Miraculous Reunion After 28 Years: A Mother’s Journey Back to Her Family

/

In a heartwarming story of hope and redemption, Chaitali, also known as Kanchanmala Roy, was joyfully reunited with her family in Assam on January 15, 2025, after being separated from them for an incredible 28 years.

Chaitali’s journey took a hopeful turn on September 13, 2023, when she was rescued by the Snehalaya team. She was later admitted to the Shraddha Foundation on November 25, 2024. Despite efforts to trace her identity, her family remained unknown due to the drastic changes in her appearance. Her details were widely shared on Facebook, TV news, and WhatsApp groups, but no one could recognize her.

The long-awaited breakthrough came when a woman identified the names of Chaitali’s family members, sparking a chain of events that led to her reunion. On that joyous day, her family—including her husband, brothers, sisters-in-law, and neighbors—embraced her after nearly three decades of heartache and longing.

Her two sons, one serving as an Army officer in Amritsar and the other working in Silchar, were overwhelmed with emotion to be reunited with the mother they had feared they had lost forever.

A New Chapter of Hope

This incredible reunion is a testament to the tireless dedication of the Snehalaya and Shraddha Foundations, whose unwavering efforts helped bring a family back together. Chaitali’s story is one of resilience, love, and the power of never giving up. Her miraculous return marks the beginning of a new chapter filled with hope and joy for her and her family.

snehalaya-Chaitali-reunion-31-jan-2025-02 snehalaya-Chaitali-reunion-31-jan-2025-03 snehalaya-Chaitali-reunion-31-jan-2025-04

28 ವರ್ಷಗಳ ಧೀರ್ಘ ಬೇರ್ಪಡಿಕೆಯ ನಂತರ ತಾಯಿಯ ಮಡಿಲಿಗೆ ಮರಳಿದ ಚೈತಾಲಿ

2025ರ ಜನವರಿ 15ರ ದಿನ ಚೈತಾಲಿಯವರ ಜೀವನಕ್ಕೆ ಭರವಸೆ ಮತ್ತು ನೂತನ ಹಸಿರಿನ ಹಾದಿಯನ್ನು ಪ್ರಾರಂಭಿಸುವ ಒಂದು ಅದ್ಭುತ ದಿನವಾಗಿತ್ತು. ಆ ದಿನ ಒಂದು ಹೃದಯಸ್ಪರ್ಶಿ ಘಟನೆಯಲ್ಲಿ, ಚೈತಾಲಿ,(ಕಾಂಚನಮಾಲಾ ರಾಯ್)ಜನವರಿ 15, 2025 ರಂದು ಅಸ್ಸಾಂನಲ್ಲಿ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಪುನರ್ಮಿಲನಗೊಂಡರು.2023ರ ಸೆಪ್ಟೆಂಬರ್ 13ರಂದು, ಸ್ನೇಹಾಲಯದ ಕರ್ಮಠ ತಂಡ ಅವಳನ್ನು ರಕ್ಷಿಸಿದ ನಂತರ 2024ರ ನವೆಂಬರ್ 25ರಂದು ಶ್ರದ್ದಾ ಫೌಂಡೆಶನ್ ಗೆ ವರ್ಗಾಯಿಸಲಾಗಿತ್ತು. ಅವಳ ಗುರುತು ಪತ್ತೆಹಚ್ಚಲು ಸಾಕಷ್ಟು ಪ್ರಯತ್ನಗಳು ನಡೆದರೂ, ಅವಳ ಜೀವನದ ಅನೇಕ ಅಡೆ ತಡೆ, ಏರಿಳಿತಗಳಿಂದ ಕುಟುಂಬದ ಮಾಹಿತಿಯನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಫೇಸ್‌ಬುಕ್, ಟಿವಿ ನ್ಯೂಸ್, ಮತ್ತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಕೂಡಾ ಚೈತಾಲಿಯ ವಿವರಗಳನ್ನು ಹಂಚಿಕೊಳ್ಳಲಾಗಿತ್ತು, ಆದರೆ ಯಾರಿಗೂ ಅವಳನ್ನು ಸುಳಿವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ಕೊನೆಗೂ ಬಹುಕಾಲದ ನಿರೀಕ್ಷೆಯ ತಿರುವು ತಂದುಕೊಟ್ಟದ್ದೇನಂದರೆ, ಓರ್ವ ಮಹಿಳೆ ಚೈತಾಲಿಯ ಕುಟುಂಬ ಸದಸ್ಯರ ಹೆಸರುಗಳನ್ನು ಗುರುತಿಸಿ ಚೈತಾಲಿಯ ಜೀವನದ ಕೆಲವು ಘಟನೆಗಳನ್ನು ನೆನಪಿಸಿದರು. ಈ ಮಾಹಿತಿಯೇ ಚೈತಾಲಿಯ ಪುನರ್ಮಿಲನಕ್ಕೆ ಕಾರಣವಾಯಿತು. ಅತ್ಯಂತ ಆನಂದದ ಒಂದು ಶುಭ ದಿನ ದಿನದ ಪುನೀತ ಕ್ಷಣದಲ್ಲಿ, ಚೈತಾಲಿಯ ಕುಟುಂಬ-ಆಕೆಯ ಪತಿ, ಸಹೋದರರು, ಸಹೋದರಿಯರು, ಮತ್ತು ನೆರೆಹೊರೆಯವರು- 28 ವರ್ಷಗಳ ಹೃದಯವಿದ್ರಾವಕ ಬೇರ್ಪಡಿಕೆಯ ನಂತರ ಆಕೆಯನ್ನು ಪುನಃ ಪಡೆದು ಹರ್ಷೋದ್ಘಾರದ ಕಣ್ಣೀರಿನ ಮಳೆಯನ್ನು ಸುರಿಸಿ ಚೈತಾಲಿಯನ್ನು ಆಲಂಗಿಸಿದರು.

ಅವಳ ಇಬ್ಬರು ಸುಪುತ್ರರು- ಒಬ್ಬ ಅಮೃತಸರ್‌ನಲ್ಲಿ ಸೇನೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇನ್ನೊಬ್ಬ ಸಿಲ್ಚರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ- ತಮ್ಮ ತಾಯಿಯನ್ನು ತಾವು ಸದಾಕಾಲ ಕಳೆದುಕೊಂಡಿದ್ದೇವೆ ಎಂದು ನಿರಾಶೆಗೊಂಡಿದ್ದ ಅವರು ಆಕೆಯನ್ನು ಸ್ವಸ್ಥ ಸ್ಥಿತಿಯಲ್ಲಿ ಪಡೆದು ಆನಂದಭರಿತರಾದರು.

ಭರವಸೆಯ ನೂತನ ಅಧ್ಯಾಯ

ಈ ಅದ್ಭುತ ಪುನರ್ಮಿಲನವು ಸ್ನೇಹಾಲಯ ಮತ್ತು ಶ್ರದ್ದಾ ಫೌಂಡೇಶನ್ ಗಳ ಅವಿರತ ಶ್ರಮದ ಫಲವಾಗಿದೆ, ಚೈತಾಲಿಯಂತಹ ಅನೇಕ ಬಿರಿದು ಚದುರಿದ ಕುಟುಂಬಗಳನ್ನು ಪುನಃ ಒಂದಾಗಿ ಸೇರಿಸುವಲ್ಲಿ ಪಣ ತೊಟ್ಟಿರುವ ಸ್ನೇಹಾಲಯ ಅಗಲಿಕೆಯ ನೋವನ್ನು ಅನುಭವಿಸುವ ಜನರ ಜೀವನದಲ್ಲಿ ಮತ್ತೊಮ್ಮೆ ಪ್ರೀತಿ, ಮತ್ತು ಭರವಸೆಯನ್ನು ತುಂಬಿ ಹೊಸ ಬಾಳನ್ನು ಪ್ರಾರಂಬಿಸಲು ಸ್ಪೂರ್ತಿದಾಯಕವಾಗಿದೆ.

 

Leave a Reply

Your email address will not be published. Required fields are marked *

Need Help?