On January 27, 2024, an individual named Narayan Murthy, approximately 35 years old, was rescued from the streets of Bantwal. Mr. Rodney Dsouza, a compassionate well-wisher of Snehalaya, facilitated his admission to the Snehalaya Psychosocial Rehabilitation Centre for Men, ensuring his improved care, treatment, and potential reunion with his family.
After receiving essential care and treatment at Snehalaya, his mental health condition improved. Due to the dedicated efforts of the Snehalaya and Shraddha teams, his address was successfully traced. On May 23, 2024, he was reunited with his family in Kolar, Karnataka. The family was happy to see him after eight months. Mr. Basavraj, a staff member of Shraddha, informed the family about his illness and the necessary medications. The family expressed their gratitude towards Snehalaya and Shraddha centres for their selfless service.



ದಿನಾಂಕ 27.01.2024 ರಂದು ಬಂಟ್ವಾಳದ ಬೀದಿಯಿಂದ ನಾರಾಯಣ ಮೂರ್ತಿ ಎಂಬ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಯನ್ನು ಸ್ನೇಹಾಲಯದ ಹಿತೈಷಿಯಾದ ಶ್ರೀ ರೊಡ್ನಿ ಡಿ ಸೋಜಾರವರು ರಕ್ಷಿಸಿ ಆತನ ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದರು.
ಸ್ನೇಹಾಲಯದಲ್ಲಿ ದೊರೆತ ಆರೈಕೆ ಮತ್ತು ಚಿಕಿತ್ಸೆ ಪಡೆದ ನಂತರ ಅವರ ಮಾನಸಿಕ ಆರೋಗ್ಯ ಸ್ಥಿತಿ ಸುಧಾರಿಸಿತು. ಸ್ನೇಹಾಲಯ ಮತ್ತು ಶ್ರದ್ಧಾ ತಂಡಗಳ ಸಮರ್ಪಿತ ಪ್ರಯತ್ನದಿಂದಾಗಿ, ಅವರ ವಿಳಾಸವನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಯಿತು.
ಮೇ 23, 2024 ರಂದು ಅವರು ತಮ್ಮ ಕುಟುಂಬದೊಂದಿಗೆ ಕರ್ನಾಟಕದ ಕೋಲಾರದಲ್ಲಿ ಮತ್ತೆ ಒಂದಾದರು. ಎಂಟು ತಿಂಗಳ ನಂತರ ಅವರನ್ನು ನೋಡಿ ಮನೆಯವರು ತುಂಬಾ ಖುಷಿಪಟ್ಟರು. ಶ್ರದ್ಧಾ ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ಬಸವರಾಜ ಅವರು ನಾರಾಯಣ ಮೂರ್ತಿಯ ಅನಾರೋಗ್ಯದ ಬಗ್ಗೆ ಮತ್ತು ಅಗತ್ಯವಿರುವ ಔಷಧಿಗಳ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದರು. ಸ್ನೇಹಾಲಯ ಮತ್ತು ಶ್ರದ್ಧಾ ಕೇಂದ್ರಗಳ ಈ ನಿಸ್ವಾರ್ಥ ಸೇವೆಗೆ ಕುಟುಂಬದವರು ಕೃತಜ್ಞತೆ ಸಲ್ಲಿಸಿದರು.