Manjeshwar: On February 11, 2025, the Snehalaya team, with the help of Mr Sunil, local taxi driver rescued a 33-year-old man named Mukund Raju Sharma from Padil Railway Station in Mangalore. Mukund, found wandering aimlessly near the station, appeared confused and disoriented, mentioning Goa as his native place.
His condition reflected signs of distress, disheveled clothing, poor personal hygiene, and a history of alcohol consumption. Speaking only in Hindi, Mukund was noticeably vulnerable, his only consistent habit being the chewing of pan masala.
Thankfully, Mukund is now under the care of Snehalaya Psycho-Social Rehabilitation Home for Men, where he will receive the essential care, support, and guidance he needs to recover. As efforts continue to trace his family, the hope is that this lost soul will soon find his way back to his loved ones.
If anyone has information regarding Mukund’s family or background, please contact Snehalaya at 9446547033 or 7994087033.
ಮಂಗಳೂರು ರೈಲು ನಿಲ್ದಾಣದಿಂದ 33 ವರ್ಷದ ಮುಕುಂದ್ ರಾಜು ಶರ್ಮರನ್ನು ರಕ್ಷಿಸಿದ ಸ್ನೇಹಾಲಯ.
ಮಂಜೇಶ್ವರ: ಫೆಬ್ರವರಿ 11, 2025 ರಂದು, ಸ್ಥಳೀಯ ಟ್ಯಾಕ್ಸಿ ಚಾಲಕ ಶ್ರೀ ಸುನಿಲ್ ಅವರ ಸಹಯೋಗದಿಂದ ಸ್ನೇಹಾಲಯ ತಂಡವು 33 ವರ್ಷದ ಮುಕುಂದ್ ರಾಜು ಶರ್ಮರನ್ನು ಮಂಗಳೂರಿನ ಪಡಿಲ್ ರೈಲು ನಿಲ್ದಾಣದಿಂದ ರಕ್ಷಿಸಿದೆ. ಮುಕುಂದ್ ನಿಲ್ದಾಣದ ಸಮೀಪ ಗುರಿ ಇಲ್ಲದೆ ಅಲೆಯುತ್ತಿದ್ದು, ಮಾನಸಿಕವಾಗಿ ಗೊಂದಲಗೊಂಡ ಸ್ಥಿತಿಯಲ್ಲಿದ್ದು, ತಾನು ಮೂಲತ: ಗೋವಾದಲ್ಲಿ ನೆಲೆಸುತ್ತೇನೆ ಎಂದು ತಿಳಿಸಿದ್ದಾನೆ. ಆದರೆ ಈತನ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿಲ್ಲ.
ಪತ್ತೆಯಾದ ಸಮಯದಲ್ಲಿ ಮುಕುಂದ್ ನಲ್ಲಿ ಮಾನಸಿಕ ಅಸ್ಪಷ್ಟತೆ, ಗಲಿಬಿಲಿ, ಅವ್ಯವಸ್ಥಿತ ಉಡುಪು, ವೈಯಕ್ತಿಕ ಸ್ವಚ್ಚತೆಯ ಕೊರತೆಯಿದ್ದು, ಮದ್ಯ ಸೇವನೆಯ ಅಭ್ಯಾಸವನ್ನು ಸಹಾ ಹೊಂದಿದ್ದಾನೆ. ಕೇವಲ ಹಿಂದಿಯಲ್ಲಿ ಮಾತನಾಡುತ್ತಿದ್ದ ಮುಕುಂದ್ ಅತಿಯಾದ ನಿರಾಶೆ ಮತ್ತು ಭಾವನಾತ್ಮಕವಾಗಿ ನೊಂದ ಸ್ಥಿತಿಯಲ್ಲಿದ್ದು, ಪಾನ್ ಮಸಾಲಾ ಅಗಿಯುವ ಹವ್ಯಾಸ ಕೂಡಾ ಇದೆ ಎಂದು ತಿಳಿದು ಬಂದಿದೆ.
ಅದೃಷ್ಟವಶಾತ್, ಈಗ ಮುಕುಂದ್ ಸ್ನೇಹಾಲಯದ ಪುರುಷರ ಮಾನಸಿಕ-ಸಾಮಾಜಿಕ ಪುನಶ್ಚೇತನ ಕೇಂದ್ರದ ಆರೈಕೆಯಲ್ಲಿ ಇದ್ದು, ಅವನಿಗೆ ಅಗತ್ಯ ಆರೈಕೆ, ಬೆಂಬಲ, ಮತ್ತು ಮಾರ್ಗದರ್ಶನ ಪಡೆಯುತ್ತಿದ್ದಾನೆ. ಅವನ ಕುಟುಂಬವನ್ನು ಪತ್ತೆ ಹಚ್ಚಲು ಪ್ರಯತ್ನಗಳು ಮುಂದುವರಿಯುತ್ತಿದ್ದು ಮುಕುಂದ್ ನನ್ನು ತನ್ನ ಕುಟುಂಬದವರೊಡನೆ ಮರುಸಂಗಮಿಸುವ ಆಶಾಭಾವನೆಯಲ್ಲಿ ಸ್ನೇಹಾಲಯವು ಸಾರ್ವಜನಿಕರ ಸಹಾಯವನ್ನು ಅಪೇಕ್ಷಿಸಿದೆ
ಮುಕುಂದ್ ಅವರ ಕುಟುಂಬ ಅಥವಾ ಹಿನ್ನೆಲೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ, ದಯವಿಟ್ಟು ಸ್ನೇಹಾಲಯದ 9446547033 ಅಥವಾ 7994087033 ನಲ್ಲಿ ಸಂಪರ್ಕಿಸಿ.