Manjeshwar, November 19, 2024 – In a moving display of love and resilience, 30-year-old Sonu was finally reunited with his family after an agonizing four months of separation.
The joy and relief on his parents’ faces were undeniable as they finally embraced their son, who had been missing since April. For years, Sonu, a resident of Mumbai, had silently battled mental illness without treatment, which had taken a toll on his life. As a result, his disappearance plunged his family into despair, fearing the worst. However, hope returned when, on August 21, 2024, the compassionate team from Snehalaya Charitable Trust rescued him from the streets, offering him medical care and much-needed counseling.
Subsequently, the emotional reunion, facilitated by Snehalaya and the Shraddha Foundation, marked the end of a long and painful chapter. Understandably, Sonu’s parents, overwhelmed with gratitude, expressed their heartfelt thanks to both organizations for not only reuniting them with their son but also giving him a chance at a healthier, happier life.
Ultimately, the reunion stands as a powerful reminder of the importance of compassion, care, and the tireless efforts of those dedicated to helping people find their way back home.
”ಅಳಲಿನ ಅವಸಾನಃ ವಿಯೋಗದ ಅಂಧಕಾರದಲ್ಲಿ ಆಶಾಕಿರಣವಾಗಿ ತೋರಿದ ಸೋನುನ ಪುನರ್ಮಿಲನ”
ಮಂಜೇಶ್ವರ, ನವೆಂಬರ್ 19, 2024 – ಪ್ರೀತಿಯ, ತಾಳ್ಮೆಯ ಮತ್ತು ಆತ್ಮಸ್ಥೈರ್ಯದ ಅಮೂಲ್ಯ ದೃಷ್ಟಾಂತವಾಗಿ, 30 ವರ್ಷದ ಸೋನು, ನಾಲ್ಕು ತಿಂಗಳ ಅತ್ಯಂತ ನೋವಿನ ವಿಯೋಗದ ನಂತರ ತನ್ನ ಕುಟುಂಬದೊಂದಿಗೆ ಪುನರ್ಮಿಲನಗೊಂಡನು. ಎರಡನೇದು, ಏಪ್ರಿಲ್ ತಿಂಗಳಿಂದ ಕಾಣೆಯಾಗಿದ್ದ ಮಗನನ್ನು ಮತ್ತೆ ಅಪ್ಪಿಕೊಳ್ಳುವಾಗ ಪೋಷಕರ ನಯನ ಕಮಲಗಳ ಹರ್ಷದ ತುಂತುರು ಹನಿಗಳು ಧಾರಾಕಾರವಾಗಿ ಸುರಿಯುತ್ತಿದ್ದವು.
ಆದಾಗ್ಯೂ, ಮುಂಬೈನ ನಿವಾಸಿಯಾಗಿರುವ ಸೋನು, ಒಂದು ದಶಕಕ್ಕೂ ಹೆಚ್ಚು ಕಾಲ ಮನೋವೈಕಲ್ಯದಿಂದ ಕಂಗಾಲಾಗಿದ್ದರೂ, ಚಿಕಿತ್ಸೆ ಪಡೆಯದೇ ಇದ್ದುದರಿಂದ ದುರಂತಗಳ ಹೊಡೆತದಲ್ಲಿ ಆತನ ಜೀವನ ತತ್ತರಿಸಿ ಹೋಯಿತು. ಇದಲ್ಲದೆ, ಸೋನು ಕಣ್ಮರೆಯಾಗಿದ್ದ ದಿನದಿಂದ ಅವರ ಕುಟುಂಬ ಬತ್ತಿದ ನದಿಯಂತಾಗಿ, ಮನೆಯ ನಂಟು-ನಲಿವುಗಳು ನಿಶ್ಶಬ್ದವಾಗಿ ಮರೆಯಾಗಿದ್ದವು.ಆದರೆ, ಸ್ನೇಹಾಲಯ ತಂಡವು 2024ರ ಆಗಸ್ಟ್ 21ರಂದು ದಾರಿ ಬದಿಯಲ್ಲಿದ್ದ ಸೋನು ಅವರನ್ನು ರಕ್ಷಿಸಿ, ವೈದ್ಯಕೀಯ ಚಿಕಿತ್ಸೆ ಮತ್ತು ಸಲಹಾ ಸೇವೆಗಳನ್ನು ನೀಡುವ ಮೂಲಕ ಅವರ ಬದುಕಿನ ಅಶಾ ದೀಪವನ್ನು ಮತ್ತೆ ಬೆಳಗಿಸಿತು.
ಇದೇ ಕಾರಣಕ್ಕೆ, ಸ್ನೇಹಾಲಯ ಮತ್ತು ಶ್ರದ್ದಾ ಫೌಂಡೇಶನ್ ಮುಂಬೈ ಅವರ ಸಹಯೋಗದ ಮೂಲಕ ಈ ಭಾವುಕ ಪುನರ್ಮಿಲನದ ಕ್ಷಣವು ಒಂದು ದುಃಖಭರಿತ ಅಧ್ಯಾಯಕ್ಕೆ ಅಂತ್ಯವನ್ನು ಸೂಚಿಸಿತು. ಇದು ಮಾತ್ರವಲ್ಲ, ಸೋನು ಅವರ ತಂದೆತಾಯಿಗಳು ತಮ್ಮ ಮಗನೊಂದಿಗೆ ಪುನಃ ಸೇರಲು ಕಾರಣವಾದ ಈ ಸಂಸ್ಥೆಗಳಿಗೆ ಅನಂತ ಕೃತಜ್ಞತೆ ವ್ಯಕ್ತಪಡಿಸಿದರು. ಅದರ ಜೊತೆಗೆ, ಅವರ ಮಗನಿಗೆ ಆರೋಗ್ಯಕರ ಹಾಗೂ ಸಂತೋಷಕರ ಜೀವನವನ್ನು ನೀಡಲು ಸಹಾಯ ಮಾಡಿದಕ್ಕಾಗಿ ಆಭಾರ ವ್ಯಕ್ತಪಡಿಸಿದರು.
ಹೀಗಾಗಿ, ಜನ ಸೇವೆಯೆ ಜನಾರ್ಧನ ಸೇವೆ ಎಂಬ ಮೌಲ್ಯವನ್ನು ಈ ಪುನರ್ಮಿಲನ ಮತ್ತೊಮ್ಮೆ ನಮ್ಮ ಗಮನವನ್ನು ಸೆಳೆಯುತ್ತದೆ. ಒಟ್ಟಾರೆ, ಸೋನು ತನ್ನ ಕುಟುಂಬವನ್ನು ತಲುಪಲು ಸಾಧ್ಯವಾದದ್ದು ಕೇವಲ ತನ್ನ ಪೋಷಕರ ಪ್ರಾರ್ಥನೆಗಳಿಂದ ಮಾತ್ರವಲ್ಲ, ಆದರೆ ಸೇವಾ ಮನೋಭಾವದಿಂದ. ಇದೇ ರೀತಿ, ಅವನನ್ನು ಹುಡುಕುವ ಕಠಿಣ ಪ್ರಯತ್ನಗಳಲ್ಲಿ ಕೈಜೋಡಿಸಿದವರು ಮಾನವೀಯತೆಯ ಬೆಳಕನ್ನು ಬೆಳಗಿಸಿದರು.
ಅಂತಿಮವಾಗಿ, ಈ ಘಟನೆಯು ನಮ್ಮೆಲ್ಲರಿಗೂ ಒಂದೇ ಸಂದೇಶವನ್ನು ಕೊಡುವಂತಿದೆ – ಸೇವೆಯ ಹಾದಿಯಲ್ಲಿ ನಾವು ಕೈ ಚಾಚಿದಾಗ, ದೇವರ ಸಹಾಯವೇ ನಮ್ಮ ಮೂಲಕ ಕಾರ್ಯನಿರ್ವಹಿಸುತ್ತಿದೆ.