Rajendra Bahadur Chand, a young man suffering from mental illness, was admitted to the Snehalaya Psycho-Social Rehabilitation Centre for Men by the Udayam Project in Kozhikode on June 7, 2024. While receiving treatment at Snehalaya, his condition improved significantly, and he actively participated in the center’s activities. As part of his further rehabilitation, he was sent to the Shraddha Rehabilitation Foundation in Mumbai.
On August 2, 2024, Rajendra was successfully reunited with his family in Nepal after being separated from them for 10 months. The reunion was an emotional moment for the family, who revealed that Rajendra had been studying in the 10th grade before he left for Mumbai without informing anyone. In Mumbai, he worked at a hotel, where he eventually developed a mental illness.
The family expressed their heartfelt gratitude towards both Snehalaya and Shraddha Rehabilitation Centers for their selfless service and support in reuniting them with their loved one
ರಾಜೇಂದ್ರ ಬಹಾದ್ದೂರ್ ಚಂದ್ ಎಂಬ ಸುಮಾರು 21ವರ್ಷ ಪ್ರಾಯದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವಕನನ್ನು ಕೋಝಿಕ್ಕೋಡ್ ಉದಯಂ ಪ್ರಾಜೆಕ್ಟ್ ಇದರ ವತಿಯಿಂದ ಆತನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಸ್ನೇಹಾಲಯದ ಚಿಕಿತ್ಸೆಯಿಂದ ಆತನ ಅರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂತು ಮತ್ತು ಆತ ಸ್ನೇಹಾಲಯದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಪ್ರಾರಂಭಿಸಿದನು ಆದರೆ ಆತನ ಪುನರ್ಮಿಲನ ಪ್ರಕ್ರೀಯೆಯನ್ನು ಸುಗಮಗೊಳಿಸಲು ಅತನನ್ನು ಮುಂಬೈಯ ಶೃದ್ಧಾ ರೀಹ್ಯಾಬಿಲೆಶನ್ ಫೌಂಡೆಶನ್ ಗೆ ವರ್ಗಾಯಿಸಲಾಯಿತು.
ದಿನಾಂಕ 02.08.2024ರಂದು ಭಾರತದ ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ಆತನ ಪುನರ್ಮಿಲನವಾಯಿತು. ಹತ್ತು ತಿಂಗಳ ಬಳಿಕ ಆತನನ್ನು ನೋಡಿ ಕುಟುಂಬಿಕರು ತುಂಬಾ ಸಂತೋಷಪಟ್ಟರು ಅಂತೆಯೇ ಭಾವುಕರಾದರು.ಕುಟುಂಬದಿಂದ ದೊರೆತ ಮಾಹಿತಿಯ ಪ್ರಕಾರ ರಾಜೇಂದ್ರ ಮನೆಯಲ್ಲಿ ಯಾರಿಗೂ ಹೇಳದೆ ಮುಂಬೈಗೆ ಹೊಗಿದ್ದ, ಅಲ್ಲಿಂದ ಕೇರಳಕ್ಕೆ ಹೋಗಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶೃದ್ದಾ ಸಂಸ್ಥೆಗಳಿಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.



