A Mother’s Love Rekindled: Lalan Kumar Reunites with Family After 7-Month Disappearance

/

Manjeshwar: Lalan Kumar, an auto driver who had been missing for seven long months, was finally reunited with his mother on February 2, 2025, in Shahdara, Delhi. This emotional reunion marked the end of a harrowing journey for Lalan, who had been struggling with mental illness and addiction.

Lalan’s battle with mental health took a toll on every aspect of his life. His condition led to the breakdown of his marriage, with his wife leaving him and taking their children away. Once under treatment at a private hospital in Delhi, Lalan had stopped taking his medication, which worsened his mental state. In his turmoil, he ran away from home and fell into bad company, resorting to substance abuse, including ganja.

On December 19, 2024, Lalan was rescued by an dedicated auto driver, Mr. Zakariya, from Manjeswar and informed Br Joseph and team at Snehalaya. After receiving treatment and care, he was transferred to Shraddha Foundations for reunion. It was through their joint efforts that Lalan was able to heal and prepare for his return home.

Initially, his mother was reluctant to accept him back due to the pain caused by his past actions. However, with the help of counseling, she opened her heart to her son, willing to give him another chance. The reunion was filled with tears, hope, and the promise of healing.

Lalan’s story is one of resilience, highlighting the power of family and the importance of second chances.

snehalaya-lallan-reunion-09feb2025-02 snehalaya-lallan-reunion-09feb2025-03 snehalaya-lallan-reunion-09feb2025-04 snehalaya-lallan-reunion-09feb2025-05 snehalaya-lallan-reunion-09feb2025-06

ತಾಯಿಯ ಮಮತೆಯನ್ನು ಪುನರ್ಜೀವಗೊಳಿಸಿದ ಸ್ನೇಹಾಲಯಃ ಏಳು ತಿಂಗಳ ಅಗಲಿಕೆಯ ನಂತರ ಲಾಲನ್ ಕುಮಾರ್ ರವರ ಪುನರ್ಮಿಲನ

ಮಂಜೇಶ್ವರ: ಏಳು ತಿಂಗಳ ಕಾಲ ನಾಪತ್ತೆಯಾಗಿದ್ದ ಲಾಲನ್ ಕುಮಾರ್ ಎಂಬ ಆಟೋ ಚಾಲಕನನ್ನು 2025ರ ಫೆಬ್ರವರಿ 2ರಂದು ದೆಹಲಿಯ ಶಾಹ್ದಾರಾದಲ್ಲಿ ತನ್ನ ತಾಯಿಯೊಂದಿಗೆ ಪುನರ್ವಿಲೀನಗೊಳಿಸಲಾಯಿತು. ಮಾನಸಿಕ ಅಸ್ವಸ್ಥತೆ ಮತ್ತು ವ್ಯಸನದೊಂದಿಗೆ ಹೋರಾಟ ಮಾಡುತ್ತಿದ್ದ ಲಾಲನ್‌ಗೆ ಇದು ಆತನ ಜೀವನದ ಸಂಕಷ್ಟಪೂರ್ಣ ಪಯಣದ ಅಂತ್ಯವಾಗಿ ನೂತನ ಅಧ್ಯಾಯದ ಪ್ರಾರಂಬವಾಯಿತು.

ಲಾಲನ್‌ ಅವರ ಮಾನಸಿಕ ಆರೋಗ್ಯದ ಸಮಸ್ಯೆ ಅವರ ಜೀವನದ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿತ್ತು. ಈ ಅಸ್ಥಿರತೆಯು ಅವರ ದಾಂಪತ್ಯವನ್ನು ಹಾಳುಮಾಡಿತು; ಅವರ ಪತ್ನಿ ಮತ್ತು ಮಕ್ಕಳು ಆತನನ್ನು ತೊರೆದು ಅಗಲಿದ್ದರು. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಲಾಲನ್, ಕೆಲಕಾಲ ಬಳಿಕ ಔಷಧ ಸೇವೆಯನ್ನು ನಿಲ್ಲಿಸಿದರು, ಇದರಿಂದ ಅವರ ಸ್ಥಿತಿ ಇನ್ನಷ್ಟು ಗಂಭೀರವಾಯಿತು. ನೈತಿಕತೆಯ ಹಾಗೂ ಭಾವನೆಗಳ ಅಧೋಗತಿಯಲ್ಲಿ ಅವರು ಮನೆಯನ್ನು ತೊರೆದರು ಮತ್ತು ಕೆಟ್ಟ ಸಂಗಡಿಗರ ಸಹವಾಸಕ್ಕೆ ಒಳಗಾದರು, ಇದರಿಂದಾಗಿ ಗಾಂಜಾ ಸೇರಿದಂತೆ ಮಾದಕ ಪದಾರ್ಥಗಳ ಚಟಕ್ಕೆ ಒಳಗಾದರು.

2024ರ ಡಿಸೆಂಬರ್ 19ರಂದು,ಲಾಲನ್ ಅವರನ್ನು ಮಂಜೇಶ್ವರದಿಂದ ಆಟೋ ಚಾಲಕ ಶ್ರೀ ಜಕರಿಯಾ ರಕ್ಷಿಸಿದರು ಮತ್ತು ಸ್ನೇಹಾಲಯದಲ್ಲಿ ಬ್ರ ಜೋಸೆಫ್ ಮತ್ತು ತಂಡಕ್ಕೆ ಮಾಹಿತಿ ನೀಡಿದರು. ಚಿಕಿತ್ಸೆ ಮತ್ತು ಆರೈಕೆಯ ನಂತರ, ಅವರನ್ನು ಪುನರ್ಮಿಲನಕ್ಕಾಗಿ ಶ್ರದ್ಧಾ ಫೌಂಡೇಶನ್ ಮುಂಬಯ್ ಗೆ ವರ್ಗಾಯಿಸಲಾಯಿತು. ಈ ಸಂಸ್ಥೆಗಳ ಸಂಯುಕ್ತ ಪ್ರಯತ್ನ ಮತ್ತು ಅಮೋಘ ಸೇವೆಯ ಫಲವಾಗಿ ಲಾಲನ್ ಚೇತರಿಸಿಕೊಂಡು, ಮನೆಯತ್ತ ಮರಳಲು ಸಿದ್ಧರಾದರು.

ಮೊದಲಿಗೆ ತಾಯಿಯು ಲಾಲನ್ ನನ್ನು ಮರಳಿ ಸ್ವೀಕರಿಸುವುದಕ್ಕೆ ಹಿಂಜರಿದರು, ಏಕೆಂದರೆ ಲಾಲನ್ ರವರ ಹಳೆಯ ವರ್ತನೆಯ ನೋವು ತಾಯಿಯ ಸ್ಮ್ರತಿಪಟಲದಲ್ಲಿ ಇನ್ನೂ ಹಚ್ಚ-ಹಸಿರಾಗಿತ್ತು. ಆದರೆ ಸ್ನೇಹಾಲಯದ ನುರಿತ ಸಿಬ್ಬಂದಿಯ ಜೊತೆ ಆಪ್ತ ಸಮಾಲೋಚನೆ ಮತ್ತು ಸಹಾಯದಿಂದ ಅವರ ಮನಸ್ಸು ತೆರೆಯಿತು ಮತ್ತು ಮಗನಿಗೆ ಇನ್ನೊಮ್ಮೆ ಅವಕಾಶ ನೀಡಲು ಸಿದ್ಧರಾದರು. ಈ ಪುನರ್ಮಿಲನ ಕಣ್ಣೀರಿನ , ಭರವಸೆಯ, ಮತ್ತು ಚೇತರಿಕೆಯ ಒಂದು ಸಾಕ್ಷಿಯಾಗಿತ್ತು.

ಲಾಲನ್ ಅವರ ಕಥೆ ಕುಟುಂಬಿಕರ ಸಹನಶೀಲತೆಯ ಪ್ರತೀಕವಾಗಿ, ಇದು ವಿಪಥಗೊಂಡು ದೋಷಮಾರ್ಗ ಹಿಡಿದ ವ್ಯಕ್ತಿಗಳಿಗೆ ಇನ್ನೊಂದು ಅವಕಾಶ ನೀಡಿ ಅವರನ್ನು ಸತ್ಪಥ ಮತ್ತು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಸ್ನೇಹಾಲಯದ ಮಹತ್ತ್ವವನ್ನು ತೋರಿಸುತ್ತದೆ. ಲಾಲನ್ ನವರಿಗೆ ಸರಿಯಾದ ದಾರಿಯನ್ನು ತೋರಿಸಿ, ಸ್ನೇಹಾಲಯ ಪುನರ್ಜೀವ ಕೊಟ್ಟಿತ್ತು. ಮತ್ತು ಇಂದು, ಆ ಶುದ್ಧ ಮನಸ್ಸು ತಾಯಿಯ ಮಡಿಲಲ್ಲಿ ಶರಣಾಗಿದೆ. ಮುದ್ದಿನ ಮಗನ ಮರುಸಂಗಮದಿಂದ ತಾಯಿ ಕಣ್ಣೀರಿನ ಮೂಲಕವೇ ಮಾತಾಡುತ್ತಾಳೆ. ಇದು ಕೇವಲ ಪುನರ್ಮಿಲನವಲ್ಲ – ಇದು ಮಮತೆಯ ಪುನರ್ಜನ್ಮ!

Leave a Reply

Your email address will not be published. Required fields are marked *

Need Help?