On June 8, 2024, the Snehalaya team, with the help of Mr. Kiran Karkala, a well-wisher of the organization, rescued a mentally ill person named Arvind, who was wandering on the National Highway near Mulki, Mangalore. He was admitted to the Snehalaya Psychosocial Rehabilitation Centre for Men.
During his treatment at Snehalaya, Arvind’s condition improved significantly. As part of his ongoing rehabilitation, he was transferred to the Shraddha Rehabilitation Foundation, Mumbai.
On September 6, 2024, Arvind was successfully reunited with his family in the Supaul district of Bihar after being separated from them for five years. The reunion was an emotional moment for the family. Arvind had been suffering from mental illness for the past eight years, and his family expressed heartfelt gratitude to both Snehalaya and Shraddha Rehabilitation Centres for their selfless efforts.




ದಿನಾಂಕ 08.06.2024 ರಂದು ಸ್ನೇಹಾಲಯ ತಂಡದವರು, ಮಂಗಳೂರಿನ ಮುಲ್ಕಿ ಸಮೀಪದ
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡುತಿದ್ದ ಅರವಿಂದ್ ಎಂಬ ಮಾನಸಿಕ ಅಸ್ವಸ್ಥನನ್ನು, ಸಮಾಜ ಸೇವಕ ಅಂತೆಯೇ ಸ್ನೇಹಾಲಯದ ಹಿತೈಷಿಯಾದ ಶ್ರೀ ಕಿರಣ್ ಕಾರ್ಕಳ ಅವರ ಸಹಾಯದಿಂದ ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.
ಸ್ನೇಹಾಲಯದ ಚಿಕಿತ್ಸೆಯಿಂದ ಆತನ ಅರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂತು, ಆತನ ಪುನರ್ಮಿಲನ ಪ್ರಕ್ರೀಯೆಯನ್ನು ಸುಗಮಗೊಳಿಸಲು ಅತನನ್ನು ಮುಂಬೈಯ ಶೃದ್ಧಾ ರೀಹ್ಯಾಬಿಲೆಶನ್ ಫೌಂಡೆಶನ್ ಗೆ ವರ್ಗಾಯಿಸಲಾಯಿತು.
ದಿನಾಂಕ 06.09.2024ರಂದು ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಆತನ ಪುನರ್ಮಿಲನವಾಯಿತು. ಐದು ವರ್ಷದ ಬಳಿಕ ಆತನನ್ನು ನೋಡಿ ಕುಟುಂಬಿಕರು ತುಂಬಾ ಸಂತೋಷಪಟ್ಟರು ಅಂತೆಯೇ ಭಾವುಕರಾದರು.ಕುಟುಂಬದಿಂದ ದೊರೆತ ಮಾಹಿತಿಯ ಪ್ರಕಾರ ಆತನ ನಿಜ ಹೆಸರು ಸಹಾನಿ ಸದಾ ಮತ್ತು ಆತ ಕಳೆದ ಎಂಟು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ .ಈ ಪುನರ್ಮಿಲನದ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶೃದ್ದಾ ಸಂಸ್ಥೆಗಳಿಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.