Snehalaya Reunites Mr. Anthosh with His Family in Nasik, Maharashtra

/

Manjeshwar: On January 8, 2025, In an emotional reunion, Mr. Anthosh was reunited with his family in Nashik, Maharashtra, thanks to the relentless efforts of the Snehalaya team.

Mr. Anthosh’s journey  at Snehalaya began on August 1, 2024, when he was found wandering the streets of Pumpwell, Mangalore, in a severely deteriorated state. He suffered from poor hygiene, a serious foot infection, and was battling alcohol and tobacco addiction. His erratic behavior and hyper speech were further signs of his distress.

Recognizing the urgency of his condition, the Snehalaya team immediately stepped in to provide medical care, attention, and support. Over time, Mr. Anthosh showed remarkable improvement under their care. As his health and mental clarity improved, he was able to recall crucial details of his life, including his home address.

Armed with this information, the team worked tirelessly to verify his identity and eventually located his family in Sakur Village, Nashik. Their dedication culminated in a heartwarming reunion, bringing Mr. Anthosh back into the arms of his loved ones.

This reunion stands as a testament to Snehalaya’s unwavering commitment to giving individuals like Mr. Anthosh a second chance at life, healing, and family.

snehalaya-anthosh-reunion-10feb2025-02 snehalaya-anthosh-reunion-10feb2025-03 snehalaya-anthosh-reunion-10feb2025-04 snehalaya-anthosh-reunion-10feb2025-05

ಸ್ನೇಹಾಲಯದ ಸ್ನೇಹದ ಸಿಂಚನ: ಶ್ರೀ ಅಂಥೋಶ್ ಅವರ ಪುನರ್ಮಿಲನ

ಮಂಜೇಶ್ವರ: 2025ರ ಜನವರಿ 8ರಂದು, ಸಹಾನುಭೂತಿಯ ಸಂಜೀವಿನಿಯನ್ನು ಸಾಕ್ಷಾತ್ಕರಿಸುವ ಒಂದು ಅಮೋಘ ಕ್ಷಣದಲ್ಲಿ, ಸ್ನೇಹಾಲಯದ ಅಚಲ, ಅವಿರತ, ಪ್ರಯತ್ನಗಳ ಫಲವಾಗಿ ಶ್ರೀ ಅಂಥೋಶ್ ಮಹಾರಾಷ್ಟ್ರದ ನಾಸಿಕ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಪುನಃ ಕೂಡಿದರು.

ಶ್ರೀ ಅಂಥೋಶ್ ಅವರ ಸ್ನೇಹಾಲಯದ ಪ್ರಯಾಣ 2024ರ ಆಗಸ್ಟ್ 1ರಂದು ಪ್ರಾರಂಭವಾಯಿತು. ಆ ದಿನ, ಮಂಗಳೂರು ಪಂಪ್ವೆಲ್ ರಸ್ತೆಯಲ್ಲಿ ಅತ್ಯಂತ ಕರುಣಾಜನಕ ಪರಿಸ್ಥಿತಿಯಲ್ಲಿ ಅಲೆದಾಡುತ್ತಿದ್ದಾಗ ಅವರು ಪತ್ತೆಯಾಗಿದ್ದರು. ಅವರ ಆರೋಗ್ಯ ದುರ್ಬಲವಾಗಿ ಕಾಲಿನ ಮೇಲೆ ಗಂಭೀರ ಗಾಯ ಇದ್ದು ಅವರ ವೈಯಕ್ತಿಕ ಸ್ವಚ್ಛತೆ ಹದಗೆಟ್ಟಿತ್ತು. ಜೊತೆಗೆ, ಅವರು ಮದ್ಯಪಾನ ಮತ್ತು ತಂಬಾಕು ಸೇವನೆಯ ಗಂಭೀರ ಸಮಸ್ಯೆಯಿಂದ ಪೀಡಿತರಾಗಿದ್ದರು. ಅವರ ಅಸಹಜ ವರ್ತನೆ ಮತ್ತು ಹೆಚ್ಚು ಮಾತನಾಡುವ ಪ್ರವೃತ್ತಿ ಅವರ ಮಾನಸಿಕ ಅನಾರೋಗ್ಯದ ಸಂಕೇತವಾಗಿತ್ತು.

ಅವರ ಧಾರುಣ ಪರಿಸ್ಥಿತಿಯನ್ನು ಅರಿತ ಸ್ನೇಹಾಲಯ ತಂಡ ತಕ್ಷಣವೇ ಅವರಿಗೆ ಅಗತ್ಯವಿರುವ ಚಿಕಿತ್ಸೆ, ಆರೈಕೆ ಮತ್ತು ಮನೋಧೈರ್ಯ ನೀಡಲು ಮುಂದಾಯಿತು. ಸಮಯ ಕಳೆದಂತೆ, ಅವರ ಆರೋಗ್ಯ ಹಾಗೂ ಮಾನಸಿಕ ಸ್ಥಿತಿಯಲ್ಲಿಉತ್ತಮ ಸುಧಾರಣೆ ಕಂಡುಬಂತು. ಶಾರೀರಿಕ ಮತ್ತು ಮಾನಸಿಕ ಸ್ಥಿತಿಯು ಚೇತರಿಸಿಕೊಂಡಂತೆ, ಅವರು ತಮ್ಮ ಜೀವನದ ಪ್ರಮುಖ ವಿವರಗಳನ್ನು, ವಿಶೇಷವಾಗಿ ತಮ್ಮ ಮನೆಯ ವಿಳಾಸವನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದರು.

ಈ ಮಾಹಿತಿಯ ಆಧಾರದ ಮೇಲೆ, ಸ್ನೇಹಾಲಯದ ನುರಿತ ತಂಡ ಅವರು ನೀಡಿದ ವಿವರಗಳನ್ನು ಪರಿಶೀಲಿಸಲು ಅಹೋರಾತ್ರಿ ಶ್ರಮಿಸಿತು. ಕೊನೆಗೂ, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಾಕುರ್ ಗ್ರಾಮದಲ್ಲಿ ಅವರ ಕುಟುಂಬವನ್ನು ಪತ್ತೆ ಹಚ್ಚಿ, ಅವರೊಂದಿಗೆ ಸಂಪರ್ಕ ಸಾಧಿಸಲಾಯಿತು. ಕೊನೆಗೂ, ದೀರ್ಘಕಾಲದ ಪ್ರೀತಿಯ ನಿರೀಕ್ಷೆಗೆ ತೆರೆ ಬಿದ್ದಿತು; ಶ್ರೀ ಅಂಥೋಶ್ ಅವರು ತಮ್ಮ ಕುಟುಂಬದ ಪ್ರೇಮದ ಸಿಂಚನದಲ್ಲಿ ಪುನಃ ಸೇರಿದರು.

ಸ್ನೇಹಾಲಯದ ಅವಿಚಲ ಸೇವಾ ಪರಿಪಾಲನೆಯ ಪ್ರತಿಫಲವಾಗಿ, ಮನುಕುಲದ ನಿತ್ಯ ಸಂಕಟಗಳಲ್ಲಿ ಜೀವ ನೃತ್ಯವನ್ನೂ, ಪ್ರೀತಿ ಮತ್ತು ಕಾಳಜಿಯ ಚೈತನ್ಯವನ್ನು ಪುನರುಜ್ಜೀವಿತಗೊಳಿಸುವ ಈ ಪುನರ್ಮಿಲನವು, ಅನೇಕ ಹೃದಯಗಳಲ್ಲಿ ಹೊಸ ಪ್ರಭಾತದ ಘೋಷೆಯನ್ನು ಮೂಡಿಸಿದೆ. ಶ್ರೀ ಅಂಥೋಶ್ ಅವರ ಕಥೆಯಲ್ಲಿ ಪ್ರತಿ ನೋವಿನ ಕತ್ತಲಿಗೆ ಹೊಸ ಆಶಾಕಿರಣದ ಬೆಳಕು ಹರಡಿದಂತೆ, ಸ್ನೇಹಾಲಯವೆಂಬ ಆಲಯವು ನಮ್ಮ ಮನಸ್ಸಿನಲ್ಲಿ ಸಹಾನುಭೂತಿಯ ಸುವಾಸನೆಯ ತಂಪನ್ನು ಉಂಟುಮಾಡುತ್ತದೆ.

Leave a Reply

Your email address will not be published. Required fields are marked *

Need Help?