Namdev Yadav happily reunited with his family at Bihar

/

Namdev Yadav aged 38 years was brought to Snehalaya by the trustee Mr. Prakash Pinto from the Kankanady bus Stand on 14-3-2022. He had Psychiatric symptoms and was with poor hygiene, and shabbily dressed .

Through medication, yoga, therapeutic activities, and indoor and outdoor games he got recovered and decreased his psychiatric problems.

On inquiry, he revealed his family details and whereabouts. Then his family was contacted and was taken to Shraddha foundation for further reunion process. On 26-05-2022 he was reunited with his family at Bihar. His father Mahadev Yadav shared that Namdev was suffering from mental illness for 22 years, and was on treatment.

His family happily received him and thanked the entire Snehalaya team and Shraddha Foundation for caring and reuniting Namdev with his family at Bihar

ಬಿಹಾರದಲ್ಲಿನ ತನ್ನ ಕುಟುಂಬದೊಂದಿಗೆ ನಾಮದೇವ್ ಯಾದವ್ ಅವರ ಸಂತೋಷದ ಪುನರ್ಮಿಲನ

38 ವರ್ಷ ವಯಸ್ಸಿನ ನಾಮದೇವ್ ಯಾದವ್ ಅವರನ್ನು ಟ್ರಸ್ಟಿ ಶ್ರೀ ಪ್ರಕಾಶ್ ಪಿಂಟೋ ಅವರು 14-3-2022 ರಂದು ಕಂಕನಾಡಿ ಬಸ್ ನಿಲ್ದಾಣದಿಂದ ಸ್ನೇಹಾಲಯಕ್ಕೆ ಕರೆತಂದರು. ಅವರು ಮನೋವೈದ್ಯಕೀಯ ರೋಗಲಕ್ಷಣಗಳನ್ನು ಹೊಂದಿದ್ದರು ಮತ್ತು ಶಾರೀರಿಕ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿದ್ದರು ಹಾಗೂ ಅನ್ನ ಆಹಾರವಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿದ್ದರು.

ಔಷಧಿ, ಯೋಗ, ಚಿಕಿತ್ಸಕ ಚಟುವಟಿಕೆಗಳು ಮತ್ತು ಒಳಾಂಗಣ ಮತ್ತು ಹೊರಾಂಗಣ ಚಟುವಟಕೆಗಳ ಮೂಲಕ ಅವರಲ್ಲಿ ಕ್ರಮೇಣ ಚೇತರಿಕೆ ಕಂಡು ಬಂತು.

ವಿಚಾರಣೆ ನಡೆಸಿದಾಗ, ಅವರು ತಮ್ಮ ಕುಟುಂಬದ ವಿವರಗಳನ್ನು ತಿಳಿಸಿದರು, ಆ ನಂತರ ಅವರ ಕುಟುಂಬವನ್ನು ಸಂಪರ್ಕಿಸಲಾಯಿತು ಮತ್ತು ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ ಶ್ರದ್ಧಾ ಫೌಂಡೇಶನ್‌ಗೆ ಕರೆದೊಯ್ಯಲಾಯಿತು.

26-05-2022 ರಂದು ಅವರು ಬಿಹಾರದಲ್ಲಿ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾದರು. ನಾಮದೇವ್ 22 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ತಂದೆ ಮಹದೇವ್ ಯಾದವ್ ತಿಳಿಸಿದರು. ಅವರ ಕುಟುಂಬವು ಅವರನ್ನು ಸಂತೋಷದಿಂದ ಬರಮಾಡಿಕೊಂಡಿತು. ನಾಮದೇವ್ ಅವರನ್ನು ಉಪಚರಿಸಿದ್ದಕ್ಕೆ ಅವರ ಕುಟುಂಬದವರು ಇಡೀ ಸ್ನೇಹಾಲಯ ತಂಡ ಮತ್ತು ಶ್ರದ್ಧಾ ಫೌಂಡೇಶನ್‌ಗೆ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *

Need Help?