MANJESHWAR, DECEMBER 13, 2024:
In a reunion filled with tears and joy, Shobhraj—affectionately known as Babli Ajay Bhai—reunited with his family after four painful years of separation. His mother and brother, who spent years in uncertainty and anguish, broke down in emotion as they finally embraced their long-lost loved one.
Shobhraj, a hardworking farmer from Rampuriya in Bundi, Rajasthan, battled mental illness for over a decade. Four years ago, he disappeared without a trace. The sudden loss devastated his family and filled them with fear that they would never see him again. They searched relentlessly, but hope began to fade—until a miracle happened.
In November 2023, a compassionate team from Snehalaya found Shobhraj living on the streets. He was lost, vulnerable, and in need of care. After months of rehabilitation at the Snehalaya Center, Shobhraj transferred to Shraddha Foundation in March 2024. This move started the process of reconnecting him with his family.
On December 13, 2024, the day his loved ones prayed for finally arrived. Shobhraj’s mother and brother welcomed him back with open arms. Their tears of sorrow turned into tears of joy as they held him close again.
A Testament to Hope and Resilience
This emotional reunion stands as a testament to the resilience of family bonds and the enduring strength of love. It also highlights the tireless dedication of those who work to bring lost souls back home. Shobhraj’s return offers hope to families everywhere who are waiting for their loved ones to find their way back.
ನಾಲ್ಕು ವರ್ಷಗಳ ಸುದೀರ್ಘ ಪ್ರತ್ಯೇಕತೆಯ ನಂತರ ಶೋಭರಾಜ್ ಕುಟುಂಬದೊಂದಿಗೆ ಮತ್ತೆ ಒಂದಾಗುವ ಭಾವನಾತ್ಮಕ ಹಾಗೂ ಸಂತೋಷದ ಪುನರ್ಮಿಲನ
ಮಂಜೇಶ್ವರ, ಡಿಸೆಂಬರ್ 13, 2024: ಕಣ್ಣೀರು ಮತ್ತು ಸಂತೋಷದಿಂದ ತುಂಬಿದ ಹೃದಯಸ್ಪರ್ಶಿ ಈ ಪುನರ್ಮಿಲನದಲ್ಲಿ, ಪ್ರೀತಿಯಿಂದ ಬಾಬ್ಲಿ ಅಜಯ್ ಭಾಯ್ ಎಂದು ಕರೆಯಲ್ಪಡುವ ಶೋಭರಾಜ್ ಅವರು ನಾಲ್ಕು ವರ್ಷಗಳ ನೋವಿನ ಪ್ರತ್ಯೇಕತೆಯ ನಂತರ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡರು. ಅನಿಶ್ಚಿತತೆ ಮತ್ತು ಯಾತನೆಯಲ್ಲಿ ಹಲವು ವರುಷಗಳ ನಂತರ ಅವರ ತಾಯಿ ಮತ್ತು ಸಹೋದರ ಜೊತೆ ಅಂತಿಮವಾಗಿ ಸೇರಿಕೊಂಡಿರುತ್ತಾರೆ, ತಮ್ಮ ಬಹುಕಾಲದಿಂದ ಕಳೆದುಹೋದ ಪ್ರೀತಿಪಾತ್ರರನ್ನು ಅಪ್ಪಿಕೊಂಡು ತಮ್ಮ ಭಾವುಕತೆಯಿಂದ ಹೊರಬಂದರು.
ರಾಜಸ್ಥಾನದ ಬುಂಡಿಯ ರಾಮ್ಪುರಿಯ ಶ್ರಮಿಕ ರೈತ ಶೋಭರಾಜ್ ಒಂದು ದಶಕದಿಂದ ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಡುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ, ಅವರು ಯಾವುದೇ ಮಾಹಿತಿ ಇಲ್ಲದೆ ಕಣ್ಮರೆಯಾದರು, ಅವರ ಕುಟುಂಬವು ಚಿಂತೆಗೀಡಾಯಿತು ಮತ್ತು ಅವರು ಅವನನ್ನು ಎಂದಿಗೂ ನೋಡುವುದಿಲ್ಲ ಎಂದು ಭಯಪಟ್ಟಿದ್ದರು. ನಿರಂತರ ಹುಡುಕಾಟದ ಹೊರತಾಗಿಯೂ, ಒಂದು ಪವಾಡ ಸಂಭವಿಸುವವರೆಗೆ ಭರವಸೆ ಮಸುಕಾಗಲು ಪ್ರಾರಂಭಿಸಿತು. ನವೆಂಬರ್ 2023 ರಲ್ಲಿ, ಸ್ನೇಹಾಲಯದ ಕರುಣೆಯ ತಂಡವು ಶೋಭರಾಜ್ ಅವರನ್ನು ಬೀದಿಗಳಲ್ಲಿ ವಾಸಿಸುತ್ತಿರುವುದನ್ನು ನೋಡಿದರು ಮತ್ತು ಅವರನ್ನು ರಕ್ಷಿಸಿ ಸ್ನೇಹಾಲಯ ಪುರುಷರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಸ್ನೇಹಾಲಯ ಕೇಂದ್ರದಲ್ಲಿ ತಿಂಗಳುಗಳ ಕಾಲ ಆರೈಕೆ ಮತ್ತು ಚಿಕಿತ್ಸೆಯ ನಂತರ, ಶೋಭರಾಜ್ ಅವರನ್ನು ಮಾರ್ಚ್ 2024 ರಲ್ಲಿ ಶ್ರದ್ಧಾ ಫೌಂಡೇಶನ್ಗೆ ವರ್ಗಾಯಿಸಲಾಯಿತು ಮತ್ತು ಅವರ ಕುಟುಂಬದೊಂದಿಗೆ ಮತ್ತೆ ಸೇರುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಡಿಸೆಂಬರ್ 13, 2024 ರಂದು, ಅವನ ಪ್ರೀತಿಪಾತ್ರರು ಪ್ರಾರ್ಥಿಸಿದ ದಿನ ಅಂತಿಮವಾಗಿ ಬಂದೇಬಿಟ್ಟಿತ್ತು ಶೋಭರಾಜ್ ಅವರನ್ನು ಅವರ ತಾಯಿ ಮತ್ತು ಸಹೋದರನ ಮಡಿಲಿಗೆ ಮರಳಿ ಸ್ವಾಗತಿಸಲಾಯಿತು, ಅವರ ದುಃಖದ ಕಣ್ಣೀರು ಸಂತೋಷದ ಕಣ್ಣೀರಾಗಿ ರೂಪಾಂತರಗೊಂಡಿತು.
ಈ ಭಾವನಾತ್ಮಕ ಪುನರ್ಮಿಲನವು ಕುಟುಂಬಗಳನ್ನೂ ಮರಳಿ ತರಲು ಕೆಲಸ ಮಾಡುವವರ ದಣಿವರಿಯದ ಸಮರ್ಪಣೆಗೆ ಪ್ರಬಲ ಸಾಕ್ಷಿಯಾಗಿದೆ. ಶೋಭ್ರಾಜ್ರಂತಹ , ಎಲ್ಲೆಡೆ ತಮ್ಮ ಪ್ರೀತಿಪಾತ್ರರು ತಮ್ಮ ದಾರಿಯನ್ನು ಕಂಡುಕೊಳ್ಳಲು ಕಾಯುತ್ತಿರುವ ಕುಟುಂಬಗಳಿಗೆ ಭರವಸೆಯ ದಾರಿದೀಪವಾಗಿ ಇಂತಹ ಸಂಸ್ಥೆಗಳು ಇನ್ನಷ್ಟು ಹುಟ್ಟಿಬರಲಿ.