Manjeshwar, February 11, 2025 – In an act of compassion, Snehalaya has rescued a man, temporarily identified as Vikram, from the streets of Kottara, Mangalore, near the Mahindra showroom. Vikram was found in a distressed state, displaying unresponsiveness, vacant smiles, and repetitive speech.
Thanks for the information from Mr. Lancy Rego, the Snehalaya team, led by Director Bro Joseph Crasta, acted quickly to provide Vikram with care and shelter. We are now appealing to the public for help in identifying him and reuniting him with his family.
If you have any information, please contact Snehalaya at 9446547033 or 7994087033.
This rescue highlights the critical role of community support in aiding vulnerable individuals and underscores Snehalaya’s dedication to rehabilitation and hope for those in need.
ನಿರ್ಣಾಮದ ಯಾತನೆಯನ್ನು ಸಹಿಸುತ್ತಿದ್ದ ವಿಕ್ರಂನ ರಕ್ಷಣೆ ಮಾಡಿ ಜೀವನದಲ್ಲಿ ಚೈತನ್ಯ ಮತ್ತು ಭರವಸೆ ನೀಡಿದ ಸ್ನೇಹಾಲಯ.
ಮಂಜೇಶ್ವರ, ಫೆಬ್ರವರಿ 11, 2025 – ಮಂಗಳೂರಿನ ಕೊಟ್ಟಾರದಲ್ಲಿರುವ ಮಹೀಂದ್ರ ಶೋರೂಮ್ ಸಮೀಪದ ಬೀದಿಗಳಲ್ಲಿ ಕರುಣಾಜನಕ ಸ್ಥಿತಿಯಲ್ಲಿ ಕಂಡುಬಂದ ವಿಕ್ರಂ ಎಂಬ ವ್ಯಕ್ತಿಯೊಬ್ಬರನ್ನು ಸ್ನೇಹಾಲಯ ರಕ್ಷಿಸಿದೆ. ಪ್ರಸ್ತುತ ವಿಕ್ರಂ ನವರು ಸ್ನೇಹಾಲಯದ ಮನೋ ಸಾಮಾಜಿಕ ಪುರುಷರ ವಿಭಾಗದಲ್ಲಿ ದಾಖಲಿಸಲ್ಪಟ್ಟು ಪ್ರಾಥಮಿಕ ತಪಾಸಣೆಯಲ್ಲಿ ತೀವ್ರ ಮನೋವೈಕಲ್ಯದ ಲಕ್ಷಣಗಳನ್ನು ತೋರುತ್ತಿದ್ದಾರೆ. ಪತ್ತೆಯಾದ ಸಮಯದಲ್ಲಿ ವಿಕ್ರಂ ಸಂವೇದನಾಹೀನರಾಗಿ ಮಾತುಕತೆಗೆ ಸ್ಪಂದಿಸದ ಸ್ಥಿತಿಯಲ್ಲಿ ಇದ್ದು, ತಮ್ಮಷ್ಟಕ್ಕೆ ನಗುವ ಮತ್ತು ಸ್ವಯಂ ಮಾತನಾಡುವ ಪರಿಸ್ಥಿತಿಯಲ್ಲಿ ಕಂಡುಬಂದರು.
ಶ್ರೀ ಲ್ಯಾನ್ಸಿ ರೇಗೊ ಅವರ ಮಾಹಿತಿಯ ಮೇರೆಗೆ, ಸ್ನೇಹಾಲಯದ ಸಂಸ್ಥಾಪಕರಾದ ಬ್ರೊ ಜೋಸೆಫ್ ಕ್ರಾಸ್ಟಾ ಅವರ ನೇತೃತ್ವದಲ್ಲಿ ತಂಡ ತಕ್ಷಣ ಸ್ಪಂದಿಸಿ ವಿಕ್ರಂ ಅವರಿಗೆ ಅಗತ್ಯ ವಿರುವ ಆರೈಕೆ, ವೈದ್ಯಕೀಯ ನೆರವು ಮತ್ತು ಆಶ್ರಯ ಒದಗಿಸಿದೆ. ಜೊತೆಗೆ ಈಗ, ವಿಕ್ರಂ ಅವರ ಕುಟುಂಬವನ್ನು ಪತ್ತೆ ಹಚ್ಚಿ ಆತನ ಪುನರ್ಮಿಲನಕ್ಕಾಗಿ ಕಾರ್ಯ ಕೈಗೊಂಡಿದೆ.
ವಿಕ್ರಂನವರ ಕುಟುಂಬ, ಹಿನ್ನಲೆ ಅಥವಾ ಗುರುತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯಿದ್ದರೆ ಸಾರ್ವಜನಿಕರು ದಯವಿಟ್ಟು ಸಹಕರಿಸಿ – ನಮ್ಮನ್ನು 9446547033 ಅಥವಾ 7994087033 ಸಂಪರ್ಕಿಸಬೇಕಾಗಿ ನಮ್ರ ವಿನಂತಿ. ನಿಮ್ಮ ಸಹಾಯ ಮತ್ತು ಹಸ್ತಕ್ಷೇಪ ವಿಕ್ರಂ ರವರನ್ನು ತನ್ನ ಪ್ರೀತಿಪಾತ್ರರ ಜೊತೆ ಮತ್ತೆ ಸೇರಿಸಲು ಅಗತ್ಯವಾಗಿದೆ.