Lallan Kumar Gupta finds home at Snehalaya

/

Manjeshwar, December 19, 2024 – In a heartbreaking tale of abandonment and survival, 42-year-old Lallan Kumar Gupta has been rescued from the streets, thanks to the compassion of an auto driver, Mr. Zakariya, and the swift action of the dedicated team at Snehalaya, led by its founder, Br. Joseph Crasta. Lallan, a Hindi-speaking man, was found in a state of severe neglect, highlighting the harsh realities faced by many in similar situations.

The caring team at Snehalaya has provided Lallan with immediate care and shelter, but their efforts alone are not enough. His circumstances demand urgent attention from authorities and compassionate individuals alike. While his past remains a mystery, with the support of the community, Lallan can have the opportunity to regain his dignity and rebuild his life.

If you have any information about Lallan’s family or background, please contact Snehalaya at 9446547033 or 7994087033. Together, we can make a difference and offer Lallan the second chance he deserves.

snehalaya-lallan-rescue-12jan2025-02 snehalaya-lallan-rescue-12jan2025-03 snehalaya-lallan-rescue-12jan2025-04

ಲಲ್ಲನ್ ಕುಮಾರ್ ಗುಪ್ತರ ವಿಯೋಗದ ಅಂಧಕಾರದಲ್ಲಿ ಆಶಾಕಿರಣವಾದ ಸ್ನೇಹಾಲಯ

ಮಂಜೇಶ್ವರ, ಡಿಸೆಂಬರ್ 19, 2024 – ಬದುಕಿನ ಹೋರಾಟದ ಹೃದಯವಿದ್ರಾವಕ ಕಥೆಯಲ್ಲಿ, 42 ವರ್ಷದ ಲಲ್ಲನ್ ಕುಮಾರ್ ಗುಪ್ತ ಅವರನ್ನು ಮಾನವೀಯತೆಯ ಸಹಾನುಭೂತಿಯ ಪ್ರಜ್ಞೆಯಲ್ಲಿಓರ್ವ ಸಾಮಾನ್ಯ ಆಟೊ ಚಾಲಕರಾದ ಶ್ರೀ ಜಕರಿಯಾರವರು ಲಲ್ಲನ್ ಕುಮಾರನನ್ನು ದಯನೀಯ ಪರಿಸ್ಥಿತಿಯಲ್ಲಿ ಕಂಡು ಸ್ನೇಹಾಲಯಕ್ಕೆ ತಿಳಿಸಿದರು. ನಂತರ ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ಟಾ ಅವರ ನೇತೃತ್ವದಲ್ಲಿ ಸ್ನೇಹಾಲಯದ ತಂಡ ಆತನನು ರಕ್ಷಿಸಿತು. ಹಿಂದಿ ಮಾತನಾಡುವ ಲಲ್ಲನ್ ಗುಪ್ತ ಅವರು ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಜೀವನ ಅನೇಕರ ಬದುಕಿನ ಕಷ್ಟಕರ ಹಾದಿಯನ್ನು ಸ್ಮರಿಸುತ್ತದೆ.

ಸ್ನೇಹಾಲಯದ ಕರುಣಾಮಯ ತಂಡ ಲಲ್ಲನ್ ಅವರಿಗೆ ತಕ್ಷಣದ ಆರೈಕೆ ಮತ್ತು ಆಶ್ರಯವನ್ನು ಒದಗಿಸಿದೆ, ಆದರೆ ಈ ಪ್ರಯತ್ನಗಳು ಮಾತ್ರ ಸಾಕಾಗುತ್ತಿಲ್ಲ. ಲಲ್ಲನ್ ಅಂಥವರ ದಯನೀಯ ಪರಿಸ್ಥಿತಿ ನಮ್ಮ ಅಧಿಕಾರಿಗಳು ಮತ್ತು ಕರುಣೆಯ ಹೃದಯ ಹೊಂದಿದ ನಾಗರಿಕರಿಂದ ತಕ್ಷಣದ ಗಮನವನ್ನು ಬೇಡುತ್ತದೆ. ಲಲ್ಲನ್ ಕುಮಾರ್ ಅವರ ಹಿನ್ನಲೆ ಕೊಂಚ ರಹಸ್ಯಮಯವಾಗಿದ್ದು, ಕೇವಲ ಸಮಾಜದ ಬೆಂಬಲದಿಂದ, ಲಲ್ಲನ್ ಅವರ ಗೌರವವನ್ನು ಪುನರ್‌ಸ್ಥಾಪಿಸಿ ಅವರಿಗೆ ನೂತನ ಬದುಕನ್ನು ನೀಡಬಹುದಾಗಿದೆ.

ಈ ಕುರಿತು ಲಲ್ಲನ್ ಅವರ ಕುಟುಂಬ ಅಥವಾ ಹಿನ್ನಲೆ ಬಗ್ಗೆ ಯಾವುದೇ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು 9446547033 ಅಥವಾ 7994087033 ಗೆ ಸ್ನೇಹಾಲಯವನ್ನು ಸಂಪರ್ಕಿಸಿ. ನಾವೆಲ್ಲಾ ಒಟ್ಟಾಗಿ, ಲಲ್ಲನ್ ಅವರ ಜೀವನಕ್ಕೆ ಒಂದು ಹೊಸ ತಿರುವನ್ನು ನೀಡಿ ಆತನಿಗೆ ಬದುಕಲು ಒಂದು ಅವಕಾಶವನ್ನು ಕಲ್ಪಿಸಬಹುದು.

 

 

Leave a Reply

Your email address will not be published. Required fields are marked *

Need Help?