In a heartwarming story of rescue, rehabilitation, and reunion, the Snehalaya team successfully reunited Mr. Ningappa with his overjoyed family on January 11, 2025. This remarkable journey began on September 13, 2024, when a kind-hearted citizen brought Mr. Ningappa to Snehalaya’s attention.
At the time of his rescue, Mr. Ningappa was found wandering the streets of Arla, Bantwala, struggling with personal hygiene and exhibiting disoriented speech. The Snehalaya team provided him with comprehensive treatment, care, and support, enabling him to regain his awareness and cognitive abilities.
As his condition improved, Mr. Ningappa began recalling fragments of information about his home. The Snehalaya team meticulously gathered and verified these details, eventually leading them to his family.
On January 11, 2025, the Snehalaya team facilitated an emotional reunion between Mr. Ningappa and his loved ones at Chikkahullal, Hanagal, haveri. The moment was filled with overwhelming joy and tears of happiness, symbolizing the power of compassion and perseverance. This reunion stands as a testament to Snehalaya’s unwavering dedication to reuniting families and restoring hope to those in need.
ಶ್ರಿ. ನಿಂಗಪ್ಪರವರನ್ನು ತನ್ನ ಪ್ರೀತಿಪಾತ್ರರೊಂದಿಗೆ ಪುನಃ ಸೇರ್ಪಡೆಗೊಳಿಸಿದ ಸ್ನೇಹಾಲಯ
2025ರ ಜನವರಿ 11 ರ ದಿನ ಶ್ರೀ ನಿಂಗಪ್ಪ ಅವರ ಜೀವನದಲ್ಲಿ ಪ್ರತ್ಯಾಶೆಯ ಹೊಳೆಯನ್ನು ತಂದ ಸುಧಿನವಾಗಿತ್ತು. ದಯೆ, ಸಹಾನೊಭೂತಿ ಮತ್ತು ಅನುಕಂಪದ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಸ್ನೇಹಾಲಯ ತಂಡವು ಹಾವೇರಿಯ ಹಾನಗಲ್‌ನ ಚಿಕ್ಕಹುಲ್ಲಾಲ್‌ನಲ್ಲಿ ಶ್ರೀ ನಿಂಗಪ್ಪ ಮತ್ತು ಅವರ ಪ್ರೀತಿಪಾತ್ರರಾದ ಕುಟುಂಬದೊಂದಿಗೆ ಸೇರ್ಪಡಿಸಿ ಆತನ ಜೀವನದಲ್ಲಿ ವಿಶ್ವಾಸ ಮತ್ತು ಭರವಸೆಯನ್ನು ಬೆಳಗಿಸುವ ತನ್ನ ಅಚಲ ಬದ್ದತೆಯ ಸರ್ವೋತ್ತಮ ಉದಾಹರಣೆಯನ್ನು ತೋರಿತು. ನಿಂಗಪ್ಪನವರ ಈ ಅದ್ಭುತ ಪುನರ್ಮಿಲನದ ಪ್ರಯಾಣವು 2024ರ ಸೆಪ್ಟೆಂಬರ್ 13ರಂದು ಓರ್ವ ಸೌಮ್ಯ ಹೃದಯದ ನಾಗರಿಕರು ಶ್ರಿ. ನಿಂಗಪ್ಪ ಅವರ ಬಗ್ಗೆ ಸ್ನೇಹಾಲಯ ನೀಡಿದ ಮಾಹಿತಿಯಿಂದ ಪ್ರಾರಂಭವಾಯಿತು,
ರಕ್ಷಿಸಲಾದ ಸಮಯದಲ್ಲಿ ಶ್ರೀ ನಿಂಗಪ್ಪನವರು ಬಂಟ್ವಾಳ ತಾಲೂಕಿನ ಅರ್ಲಾ ಪ್ರದೇಶದ ಬೀದಿಗಳಲ್ಲಿಗೊತ್ತು-ಗುರಿ ಇಲ್ಲದೆ, ಅನಿರ್ದಿಷ್ಟವಾಗಿ ಅಲೆದಾಡುವ ಸ್ಥಿತಿಯಲ್ಲಿ ಕಂಡುಬಂದರು. ಶಾರೀರಿಕ ನೈರ್ಮಲ್ಯದ ತೀವ್ರ ಕೊರತೆಯಿಂದ ಬಳಲುತ್ತಿದ್ದ ಅವರ ಮಾತುಗಳು ಅಸ್ಪಷ್ಟವಾಗಿದ್ದವು. ಸ್ನೇಹಾಲಯ ತಂಡವು ಅವರಿಗೆ ಸಮಗ್ರ ವೈದ್ಯಕೀಯ ಚಿಕಿತ್ಸೆ, ಆರೈಕೆ ಮತ್ತು ಸಹಾಯವನ್ನು ಒದಗಿಸಿತು, ಇದರಿಂದ ಅವರ ಸ್ಮರಣಾಶಕ್ತಿ ಮತ್ತು ಬೌದ್ಧಿಕ ಸಾಮರ್ಥ್ಯ ಪುನಃ ಚೇತರಿಸಿಕೊಂಡು ಚೇತರಿಸಲು ಸಹಾಯವಾಯಿತು.
ಶ್ರಿ. ನಿಂಗಪ್ಪ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಂತೆ, ಅವರು ತಮ್ಮ ವಿಳಾಸದ ಅಲ್ಪಸ್ವಲ್ಪ ತುಣುಕು ಮಾಹಿತಿಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಸ್ನೇಹಾಲಯದ ಅನುಭವಿ ಸಿಬ್ಬಂದಿಗಳು ಈ ವಿವರಗಳನ್ನು ಕೂಲಂಕಷವಾಗಿ ಸಂಗ್ರಹಿಸಿ ಪರಿಶೀಲಿಸಿ, ಆತನ ಕುಟುಂಬದ ವಿಳಾಸವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.
2025ರ ಜನವರಿ 11ರಂದು, ಸ್ನೇಹಾಲಯ ತಂಡವು ಶ್ರಿ. ನಿಂಗಪ್ಪರವನ್ನು ಅವರ ಪ್ರೀತಿಪಾತ್ರರೊಂದಿಗೆ ಮಿಲನಕ್ಕಾಗಿ ಸಿದ್ಧತೆ ಮಾಡಿತು. ಪುನರ್ಮಿಲನದ ಈ ಕ್ಷಣವು ಅತ್ಯಂತ ಭಾವುಕವಾಗಿ ಅಪಾರ ಸಂತೋಷ ಹಾಗೂ ಆನಂದಭಾಷ್ಪಗಳಿಂದ ತುಂಬಿತ್ತು, ತಮ್ಮ ಕಳೆದುಹೋದ ಪ್ರೀತಿಯ ಸದಸ್ಯರನ್ನು ಮರಳಿ ಪಡೆದ ಕುಟುಂಬಿಕರು ಕರ ಜೋಡಿಸಿ ಸ್ನೇಹಾಲಯಕ್ಕೆ ಕ್ರತಜ್ನತೆ ಸಲ್ಲಿಸಿದರು. ಶ್ರಿ. ನಿಂಗಪ್ಪನವರ ಈ ಪುನರ್ಮಿಲನವ್ಜು ಬಿರಿದು ಹೋದ ಕುಟುಂಬಗಳನ್ನು ಒಂದುಗೂಡಿಸುವ ಮತ್ತು ನೊಂದು ಬೆಂದು ಬಳಲಿದ ಜೀವಗಳಲ್ಲಿ ಆಶೆ ಭರವಸೆ ನೀಡುವ ಸ್ನೇಹಾಲಯದ ಅಚಲ ಪ್ರತಿಜ್ಞೆಯ ಒಂದು ಸಾಕ್ಷಿಯಾಗಿ ಮೂಡಿ ಬಂತು.