On April 14, 2024, a person named Praveen Kurtha, who was wandering the streets of Bondel, was rescued and admitted to the Snehalaya Psychosocial Rehabilitation Centre for Men by Mr. Jovial Crasta and Mr. Santhosh Pinto, trustees of Snehalaya, according to information provided by Mr. Prakash Pinto, another trustee of Snehalaya. After receiving care and treatment at Snehalaya, Praveen’s condition improved, and he was transferred to Shraddha in Mumbai for further reunification efforts.
On May 23, 2024, Praveen was reunited with his family in the Sundargarh district of Odisha. His family was happy to see him after one year of separation. According to his family, Praveen had been suffering from mental illness for the past two years, and due to his excessive drinking habit, he had left home. The family expressed their gratitude towards Snehalaya and Shraddha centres for their selfless efforts in facilitating the reunion.
ದಿನಾಂಕ 14.04.2024 ರಂದು ಮಂಗಳೂರಿನ ಬೊಂದೆಲ್ ಬಳಿ, ಬೀದಿಯಲ್ಲಿ ಅಲೆದಾಡುತಿದ್ದ ಪ್ರವೀಣ್ ಕುರ್ತಾ ಎಂಬ ಮಾನಸಿಕ ಅಸ್ವಸ್ಥನನ್ನು ಸ್ನೇಹಾಲಯದ ಟ್ರಸ್ಟಿಗಳಾದ ಶ್ರೀ ಜೋವಿಯಲ್ ಕ್ರಾಸ್ತಾ ಹಾಗು ಶ್ರೀ ಸಂತೋಷ್ ಪಿಂಟೋರವರು, ಸ್ನೇಹಾಲಯದ ಟ್ರಸ್ಟಿಯಾದ ಶ್ರೀ ಪ್ರಕಾಶ್ ಪಿಂಟೋರವರಿಂದ ದೊರೆತ ಮಾಹಿತಿಯ ಮೇರೆಗೆ ರಕ್ಷಿಸಿ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು.ಸ್ನೇಹಾಲಯದ ಆರೈಕೆ ಮತ್ತು ಚಿಕಿತ್ಸೆಯಿಂದ ಕೆಲವೇ ದಿನಗಳಲ್ಲಿ ಆತನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂತು. ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಆತನನ್ನು ಮುಂಬೈಯ ಶ್ರದ್ದಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 23.05.2024ರಂದು ಒಡಿಶಾದ ಸುಂದರ್‌ಗಢ ಜಿಲ್ಲೆಯಲ್ಲಿರುವ ಆತನ ಕುಟುಂಬದೊಂದಿಗೆ ಪುನರ್ಮಿಲನವಾಯಿತು. ಒಂದು ವರ್ಷದ ಬಳಿಕ ಮನೆಗೆ ಮರಳಿದ ಪ್ರವೀಣ್ ಅವನನ್ನು ನೋಡಿ ಆತನ ತಾಯಿ, ತುಂಬಾ ಸಂತೋಷಪಟ್ಟರು. ಪ್ರವೀಣ್ ಕಳೆದ 2 ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದ ಮತ್ತು ಮಧ್ಯಪಾನ ಸೇವನೆಯಿಂದ ಆತನ ಆರೋಗ್ಯ ಮತ್ತಷ್ಟು ಹದೆಗೆಟ್ಟಿತ್ತು ಮತ್ತು ಒಂದು ದಿನ ಆತ ಹೇಳದೆ ಮನೆಯಿಂದ ನಾಪತ್ತೆಯಾಗಿದ್ದ.ಈ ಪುನರ್ಮಿಲನ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ ಮತ್ತು ಶ್ರದ್ಧಾ ಸಂಸ್ಥೆಗಳಿಗೆ ಕುಟುಂಬಿಕರು ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿದರು.



