Malabharath Kumar happily reunited at Andhra Pradesh with his family

/

Malabharath Kumar aged 21 years was rescued by team Snehalaya and brought to Snehalaya Rehabilitation centre from the streets of Kunjathoor on 12/02/22. He was found in an unhygienic condition, and was wandering on the streets.  So for further treatment and rehabilitation, he was admitted to Snehalaya Psycho-Social Rehabilitation Centre for Men for care and treatment.  He was encouraged to participate in different sections of therapeutic activities and also different Counselling sessions were conducted by our Professional team. Gradually he started responding to our treatment and his health condition also showed good signs of improvement.   Then we tried to trace his family address and his whereabouts. Our team came to know that he hails from Anantapur District, Andhra Pradesh. So On 04/05/22, he was shifted to Shraddha Rehabilitation Centre, Mumbai for further reunion process.

He was happily reunited with his family at Andhra Pradesh on 25/05/22. He was received by his beloved parents. His family told that he had mental issues but was not under any treatment.

 It was a Joyful moment for his parents to get their son back. They took responsibility to take good care of him. Our team provided a treatment plan and medicines for two months.

They were grateful towards Snehalaya, Manjeshwar and Shraddha Foundation Mumbai for their kind gesture and selfless service in all this process of rescue to reunion.

 

ಆಂಧ್ರಪ್ರದೇಶದಲ್ಲಿನ ತಮ್ಮ ಕುಟುಂಬದೊಂದಿಗೆ ಮಲಭಾರತ್ ಕುಮಾರರ ಸಂತೋಷದ ಪುನರ್ಮಿಲನ

ಸುಮಾರು 21 ವರ್ಷ ವಯಸ್ಸಿನ ಮಲಭಾರತ್ ಕುಮಾರ್ ಅವರನ್ನು ಕುಂಜತ್ತೂರಿನ ಬೀದಿಯಿಂದ ದಿನಾಂಕ 12/02/22 ರಂದು ಸ್ನೇಹಾಲಯ ತಂಡವು ರಕ್ಷಿಸಿತು . ಅವರು  ಶಾರೀರಿಕ ನೈರ್ಮಲ್ಯವಿಲ್ಲದ ಸ್ಥಿತಿಯಲ್ಲಿ, ಅನ್ನ ಆಹಾರವಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿದ್ದರು. ಅವರಿಗೆ ಮನೋದೌರ್ಬಲ್ಯಗಳಿರುವುದನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆ ಮತ್ತು  ಆರೈಕೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ  ಕೇಂದ್ರಕ್ಕೆ   ದಾಖಲಿಸಲಾಯಿತು. ಅವಶ್ಯಕ ಚಿಕಿತ್ಸೆಯೊಂದಿಗೆ ಚಟುವಟಿಕೆಗಳ ವಿವಿಧ ವಿಭಾಗಗಳಲ್ಲಿ ಅವರು ಭಾಗವಹಿಸುವಂತೆ ಪ್ರೋತ್ಸಾಹಿಸಲಾಯಿತು. ಅವರ ಉತ್ತಮ ಸ್ಥಿತಿಯನ್ನು ಕಂಡ ನಮ್ಮ ವೃತ್ತಿಪರ ತಂಡವು  ವಿವಿಧ ಆಪ್ತ ಸಮಾಲೋಚನಾ ಪ್ರಕ್ರಿಯೆಗಳನ್ನು ಕೈಗೊಂಡು ಆತನ ವೈಯುಕ್ತಿಕ ವಿವರಗಳನ್ನು ಕಲೆ ಹಾಕಿತು.

ಇದರಂತೆ  ಮಲಭಾರತ್ ಕುಮಾರ್ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವರು ಎಂದು ಸ್ನೇಹಾಲಯ ತಂಡಕ್ಕೆ ತಿಳಿದುಬಂತು. ಆದ್ದರಿಂದ ದಿನಾಂಕ 04/05/22 ರಂದು ಅವರನ್ನು ಮುಂದಿನ ಪುನರ್ಮಿಲನ ಪ್ರಕ್ರಿಯೆಗಾಗಿ     ಮುಂಬೈಯ ಶ್ರದ್ಧಾ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಮುಂಬೈಯ ಶ್ರದ್ಧಾ ಪುನರ್ವಸತಿ ಕೇಂದ್ರದ ಕಾರ್ಯಕರ್ತರ ನೆರವಿನಿಂದ ಅವರು ದಿನಾಂಕ 25/05/22 ರಂದು ಆಂಧ್ರಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಮತ್ತೆ ಸೇರಿದರು. ಅವರನ್ನು ಅವರ ಪ್ರೀತಿಯ ಪೋಷಕರು ಬರಮಾಡಿಕೊಂಡರು. ಅವರಿಗೆ ಮಾನಸಿಕ ಸಮಸ್ಯೆಗಳಿದ್ದರೂ ಯಾವುದೇ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.

ಅಂದಿನ ದಿನ ಅವರ ಹೆತ್ತವರಿಗೆ ತಮ್ಮ ಮಗನನ್ನು ಮರಳಿ ಪಡೆದ ಸಂತೋಷದ ಭಾವುಕ ದಿನವಾಗಿತ್ತು.

ಮಲಭಾರತ್ ಕುಮಾರ್ ನ ಪುನರ್ಮಿಲನದ ಈ ಎಲ್ಲಾ ಪ್ರಕ್ರಿಯೆಯಲ್ಲಿ ನಿಸ್ವಾರ್ಥ ಸೇವೆ ನೀಡಿರುವ    ಮಂಜೇಶ್ವರದ ಸ್ನೇಹಾಲಯ ಮತ್ತು ಮುಂಬೈಯ  ಶ್ರದ್ಧಾ ಫೌಂಡೇಶನ್ ಗೆ ಕುಟುಂಬವು ಅಭಾರಿಯಾಗಿದ್ದು  ಕೃತಜ್ಞತಾಪೂರ್ವಕ ಧನ್ಯವಾದ ಗಳನ್ನು ಸಮರ್ಪಿಸಿರುತ್ತಾರೆ.

Leave a Reply

Your email address will not be published. Required fields are marked *

Need Help?