Manjeshwar: In a powerful story of compassion and perseverance, the Snehalaya team reunited Mr. Rengi with his family on January 17, 2025, after months of dedicated efforts.
The journey began on August 17, 2024, when Mr. Rengi was rescued by the Snehalaya team from Jeevan Jyothi Ashram in Chully, Kasaragod. Disoriented and struggling with cognitive impairments, Mr. Rengi was in desperate need of care. The Snehalaya team immediately provided him with comprehensive treatment and emotional support, slowly helping him regain his health and awareness.
As Mr. Rengi recovered, he began to recall fragments of his past, including scattered details about his home and family. The Snehalaya team painstakingly pieced together these fragments, verifying every lead with patience and persistence. Finally, their efforts paid off when they located Mr. Rengi’s family.
On January 17, 2025, the long-awaited reunion took place. The emotional scene saw tears of joy as Mr. Rengi and his family embraced, overwhelmed by the joy of being together again after such a long and painful separation.
This heartwarming reunion is a testament to the tireless dedication of the Snehalaya team, whose unwavering commitment gave Mr. Rengi and his family a chance at a fresh start. Snehalaya remains proud to have played a vital role in rekindling hope and reuniting a family once torn apart.
ಶ್ರೀ ರೆಂಗಿಯವರ ಜೀವನದಲ್ಲಿ ಆಶೆಯ ಹೊಂಗಿರಣಃ ಪುನಃಸಂಗಮಕ್ಕೆ ‘ಸ್ನೇಹಾಲಯ’ ಕಾರ್ಯತತ್ಪರ
ಮಂಜೇಶ್ವರ: ಕರುಣೆಯ ಪ್ರತೀಕ ‘ಕಾಯಕವೇ ಕೈಲಾಸ’ಎನ್ನುವ ಮತ್ತು ಪರಿಶ್ರಮದ ಪ್ರಬಲ ಮಂತ್ರವನ್ನು ಪ್ರತಿನಿಧಿಸುತ್ತಾ, ‘ಸ್ನೇಹಾಲಯ’ ತಂಡವು 2025 ಜನವರಿ 17 ರಂದು ಶ್ರೀ ರೆಂಗಿ ಅವರನ್ನು ಅವರ ಕುಟುಂಬದೊಂದಿಗೆ ಪುನರ್ಮಿಲನಗೊಳಿಸಲು ಯಶಸ್ವಿಯಾಯಿತು. ಈ ಸಂಗಮ ಸ್ನೇಹಾಲಯ ತಂಡದ ಹಲವು ತಿಂಗಳ ಅವಿರತ ಶ್ರಮ ಮತ್ತು ತಪಸ್ಸಿನ ಫಲವಾಗಿ ಮೂಡಿಬಂತು.
ರೆಂಗಿಯ ಜೀವನದ ಮಹತ್ವದ ತಿರುವು ಪ್ರಾರಂಬವಾದದ್ದು 2024 ಆಗಸ್ಟ್ 17 ರಂದು. ಶ್ರೀ ರೆಂಗಿ ಅವರನ್ನು ಕಾಸರಗೋಡು ಜಿಲ್ಲೆಯ ಚುಳ್ಳಿಯಲ್ಲಿರುವ ‘ಜೀವನ ಜ್ಯೋತಿ ಆಶ್ರಮ’ದಿಂದ ‘ಸ್ನೇಹಾಲಯ’ ತಂಡ ರಕ್ಷಿಸಿತು. ತೀವ್ರ ಮಾನಸಿಕ ಪ್ರಕ್ಷೋಭೆಗೆ ಒಳಗಾದ ಹಾಗೂ ಅಲೆಮಾರಿ ಜೀವನಕ್ಕೆ ರೂಡಿಯಾದ ರೆಂಗಿಗೆ ಅತ್ಯುತ್ತಮ ಮಾನಸಿಕ ಉಪಚಾರ ಮತ್ತು ಸೂಕ್ತ ಆರೈಕೆ ಅತೀ ಅವಶ್ಯಕವಾಗಿತ್ತು. . ‘ಸ್ನೇಹಾಲಯ’ ತಂಡವು ತ್ವರಿತವಾಗಿ ಅವರಿಗೆ ಸಮಗ್ರ ಚಿಕಿತ್ಸೆ ಮತ್ತು ಮನೋವೈದ್ಯಕೀಯ ಬೆಂಬಲವನ್ನು ಒದಗಿಸಿತು. ಫಲಪ್ರದವಾಗಿ, ರೆಂಗಿಯವರು ಮಾನಸಿಕ ಸಂತುಲನ ಮತ್ತು ಸ್ವ-ಪ್ರತಿಷ್ಟೆಯಿಂದ ಚೇತರಿಸಲು ಸಾಧ್ಯವಾಯಿತು.
ಚೇತರಿಸಿಕೊಳ್ಳುತ್ತಿರುವಾಗ, ಶ್ರೀ ರೆಂಗಿ ಅವರ ಮನಸ್ಸು ಅವಳ ಗತ ಜೀವನದ ಘಟಣೆಗಳನ್ನು ಅವರ ಮನೆ ಮತ್ತು ಕುಟುಂಬದ ಕುರಿತಾದ ಮಾಹಿತಿಯನ್ನು ಚಿದ್ರ ಚಿದ್ರವಾಗಿ ಸ್ಮರಿಸಿಕೊಳ್ಳಲು ಆರಂಭಿಸಿತು,. ಸ್ನೇಹಾಲಯದ ನುರಿತ ತಂಡವು ಈ ಚಿದ್ರ ಚಿದ್ರ ಸ್ಮರಣೆಗಳನ್ನು ಸಹನಶೀಲತೆಯಿಂದ ಜೊತೆಗೂಡಿಸಿ, ಪ್ರತಿಯೊಂದು ಸುಳಿವನ್ನೂ ಪರಿಶೀಲಿಸಿತು. ಅವರ ಪರಿಶ್ರಮವು ಕೊನೆಗೂ ಫಲಿತವಾಗಿದ್ದು, ಶ್ರೀ ರೆಂಗಿ ಅವರ ಕುಟುಂಬವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು.
2025 ಜನವರಿ 17 ರಂದು ಧೀರ್ಘಕಾಲದ ನಿರೀಕ್ಷಿತ ಪುನಃಸಂಗಮವು ನಡೆಯಿತು. ಈ ಭಾವನಾತ್ಮಕ ಮಿಲನದಲ್ಲಿ, ಶ್ರೀ ರೆಂಗಿ ಮತ್ತು ಅವರ ಕುಟುಂಬ ಆನಂದಭಾಷ್ಪದ ಪ್ರವಾಹದಲ್ಲಿ ತೇಲುತ್ತಾ, ದೀರ್ಘಕಾಲದ ದುಃಖಮಯ ವಿಭಜನೆಯ ನಂತರ ಮತ್ತೆ ಒಗ್ಗೂಡಲು ಸಂತಸಪಟ್ಟರು.
ಈ ಹೃದಯಸ್ಪರ್ಶಿ ಪುನಃಸಂಗಮವು ‘ಸ್ನೇಹಾಲಯ’ ತಂಡದ ಅವಿರತ ಶ್ರಮ, ಭಾವಪೂರ್ಣ ಶ್ರದ್ಧೆ ಮತ್ತು ನೊಂದು ಬೆಂದವರಿಗಾಗಿ ಸಂಪೂರ್ಣ ಸಮರ್ಪಣೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ, ಇದು ಶ್ರೀ ರೆಂಗಿಯಂತವರ ಕುಟುಂಬಕ್ಕೆ ಹೊಸ ಜೀವನವನ್ನು ಆರಂಭಿಸಲು ಅವಕಾಶ ಒದಗಿಸುವ ಜೊತೆಗೆ. ‘ಸ್ನೇಹಾಲಯ’ ತನ್ನ ಈ ಮಾನವ ಕಲ್ಯಾಣ ಕಾರ್ಯದ ಮೂಲಕ ಸಮಾಜದ ಕ್ಶತ ವೀಕ್ಶತ ಕುಟುಂಬಗಳನ್ನು ಪುನಃ ಸೇರಿಸುವಲ್ಲಿ ತನ್ನ ಪಟ್ಟು ಬಿಡದ ಪ್ರಯತ್ನದ ಒಂದು ಜ್ವಲಂತ ಉದಾಹರಣೆಯಾಗಿದೆ.