Manjeshwar, November 19, 2024: In a moment filled with overwhelming emotions and uncontainable joy, Shanti was finally reunited with her beloved son after a heart-wrenching separation of four months. The reunion, which took place amidst tears, hugs, and heartfelt prayers, marked the end of a distressing chapter for the family and the beginning of new hope.
Shanti’s ordeal began in July 2024 when, while traveling to visit relatives, she mistakenly boarded the wrong train and found herself stranded in Kerala. Alone and disoriented, her world turned upside down. Her sons and extended family launched an extensive search, spreading word far and wide, but their efforts initially bore no fruit.
Fate took a kind turn when Snehalaya Charitable Trust in Kasaragod, Kerala, found Shanti wandering on the streets on September 8, 2024. Malnourished and distressed, she was immediately given medical care and counseling. Over the next two months, the team at Snehalaya worked tirelessly to heal her physically and emotionally while simultaneously tracing her family.
Through a collaborative effort with Shraddha Foundation, they were finally able to locate Shanti’s family. The moment of reunion was nothing short of miraculous. As Shanti stepped out to meet her son, her eyes welled up with tears of relief and joy. Her son ran to her, holding her in an embrace that seemed to close the gap of months spent in anxiety and despair.
The entire village gathered to witness the reunion, their hearts swelling with gratitude for the selfless efforts of Snehalaya and Shraddha Foundation. The reunion also served as a reminder of the power of humanity and compassion.
”ಶಾಂತಿಯ ಹೃದಯಸ್ಪರ್ಶಿ ಪುನರ್‌ಮಿಲನಃ ಆಶೆ ಭರವಸೆಯ ಹೊಂಗಿರಣ”
ಮಂಜೇಶ್ವರ, ನವೆಂಬರ್ 19, 2024: ಭಾವಪೂರ್ಣ ಒಂದು ಸಂತಸಭರಿಸುವ ಘಟನೆಯಲ್ಲಿ ನಾಲ್ಕು ತಿಂಗಳುಗಳಿಂದ ತಮ್ಮ ಪುತ್ರನಿಂದ ಅಗಲಿದ್ದ ಶಾಂತಿ ಕೊನೆಗೂ ತಮ್ಮ ಪ್ರಿಯ ಮಗನನ್ನು ಮತ್ತೆ ಪಡೆದರು. ಆನಂದ ಭಾಷ್ಪಗಳಿಂದ ತುಂಬಿದ ಈ ಮಿಲನದಲ್ಲಿ, ಶಾಂತಿಯ ಕುಟುಂಬದ ವೇದನೆಯ ಅಧ್ಯಾಯ ಮುಗಿದು ಹೊಸ ಆಶೆ-ಭರವಸೆಯ ಹೊಸತೊಂದು ಅಧ್ಯಾಯ ಪ್ರಾರಂಭವಾಯಿತು.2024ರ ಜುಲೈನಲ್ಲಿ, ಸಂಬಂಧಿಕರ ಮನೆಗೆ ಹೋಗಲು ಪ್ರಯಾಣಿಸುತ್ತಿದ್ದ ಶಾಂತಿ ತಪ್ಪು ಗ್ರಹಿಕೆಯಿಂದ ಬೇರೆ ರೈಲಿಗೆ ಹತ್ತಿ ಕೇರಳದಲ್ಲಿ ಸಿಕ್ಕಿಹಾಕಿಕೊಂಡರು. ಒಂಟಿಯಾಗಿ, ಗೊಂದಲಗೊಂಡ ಸ್ಥಿತಿಯಲ್ಲಿ, ಅವರ ಜೀವನ ಸಂಪೂರ್ಣವಾಗಿ ತತ್ತರಿಸಿಹೋಯಿತು. ಇನ್ನೊಂದೆಡೆ ಇವರ ಮಕ್ಕಳು ಮತ್ತು ವಿಸ್ತೃತ ಕುಟುಂಬದವರು ಶಾಂತಿಯನ್ನು ಹುಡುಕಲು ಭಗೀರಥ ಪ್ರಯತ್ನ ನಡೆಸಿದರು ಆದರೆ ಅವರ ಪ್ರಯತ್ನಗಳಿಗೆ ಫಲ ದೊರೆಯಲಿಲ್ಲ.ಆದರೆ ದೈವಾದ್ರಷ್ಟದಿಂದ, 2024ರ ಸೆಪ್ಟೆಂಬರ್ 8ರಂದು ಕಾಸರಗೋಡು, ಕೇರಳದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಶಾಂತಿಯನ್ನು ರಸ್ತೆಯಲ್ಲಿ ಅಲೆಮಾರಿ ಸ್ಥಿತಿಯಲ್ಲಿ ಕಂಡು, ಅವರನ್ನು ತಮ್ಮ ಆಶ್ರಯದಲ್ಲಿ ತೆಗೆದುಕೊಂಡರು. ದುರ್ಬಲವಾಗಿದ್ದ ಶಾಂತಿಗೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಮತ್ತು ಸಮಾಲೋಚನೆ ಒದಗಿಸಿತು. ಮುಂದಿನ ಎರಡು ತಿಂಗಳಲ್ಲಿ, ಸ್ನೇಹಾಲಯದ ತಂಡ ಶಾಂತಿಯನ್ನು ದೈಹಿಕ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳಲು ಶ್ರಮಪಟ್ಟಿದ್ದು, ಜೊತೆಗೆ ಅವರ ಕುಟುಂಬವನ್ನು ಹುಡುಕುವ ಪ್ರಯತ್ನವನ್ನು ಆರಂಬಿಸಿದರು.ಶ್ರದ್ಧಾ ಫೌಂಡೇಶನ್ ಮುಂಬೈ ಯವರ ಸಹಕಾರದೊಂದಿಗೆ, ಕೊನೆಗೂ ಶಾಂತಿಯ ಕುಟುಂಬವನ್ನು ಪತ್ತೆಹಚ್ಚಲಾಯಿತು. ಮಿಲನದ ಕ್ಷಣ ನಿಜಕ್ಕೂ ಅದ್ಭುತವಾಗಿತ್ತು. ತಮ್ಮ ಮಗನನ್ನು ಭೇಟಿಯಾದಾಗ ಶಾಂತಿಯ ಕಣ್ಣೀರಿನ ಕಟ್ಟೆ ಒಡೆದು ಮಗನನ್ನು ತಬ್ಬಿಕೊಂಡರು ಮಗನು ಸಹಾ ಅವಳನ್ನು ತಬ್ಬಿಕೊಂಡು ದೀರ್ಘ ಸಮಯದ ದುಃಖ ಮತ್ತು ಚಿಂತೆಯನ್ನು ವ್ಯಕ್ತಪಡಿಸಿದರು.
ಮಿಲನವನ್ನು ನೋಡಲು ಸಂಪೂರ್ಣ ಗ್ರಾಮದವರು ಸೇರಿದ್ದು, ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ನ ಮಾನವೀಯ ಯುಕ್ತತೆಯನ್ನು ಕೊಂಡಾಡಿದರು. ಈ ಭಾವುಕ ಪುನರ್ಮಿಲನ ಮಾನವೀಯ ಕರುಣೆಯ ಒಂದು ಜ್ವಲಂತ ಸಾಕ್ಷಿಯಾಗಿ ರೂಪ ಪಡೆಯಿತು.