Sadhrunisa, a resident of Basila, Chandauli in Uttar Pradesh, had been struggling with untreated mental illness for five years. Her condition led to her disappearance in 2022. Despite her family’s efforts, including filing a police complaint, they were unable to locate her.
On November 11, 2024, Snehalaya’s dedicated team rescued Sadhrunisa and ensured her safety. She was then admitted to Shraddha Foundation’s rehabilitation center, where she received care and support to prepare for her return home.
On November 30, 2024, Sadhrunisa was finally reunited with her family. The emotional reunion brought tears to her children’s eyes as they embraced her. Relieved family members and neighbors shared their joy and gratitude for her return.
A Story of Hope
This inspiring event highlights the tireless efforts of Snehalaya and Shraddha Foundation in reuniting missing individuals with their families. Their dedication continues to bring hope and happiness to families like Sadhrunisa’s, reminding us of the power of compassion and community support.
ಸಂತಸದ ಪುನರ್ಮಿಲನ : ಸದ್ರುನಿಸಾ ಎರಡು ವರ್ಷಗಳ ನಂತರ ಕುಟುಂಬದೊಂದಿಗೆ ಮರಳಿ ಸೇರುವ ಸಂತೋಷಮಯ ಕ್ಷಣ
ಮಂಜೇಶ್ವರ: ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ನ ಸಂಯೋಜಿತ ಪ್ರಯತ್ನದಿಂದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಮಹಿಳೆ ಸದ್ರುನಿಸಾ ಉತ್ತರ ಪ್ರದೇಶದಲ್ಲಿ ಯಶಸ್ವಿಯಾಗಿ ತನ್ನ ಕುಟುಂಬವನ್ನು ಸೇರಿದ್ದಾರೆ.
ಉತ್ತರ ಪ್ರದೇಶದ ಬಸಿಲಾ, ಚಂದೌಲಿಯ ನಿವಾಸಿ, ಸದ್ರುನಿಸಾ ಐದು ವರ್ಷಗಳಿಂದ ಚಿಕಿತ್ಸೆ ಸಿಗದೆ ಇರುವ ಕಾರಣ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು, ಇದು 2022 ರಲ್ಲಿ ನಾಪತ್ತೆಯಾಗಲು ಕಾರಣವಾಯಿತು. ಆಕೆಯ ಕುಟುಂಬವು ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದರು, ಆದರೆ ಯಾವುದೇ ಸುಳಿವು ಅವರಿಗರಲ್ಲಿಲ್ಲ, ಸ್ನೇಹಾಲಯ ಮಂಜೇಶ್ವರ ಪುನರ್ವಸತಿ ಕೇಂದ್ರದ ತಂಡವು ನವೆಂಬರ್ 11, 2024ರಂದು ಸದ್ರುನಿಸರವನ್ನು ರಕ್ಷಿಸಿದರು
ಆಕೆಯ ರಕ್ಷಣೆಯ ನಂತರ, ಸ್ನೇಹಾಲಯದಲ್ಲಿ ಅವರಿಗೆ ಪ್ರೀತಿಯ ಆರೈಕೆ, ಮಾನಸಿಕ ಬೆಂಬಲ ಮತ್ತು ಸೂಕ್ತ ಚಿಕಿತ್ಸೆಯನ್ನು ನೀಡಲಾಯಿತು. ತಂಡದವರು, ಸದ್ರುನಿಸ ಅವರ ಚೇತರಿಕೆ ಮಾತ್ರವಲ್ಲ, ಅವರಿಗೆ ಭರವಸೆಯನ್ನು ನೀಡುವುದರಲ್ಲಿ ಯಶಸ್ವಿಯಾದರು ಹಾಗೂ ಅವರಿಗೆ ಸುರಕ್ಷಿತವಾಗಿ ತನ್ನ ಪ್ರೀತಿಯವರ ಬಳಿಗೆ ಹಿಂತಿರುಗಿಸುವ ಮಾರ್ಗವನ್ನು ತೋರಿಸಿದರು.
ಆಕೆಯನ್ನು ಮನೆಗೆ ಹಿಂತಿರುಗಿಸುವ ಸಲುವಾಗಿ ಶ್ರದ್ಧಾ ಫೌಂಡೇಶನ್ನ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಯಿತು. ನವೆಂಬರ್ 30, 2024 ರಂದು, ಸದ್ರುನಿಸಾ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಮತ್ತೆ ಸೇರಿಕೊಂಡಿದ್ದಾರೆ, ಭಾವನಾತ್ಮಕ ಪುನರ್ಮಿಲನವು ತನ್ನ ಮಕ್ಕಳನ್ನು ಅಪ್ಪಿಕೊಂಡಾಗ ಕಣ್ಣೀರು ಹಾಕುವ ದ್ರಶ್ಯ ಮನಕಲುಕುವಂತಿತ್ತು, ಸದ್ರುನಿಸಳ ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಈ ಹೃತ್ಪೂರ್ವಕ ಪುನರ್ಮಿಲನವು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ನ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ, ಕಳೆದುಹೋದ ವ್ಯಕ್ತಿಗಳನ್ನು ಅವರ ಪ್ರೀತಿಪಾತ್ರರೊಂದಿಗೆ ಮತ್ತೆ ಸೇರಿಸುವಲ್ಲಿ, ಸದ್ರುನಿಸಾ ಅವರಂತಹ ಕುಟುಂಬಗಳಿಗೆ ಭರವಸೆ ಮತ್ತು ಸಂತೋಷವನ್ನು ಕೊಡುತ್ತದೆ.
ತಾಯಿಯ ಪ್ರೀತಿಯನ್ನು ಮರಳಿ ಮನೆಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಸ್ಥೆಗಳಿಗೆ ಅಪಾರ ಕೃತಜ್ಞತೆಗಳನ್ನು ಕುಟುಂಬದವರು ವ್ಯಕ್ತಪಡಿಸಿದರು.
ಸದ್ರುನಿಸ ಮತ್ತು ಅವರಂತಹ ಅನೇಕರನ್ನು ಪುನರ್ಜೀವನಕ್ಕೆ ತರುವ, ಕುಟುಂಬದೊಂದಿಗೆ ಪುನಃ ಸೇರಿಸುವ ಮತ್ತು ಸಮಾಜದಲ್ಲಿ ಪುನಃಸ್ಥಾಪನೆಗೆ ಸಹಾಯ ಮಾಡುವ ಇಂತಹ ಸಂಸ್ಥೆಗಳು ಇನ್ನಷ್ಟು ಹುಟ್ಟಿಬರಲಿ.