressing gratitude for the unyielding efforts of both Snehalaya and Shraddha Foundation in bringing him home.

This reunion stands as a powerful testament to the difference that compassionate organizations can make in transforming lives and bringing families back together after hardship.

snehalaya-devalalniralal-reunion-15feb2025-05snehalaya-devalalniralal-reunion-15feb2025-02 snehalaya-devalalniralal-reunion-15feb2025-03

“ದೇವಲಾಲ್ ರವರ ಜೀವನದ ಸಂತೃಪ್ತಿಯ ಕ್ಷಣ: ಸ್ನೇಹಾಲಯದ ಅನವರತ ಪ್ರಯತ್ನ” ಮುದುರಿ ಹೋದ ನಗುವನ್ನು ಮತ್ತೆ ಅರಳಿಸಿದ ಸ್ನೇಹಾಲಯ: “

ಮಂಜೇಶ್ವರ: ಛತ್ತೀಸ್‌ಗಡ ರಾಜ್ಯದ ರಾಯ್‌ಗಢ ಜಿಲ್ಲೆಯ ದೇವಲಾಲ್ ನಿರಾಲಾ ಅವರು ಮೂರು ತಿಂಗಳ ಕಾಲ ನಾಪತ್ತೆಯಾಗಿದ್ದ ನಂತರ ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಪುನರ್ಮಿಲನಗೊಂಡರು. ತಮ್ಮ ಪತ್ನಿಯನ್ನು ಕಳೆದುಕೊಂಡ ನೋವಿನ ಪರಿಣಾಮವಾಗಿ ಅವರು ಮಾನಸಿಕವಾಗಿ ತೀವ್ರ ಸಂಕಟಕ್ಕೆ ಒಳಗಾಗಿದ್ದು, ಮದ್ಯ ಮತ್ತು ಮಾದಕ ಪದಾರ್ಥಗಳ ಅವಲಂಬನೆಯಿಂದ ಜೀವನ ಹತಾಶಗೊಂಡಿತ್ತು. ಜೊತೆಗೆ ಅವರ ಮಾನಸಿಕ ಆರೋಗ್ಯ ಮತ್ತಷ್ಟು ಹದಗೆಟ್ಟು, ಕೊನೆಗೆ ಅವರು ಕಾಣೆಯಾಗುವ ಸ್ಥಿತಿಗೆ ತಲುಪಿದರು.

2024ರ ಡಿಸೆಂಬರ್ 25, ಕ್ರಿಸ್‌ಮಸ್ ದಿನದಂದು, ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ದೇವಲಾಲ್ ಅವರನ್ನು ಮಂಗಳೂರಿ ಸೆಂಟ್ರಲ್ ರೈಲು ನಿಲ್ದಾಣ ಬಳಿ ರಕ್ಷಿಸಿದರು. ಅವರನ್ನು ತಕ್ಷಣವೇ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿ, ಆಪ್ತ ಸಮಾಲೋಚನೆ ಮತ್ತು ಎಲ್ಲಾ ರೀತಿಯ ಸಹಾಯವನ್ನು ಒದಗಿಸಿತು. ಅವರು ಚೇತರಿಸಿಕೊಂಡ ನಂತರ, ಅವರನ್ನು ಶ್ರದ್ಧಾ ಫೌಂಡೇಶನ್‌ಗೆ ವರ್ಗಾಯಿಸಲಾಯಿತು, ಅಲ್ಲಿ ಅವರ ಕುಟುಂಬದೊಂದಿಗೆ ಪುನರ್ಮಿಲನದ ಪ್ರಕ್ರಿಯೆ ಆರಂಭವಾಯಿತು. 2025ರ ಫೆಬ್ರವರಿ 10ರಂದು ದೇವಲಾಲ್ ಅವರು ತಮ್ಮ ಕುಟುಂಬ, ವಿಶೇಷವಾಗಿ ತಮ್ಮ ಮಗಳೊಂದಿಗೆ ಆನಂದಭರಿತವಾಗಿ ಪುನರ್ಮಿಲನಗೊಂಡರು. ತಿಂಗಳುಗಳ ಬೇರ್ಪಟ್ಟಿದ ನಂತರ ಮಗಳನ್ನು ಕಂಡಾಗ ಕಣ್ಣೀರಿನ ಅಪ್ರತಿಮ ಭಾವನಾತ್ಮಕ ಕ್ಷಣಗಳು ಪುನಃ ಜೀವಂತವಾದವು.

ಕುಟುಂಬದ ಸದಸ್ಯರು, ನೆರೆಹೊರೆಯವರು, ಹಳೆಯ ಗೆಳೆಯರು, ಕಣ್ಣೀರಿನ ಹನಿ-ಸ್ನೇಹದ ನಗು ಮಿಶ್ರಿತ ಭಾವನೆಗಳೊಂದಿಗೆ ದೇವಲಾಲ್ ಅವರನ್ನು ತಮ್ಮ ಹೃದಯದ ಒಡಲಲ್ಲಿ ಸ್ವೀಕರಿಸಿದರು. ಅವರಿಗಾಗಿ ಎದುರು ನೋಡುತ್ತಿದ್ದ ತನ್ನವರ ಜೊತೆ ದೇವಲಾಲ್ ಅವರ ಪುನರ್ಮಿಲನದ ಈ ಕತೆಯು ಏಕಕಾಲದಲ್ಲಿ ದುಃಖಭರಿತವೂ, ವಿಜಯಘೋಷೆಯೂ ಆಗಿ ಮೂಡಿತು.

ಇದುವೇ ಸ್ನೇಹಾಲಯದ ಪರಮಾರ್ಥ. ಬಾಳಿನ ಬಿರುಕುಗಳೊಳಗೆ ಪ್ರೀತಿಯ ಬೆಳಕನ್ನು ಸುರಿದು, ಒಡೆದ ಹೃದಯಗಳನ್ನು ಪುನಃ ಒಂದಾಗಿ ಜೋಡಿಸುವ ಹೃದಯಸ್ಪರ್ಶಿ ಸೇವೆಯಾಗಿದೆ. ಇಲ್ಲಿಯ ಸೇವೆ ಕೇವಲ ನೆರವು ಅಲ್ಲ, ಇದು ಮಾನವೀಯತೆಯ ಮರುಜ್ಜೀವ. ವಿಭಜನೆಯ ಸಂಕಟದಲ್ಲಿ ನಲುಗಿದ ಮನಸುಗಳಿಗೆ, ಸೌಹಾರ್ದದ ಹೊಸ ಹುಚ್ಚು ಹರಡುವ ಮಧುರ ಸ್ಪರ್ಶ. ನಂಬಿಕೆ ನಸುಕಿಗೆ ಹೊಸ ಕನಸು ಕಟ್ಟುವ, ದಯೆಯ ಚಿಹ್ನೆಯಾಗಿ ಶ್ರೇಷ್ಠತೆಯನ್ನು ಸಾರುವ ಪವಿತ್ರ ಸಾಕ್ಷಿ!

Leave a Reply

Your email address will not be published. Required fields are marked *

Need Help?