On October 9, 2023, a 28-year-old woman named Yamuna, who had been under treatment at Kripa Bhavan Charitable Trust in Kannur for the past three and a half years, was admitted to Snehalaya Psycho-Social Rehabilitation Centre for Women for enhanced care and treatment.
Upon her arrival, Yamuna exhibited symptoms of mental health-related problems, including aggressive behavior, self-talk, and other issues. Following comprehensive care and treatment at Snehalaya, her condition significantly improved. During counseling sessions, she disclosed her whereabouts, leading to her further reunion process, and she was subsequently transferred to Shraddha in Mumbai.
On January 15, 2024, she was successfully reunited with her family in the Kumbrabheem district of Telangana. Her family expressed immense joy at her return after a prolonged absence of four years. According to her family, Yamuna had been grappling with mental illness for the past five years. Yamuna, who is a mother, had been reported missing by her husband, who had filed a complaint at the local police station, yielding no results.
The family conveyed their heartfelt gratitude to Snehalaya, Shraddhaand Kripa Bhavan Centres, for their selfless service in facilitating Yamuna’s recovery and reuniting her with her loved ones.



ದಿನಾಂಕ 09.10.2023ರಂದು, ಕೇರಳದ ಕಣ್ಣೂರಿನ ಕೃಪಾ ಭವನ್ ಚಾರಿಟಬಲ್ ಟ್ರಸ್ಟ್ ನಲ್ಲಿ ಕಳೆದ ಮೂರುವರೆ ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 28 ವರ್ಷ ಪ್ರಾಯದ ಯಮುನಾ ಎಂಬ ಮಹಿಳೆಯನ್ನು ಅಲ್ಲಿಯ ಸಿಬ್ಬಂದಿಗಳು, ಆಕೆಯ ಉತ್ತಮ ಆರೈಕೆ ಮತ್ತು ಚಿಕಿತ್ಸೆಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೆಂದ್ರಕ್ಕೆ ದಾಖಲಿಸಿದ್ದರು.
ಪ್ರಾರಂಭದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದ ಯಮುನಾ ಆಕ್ರಮಣಕಾರಿ ನಡುವಳಿಕೆ, ಸ್ವಯಂ ಮಾತುಕತೆ ಮುಂತಾದ ಮಾನಸಿಕ ಲಕ್ಷಣಗಳನ್ನು ತೋರುತಿದ್ದಳು ಆದರೆ ಸ್ನೇಹಾಲಯದಲ್ಲಿ ದೊರೆತ ಉತ್ತಮ ಚಿಕಿತ್ಸೆಯಿಂದಾಗಿ ಆಕೆಯ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆಗಳು ಕಂಡು ಬಂದವು ಅಂತೆಯೆ ಆಪ್ತ ಸಮಾಲೋಚನೆಯಲ್ಲಿ ಆಕೆ ತನ್ನ ಕುಟುಂಬದ ಬಗ್ಗೆ ವಿವರಗಳನ್ನು ಹಂಚಿಕೊಂಡಳು.ಮುಂದಿನ ಪುನರ್ಮಿಲನ ಪ್ರಕ್ರೀಯೆಗಾಗಿ ಆಕೆಯನ್ನು ಮುಂಬೈಯ ಶ್ರದ್ಧಾ ಕೇಂದ್ರಕ್ಕೆ ವರ್ಗಾಯಿಸಲಾಯಿತು.
ದಿನಾಂಕ 15.01.2024ರಂದು ತೆಲಂಗಾಣದ ಕುಂಬ್ರಭೀಮ್ ಜಿಲ್ಲೆಯಲ್ಲಿರುವ ಆಕೆಯ ಕುಟುಂಬದೊಂದಿಗೆ ಆಕೆಯ ಪುನರ್ಮಿಲನವಾಯಿತು.4 ವರ್ಷಗಳ ಸುದೀರ್ಘ ವಿರಾಮದ ನಂತರ ಆಕೆಯನ್ನು ಮರಳಿ ನೋಡಿ ಆಕೆಯ ಕುಟುಂಬವು ತುಂಬಾ ಸಂತೋಷಪಟ್ಟಿತು.ಆಕೆಯ ಕುಟುಂಬದ ಪ್ರಕಾರ ಆಕೆ ಕಳೆದ 5 ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು.ಆಕೆಗೆ ಮದುವೆಯಾಗಿದ್ದು ಒಂದು ಮಗು ಕೂಡ ಇದೆ.ಕುಟುಂಬವು ಈ ಪುನರ್ಮಿಲನ ಕಾರ್ಯಕ್ಕೆ ಸಹಕರಿಸಿದ ಸ್ನೇಹಾಲಯ, ಶ್ರದ್ದಾ ಮತ್ತು ಕೃಪಾ ಭವನ್ ಸಂಸ್ಥೆಗಳಿಗೆ ತುಂಬು ಹೃದಯದ ಕೃತಜ್ನತೆಗಳನ್ನು ಸಲ್ಲಿಸಿತು.