Successful Re-Union of Mahesh with his family at Gujarat

/

A destitute named Mahesh who was wandering near St. Agnes College, Mangalore was Rescued and brought to snehalaya by the Trustee of Snehalaya Charitable Trust Mr. Prakash Pinto & Mr. Jeethan Antony Dsouza(Social Worker). During the admission, the patient was Shabbily dressed and was not having personal hygiene. The Counsellors observed psychiatric symptoms such as Self-talking, Self-Smiling, Restless Behaviour, Loosening of association, etc.

Through medication, yoga, therapeutic activities, and therapies, as well as through vocational and occupational training and counseling he has improved his Physical and Mental health. During the Counselling Session, he shared his family details and whereabouts  and for further reunion process he was shifted to Shruddha Mumbai
On 18/11/2022 Mahesh was reunited with his family at Gujarat. His mother received him. According to his family, he was missing for 1 year. His family members were very happy after receiving him and they promised to take care of him. He was provided with one month of medicine and a treatment plan. The family thanked Snehalaya Psycho-Social Rehabilitation Centre and Shradda Centers for their selfless service.
ಮಹೇಶ್ ಎಂಬ ನಿರಾಶ್ರಿತನನ್ನು ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಶ್ರೀ ಪ್ರಕಾಶ್ ಪಿಂಟೋ ಹಾಗು ಸಮಾಜ ಸೇವಕರಾದ ಜೀತನ್ ಡಿಸೋಜ ಅವರು ಮಂಗಳೂರಿನ ಸಂತ ಆಗ್ನೆಸ್ ಕಾಲೇಜ್  ಬಳಿಯಿಂದ ರಕ್ಷಿಸಿ ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಿದರು. ದಾಖಲಾತಿಯ ಸಂದರ್ಭದಲ್ಲಿ ಅವರು  ಸ್ವಯಂ ಮಾತನಾಡುವ ಸ್ವಭಾವ ಮತ್ತು ಅಸಂಬದ್ದ ನಡವಳಿಕೆಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು.
ಅವರಿಗೆ ಅವಶ್ಯಕ ವೈದ್ಯಕೀಯ ಸೇವೆಯೊಂದಿಗೆ ಧ್ಯಾನ, ಯೋಗ, ಚಿಕಿತ್ಸಕ ಚಟುವಟಿಕೆಗಳು, ವಿವಿಧ ಚಿಕಿತ್ಸೆಗಳು, ಒಳಾಂಗಣ, ಹೊರಾಂಗಣ ಆಟಗಳು ಮತ್ತು ಸಮಾಲೋಚನೆಗಳನ್ನು ನೀಡಲಾಯಿತು. ಈ ಮೂಲಕ ಅವರು ಚೇತರಿಸಿಕೊಂಡರು ಮತ್ತು ಅವರ ಮನೋವೈದ್ಯಕೀಯ ಲಕ್ಷಣಗಳು ಕ್ರಮೇಣ ನಿಯಂತ್ರಣಕ್ಕೆ ಬಂದವು . ಅವರು ತಮ್ಮ ಕುಟುಂಬದ ವಿವರಗಳು ಮತ್ತು ವಿಳಾಸವನ್ನು ಹಂಚಿಕೊಂಡರು. ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ, ಅವರನ್ನು ಶ್ರದ್ಧಾ ಫೌಂಡೇಶನ್ ಮುಂಬೈಗೆ ಕರೆದೊಯ್ಯಲಾಯಿತು.
ದಿನಾಂಕ 18-11-2022ರಂದು ಗುಜರಾತಿನ ಅವರ ಕುಟುಂಬದೊಂದಿಗೆ ಅವರ ಪುನರ್ಮಿಲನವಾಯಿತು. ಮಹೇಶ್ ಅವರ ತಾಯಿ ಹಾಗು ಕುಟುಂಬ ಅವರನ್ನು ಹಿಂಪಡೆದಕ್ಕೆ ಅತ್ಯಂತ ಸಂತೋಷಪಟ್ಟರು.ಅವರ ಕುಟುಂಬದ ಪ್ರಕಾರ, ಅವರು ಕಳೆದ 1 ವರ್ಷದಿಂದ ಕಾಣೆಯಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು.ಅವರಿಗೆ ಒಂದು ತಿಂಗಳ ಔಷಧಿ ಮತ್ತು ನಂತರದ ಚಿಕಿತ್ಸಾ ಯೋಜನೆಯನ್ನು ಒದಗಿಸಲಾಯಿತು. ಮಹೇಶ್ ರವರನ್ನು ತನ್ನ ಕುಟುಂಬದೊಂದಿಗೆ ಒಂದುಗೂಡಿಸುವ ನಿಸ್ವಾರ್ಥ ಸೇವೆಗಾಗಿ ಅವರ ಕುಟುಂಬವು ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್‌ಗೆ ಧನ್ಯವಾದಗಳನ್ನು ಅರ್ಪಿಸಿತು.

 

Leave a Reply

Your email address will not be published. Required fields are marked *

Need Help?