Mother Received her son back after 8 years.

/

The trustee of Snehalaya Mr. Prakash Pinto found Azeem aged about 35 years who was wandering on the streets near fisheries college Yekkoor Mangalore. He had psychiatric symptoms with poor personal hygiene and was brought to Snehalaya on 10-9-2022.

 Through meditation, yoga, therapeutic activities, therapies, indoor and outdoor activities, and counseling his condition was improved, and decreased his psychiatric symptoms. As per the details shared by him, he was reunited with his family on 29-11-2022 with the support of the Shraddha Foundation. He was received by his Mother Jai Bunnisa at Kirugavalu at Mandya of Karnataka. He was suffering from mental illness for 8 years and was on treatment. After receiving Azeem, family members were happy and filled with joy.

 They thanked the team of Snehalaya Manjeshwar and Shraddha Mumbai for their selfless efforts in the journey from the rescue of Azeem to his reunion with the family.

 

8 ವರ್ಷಗಳ ನಂತರ  ತನ್ನ ತಾಯಿಯನ್ನು ಮರಳಿ ಸೇರಿದ ಅಜಿಮ್.

ಸ್ನೇಹಾಲಯದ ಟ್ರಸ್ಟಿ ಶ್ರೀ ಪ್ರಕಾಶ್ ಪಿಂಟೋ ರವರು ಮಂಗಳೂರು ಎಕ್ಕೂರಿನ ಮೀನುಗಾರಿಕಾ ಕಾಲೇಜು ಬಳಿಯ ರಸ್ತೆಯಲ್ಲಿ ಅಲೆದಾಡುತ್ತಿದ್ದ ಸುಮಾರು 35 ವರ್ಷ ವಯಸ್ಸಿನ ಅಜಿಮ್ ನನ್ನು ರಕ್ಷಿಸಿದರು. ಕಳಪೆ ವೈಯಕ್ತಿಕ ನೈರ್ಮಲ್ಯದೊಂದಿಗೆ ಮಾನಸಿಕ ರೋಗಲಕ್ಷಣಗಳನ್ನು ಹೊಂದಿದ್ದ ಅವರನ್ನು 10-9-2022 ರಂದು ಆರೈಕೆಗಾಗಿ ಸ್ನೇಹಾಲಯಕ್ಕೆ ಕರೆತರಲಾಯಿತು.

ಸ್ನೇಹಾಲಯದಲ್ಲಿ ಆತನಿಗೆ ಉಟೋಪಹಾರದೊಂದಿಗೆ ಉತ್ತಮ ಚಿಕಿತ್ಸೆ,ಧ್ಯಾನ, ಯೋಗ, ಚಿಕಿತ್ಸಕ ಚಟುವಟಿಕೆಗಳು, ಚಿಕಿತ್ಸೆಗಳು, ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆಗಳು ಮತ್ತು ಸಮಾಲೋಚನೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಯಿತು. ಕ್ರಮೇಣ ಆತನ ಸ್ಥಿತಿ ಸುಧಾರಿಸಿತು ಮತ್ತು ಮನೋವೈದ್ಯಕೀಯ ರೋಗಲಕ್ಷಣಗಳನ್ನು ಕಡಿಮೆಗೊಂಡವು . ಆತನು ಹಂಚಿಕೊಂಡ ವಿವರಗಳ ಪ್ರಕಾರ, ಶ್ರದ್ಧಾ ಫೌಂಡೇಶನ್ ನ ಸಹಕಾರದಿಂದ   ದಿನಾಂಕ 29-11-2022 ರಂದು ಅಜಿಮ್ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡರು ಮತ್ತು ಆತನನ್ನು ಕರ್ನಾಟಕದ ಮಂಡ್ಯದ ಕಿರುಗಾವಲು ಎಂಬಲ್ಲಿ ಅವರ ತಾಯಿ ಜೈ ಬನ್ನಿಸಾ ಅವರು ಬರಮಾಡಿಕೊಂಡರು. 8 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅಜೀಮ್ ಅವರನ್ನು ಸ್ವೀಕರಿಸಿದ ನಂತರ, ಕುಟುಂಬದ ಸದಸ್ಯರು ಸಂತೋಷ ಮತ್ತು ಹರ್ಷದಿಂದ ತುಂಬಿದರು.

 ಮಂಗಳೂರಿನ ಬೀದಿಯಿಂದ ಮಂಡ್ಯದಲ್ಲಿನ ಕುಟುಂಬವನ್ನು ತಲುಪುವಲ್ಲಿ ಹಾಗೂ ಅಜೀಂ ಅವರ ರಕ್ಷಣೆ ಮತ್ತು ಪುನರ್ಮಿಲನ ಪ್ರಯಾಣದಲ್ಲಿ ಸಲ್ಲಿಸಿದ ನಿಸ್ವಾರ್ಥ ಪ್ರಯತ್ನಗಳಿಗಾಗಿ ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಮತ್ತು   ಮುಂಬೈಯ ಶ್ರದ್ಧಾ  ತಂಡಕ್ಕೆ ಕುಟುಂಬಸ್ಥರು ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *

Need Help?