Manjeshwar, January 16, 2025 – In a heartwarming turn of events, 45-year-old Sharada was joyfully reunited with her family after being separated for four months.
Sharada had been admitted to the Snehalaya Psycho-social Rehabilitation Center for Women on September 12, 2024, following her rescue by the Snehalaya team from Mangalore Central Railway Station. After several counseling sessions and careful efforts to trace her background, the team succeeded in locating her family and re-establishing contact.
On January 16, 2025, Sharada’s emotional reunion with her family in Shirasi, Karwar, was filled with joy and relief. Her family, overjoyed at her return, expressed profound gratitude for being reunited with their loved one.
Snehalaya’s Ongoing Commitment to Reunification
This reunion highlights Snehalaya’s unwavering commitment to reuniting individuals with their families and guiding them through the rehabilitation process. The organization continues to provide comprehensive care, psychological support, and rehabilitation services for those in need, ensuring that more families can experience the joy of reconnection.
ಸ್ನೇಹಾಲಯದ ಶ್ರೀರಕ್ಷೆಯ ಆವರಣ; ಶಾರದೆಯ ಭಾವನಾತ್ಮಕ ಪುನರ್ಮಿಲನ
ಮಂಜೇಶ್ವರ, ಜನವರಿ 16, 2025 – ಭಾವೋಲ್ಲಾಸದ ಒಂದು ಹೃದಯಸ್ಪರ್ಶಿ ಘಟನೆಯಲ್ಲಿ, 45 ವರ್ಷ ಪ್ರಾಯದ ಶಾರದೆ ನಾಲ್ಕು ತಿಂಗಳ ಅವಧಿಯ ಬಳಿಕ ಪುನಃ ತನ್ನ ಕುಟುಂಬದೊಂದಿಗೆ ಸೇರಿಕೊಂಡರು.
2024ರ ಸೆಪ್ಟೆಂಬರ್ 12ರಂದು ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸ್ನೇಹಾಲಯದ ತಂಡದಿಂದ ರಕ್ಷಿಸಲ್ಪಟ್ಟ ಶಾರದೆಯನ್ನು, ಮಂಜೇಶ್ವರ ಸ್ಥಿತ, ಸ್ನೇಹಾಲಯ ಮನೋಸಾಮಾಜಿಕ ಪುನರ್ವಸತಿ ಕೇಂದ್ರದ ಮಹಿಳಾ ವಿಭಾಗದಲ್ಲಿ ದಾಖಲಿಸಲಾಗಿತ್ತು. ಹಲವಾರು ಸಮಾಲೋಚನೆಗಳು ಮತ್ತು ಅವರ ಹಿನ್ನೆಲೆಯನ್ನು ಪತ್ತೆಹಚ್ಚುವ ನಿಖರ ಪ್ರಯತ್ನಗಳ ನಂತರ, ಸ್ನೇಹಾಲಯದ ತಂಡವು ಶಾರದೆಯ ಕುಟುಂಬವನ್ನು ಪತ್ತೆಹಚ್ಚಿ ಅವರೊಂದಿಗೆ ಸಂಪರ್ಕ ಸ್ಥಾಪಿಸಲು ಯಶಸ್ವಿಯಾದರು.
2025ರ ಜನವರಿ 16ರಂದು ಕಾರವಾರದ ಶಿರಸಿಯಲ್ಲಿ ಶಾರದೆಯು ತನ್ನ ಕುಟುಂಬದೊಂದಿಗೆ ಪುನರ್ಮಿಲನಗೊಂಡರು. ಈ ಮಿಲನದಲ್ಲಿ ಸಿರಿ-ಅಶ್ರುಗಳ ಪ್ರವಾಹವೇ ಹರಿಯುವಂತೆ ಕಂಡುಬಂತು. ಶಾರದೆಯು ಮನೆಗೆ ಮರಳಿದ ಸಂದರ್ಭದಲ್ಲಿ ಅವರ ಕುಟುಂಬದವರು ಅತೀವ ಆನಂದವನ್ನು ವ್ಯಕ್ತಪಡಿಸುತ್ತಾ, ಸ್ನೇಹಾಲಯದ ಸಹಾಯಕ್ಕಾಗಿ ಕರಜೋಡಿಸಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಶಾರದೆಯನ್ನು ತನ್ನ ಕುಟುಂಬದೊಂದಿಗೆ ಒಂದುಗೂಡಿಸುವ ಈ ಉದಾತ್ತ ಕಾರ್ಯವು ಬಿರಿದು ಚದುರಿದ ಕುಟುಂಬಗಳನ್ನು ಒಂದುಗೂಡಿಸುವಲ್ಲಿ ಸ್ನೇಹಾಲಯದ ಅಚಲವಾದ ಬದ್ಧತೆಯನ್ನು ತೋರಿಸುತ್ತದೆ. ಈ ಸಂಸ್ಥೆಯು ಪುನರ್ವಸತಿ ಪ್ರಕ್ರಿಯೆಯ ಮೂಲಕ ವ್ಯಕ್ತಿಗಳನ್ನು ಮಾರ್ಗದರ್ಶಿಸುತ್ತಿದ್ದು, ಅಗತ್ಯವಿರುವವರಿಗೆ ಸಮಗ್ರ ಆರೈಕೆ, ಮನೋವೈಜ್ಞಾನಿಕ ಬೆಂಬಲ, ಮತ್ತು ಪುನರ್ವಸತಿಯಂತಹ ಸೇವೆಗಳನ್ನು ನೀಡುತ್ತದೆ. ಇದರ ಮೂಲಕ, ಇನ್ನಷ್ಟು ಕುಟುಂಬಗಳು ಮಿಲನದ ಸಂತೋಷವನ್ನು ಅನುಭವಿಸುವಂತೆ ಮಾಡುವುದು ಸ್ನೇಹಾಲಯದ ಪ್ರಾಥಮಿಕ ಉದ್ದೇಶವಾಗಿದೆ.