Manjeshwar: In a moment filled with joy and relief, Jamal Kesari, a resident of Jharkhand, was reunited with his family after eight months of agonizing separation. On January 26, 2025, in the village of Bakudhi, Jamal finally embraced his nephew, marking the end of a long and painful chapter for his loved ones.
Jamal had been living with his brother before mysteriously disappearing, leaving his family, including his own son, in deep despair. For months, they lived in fear and uncertainty, unsure if they would ever see him again.
Hope was restored when the dedicated team from Snehalaya Charitable Trust rescued Jamal on October 6, 2024. After receiving much-needed care and support, he was transferred to the Shraddha Foundation to prepare for his reunion. On Republic Day, January 26, 2025, Jamal joyfully returned to his family, a moment that filled their hearts with gratitude and happiness.
This heartwarming reunion is a testament to the power of community, compassion, and the tireless efforts of organizations like Snehalaya & Shraddha Foundation whose mission to reunite families and help those in need continues to change lives. The Kesari family’s happiness is a shining example of the profound impact of such dedication and care.
ಜಮಾಲ್ ಕೇಸರಿಯ ಜೀವನದಲ್ಲಿ ಪ್ರೇಮದ ಸಿಂಚನವನ್ನೆರಗಿದ ಸ್ನೇಹಾಲಯಃ ಎಂಟು ತಿಂಗಳ ಬೇರ್ಪಡಿಕೆಯ ಬಳಿಕ ಹೃದಯಸ್ಪರ್ಶಿ ಪುನರ್ಮಿಲನ
ಮಂಜೇಶ್ವರ: ಅಂತರಾಳದ ಕತ್ತಲೆ ಮತ್ತು ಅಸಹಾಯಕತೆಯ ಅಸ್ಥಿರ ಬದುಕನ್ನು ಬಾಳುತ್ತಿದ್ದ ಜಾರ್ಖಂಡ್ ನಿವಾಸಿ ಜಮಾಲ್ ಕೇಸರಿ, ಎಂಟು ತಿಂಗಳ ಬೇರ್ಪಡಿಕೆಯ ಬಳಿಕ ತನ್ನ ಕುಟುಂಬವನ್ನು ಮತ್ತೆ ಸೇರಿದರು. 2025ರ ಜನವರಿ 26ರಂದು, ಬಕುಧಿ ಗ್ರಾಮದಲ್ಲಿ ಜಮಾಲ್ ತನ್ನ ಅಳಿಯನನ್ನು ಆಲಂಗಿಸಿದಾಗ ಆತನ ಕುಟುಂಬದ ದೀರ್ಘಕಾಲದ ಸಂಕಟದ ಅಧ್ಯಾಯಕ್ಕೆ ಅಂತ್ಯವಾಯಿತು.
ಜಮಾಲ್ ತಮ್ಮ ಸಹೋದರನೊಂದಿಗೆ ವಾಸಿಸುತ್ತಿದ್ದರು, ಆದರೆ ಒಂದು ದಿನ ಅವರು ನಿಗೂಢವಾಗಿ ನಾಪತ್ತೆಯಾಗಿದ್ದು, ಅವರ ಕುಟುಂಬ, ವಿಶೇಷವಾಗಿ ಆತನ ಮಗನಿಗೆ ಅಪಾರ ದುಃಖ ಉಂಟಾಗಿಸಿತ್ತು. ಬಹಳ ಸಮಯದ ವರೆಗೆ ಕುಟುಂಬಿಕರು ಪುನಃ ಒಮ್ಮೆ ಜಮಾಲ್ ಅವರನ್ನು ಕಾಣಬಹುದೇ ಎಂಬ ದಿಗ್ಭ್ರಮೆಯಲ್ಲಿ ಆತಂಕ ಹಾಗೂ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು
ಕೊನೆಗೂ ಅವರ ಭಯ-ಆತಂಕಗಳು ಸಮಾಪ್ತಿಯಾಗಿ ವಿಶ್ವಾಸದ ಬೆಳಕು ಪ್ರಜ್ವಲಿಸಿತು. 2024ರ ಅಕ್ಟೋಬರ್ 6ರಂದು ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ತಂಡ ಜಮಾಲ್ ಅವರನ್ನು ರಕ್ಷಿಸಿತು. ಅನಂತರ ಜಮಾಲ್ ಅವರಿಗೆ ಅಗತ್ಯವಾದ ಚಿಕಿತ್ಸೆ, ಆರೈಕೆ, ಉಪಚಾರ, ಹಾಗೂ ಸಹಾಯವನ್ನು ನೀಡಿ ಪುನರ್ಮಿಲನದ ಪ್ರಕ್ರಿಯೆಗಾಗಿ ಅವರನ್ನು ಶ್ರದ್ಧಾ ಫೌಂಡೇಶನ್ಗೆ ವರ್ಗಾಯಿಸಲಾಯಿತು, ಗಣರಾಜ್ಯೋತ್ಸವ ದಿನವಾದ 2025ರ ಜನವರಿ 26ರಂದು, ಜಮಾಲ್ ತಮ್ಮ ಕುಟುಂಬದ ಬಳಿ ಪುನ ಸೇರಿಕೊಂಡರು.
ಈ ಹೃದಯಸ್ಪರ್ಶಿ ಪುನರ್ಮಿಲನವು ಸಮಾಜದಲ್ಲಿ ಕಷ್ಟಪಡುವ ಜನತೆಗೆ, ಸಹಾನುಭೂತಿ, ಚಿಕಿತ್ಸೆ, ಉಪಚಾರ ನೀಡಿ ಅವರ ಮಾನವೀಯ ಘನತೆಯನ್ನು ಹಿಂತಿರಿಗಿಸುವ ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ಸಂಸ್ಥೆಗಳ ಜಂಟಿ ಶ್ರಮದ ಪ್ರತಿಫಲವಾಗಿದೆ. ಕುಟುಂಬಗಳನ್ನು ಪುನರ್ಮಿಲನಗೊಳಿಸುವ ಹಾಗೂ ಅವಶ್ಯಕತೆ ಇರುವವರ ಸಹಾಯಕ್ಕೆ ಧಾವಿಸುವ ಈ ಸಂಸ್ಥೆಗಳ ಉದಾತ್ತ ಕಾರ್ಯಗಳು ಹಲವು ಜೀವಗಳಲ್ಲಿ ರೂಪಾಂತರಣೆಯನ್ನು ತಂದಿದೆ. ಕೇಸರಿ ಕುಟುಂಬದ ಈ ಪುನರ್ಮಿಲನವು ಈ ಸಂಸ್ಥೆಗಳ ನಿಸ್ವಾರ್ಥ ಸೇವೆಗೆ ಹೊಳಪು ನೀಡುವ ಇನ್ನೊಂದು ಭವ್ಯ ಸಾಕ್ಷಿಯಾಗಿದೆ.