After 18 years Jibin got his name back as Dipun and reunited with his family at Assam.

/

Under Pratyasha Project Jibin aged 52 was brought to Snehalaya Manjeshwar from Teresa Bhavan Charitable Trust, Kannur for reunion process on 17/03/22. After his admission at Snehalaya along with the medication he was encouraged to participate in different therapeutic activities. As a part of this during the counselling session he shared a few information about his family and of his native. Our social workers came to know that he hails from Assam. And they contacted the local administration, Police and Panchayat and traced his family. After collecting the contact details team Snehalaya had the telephonic conversation with his brother and started their journey to Nalbari, Assam for reunion on 10/04/22.

A joyful day came in Jibin’s life as he was happily welcomed at home by his brother Mr. Nithya Das. His brother shared that Dipun went missing 18 years ago. He had mental issues since 24 years and was under treatment. He belongs to a middle class family and lost his parents long back. He has three brothers and five sisters. His actual name is Dipun. 

The family was very happy to see him back after 18 years and they were highly indebted towards Snehalaya Manjeshwar and Kripa Bhavan Charitable Trust, Kannur  for their kind gesture. They offered their gratitude and payers for the selfless service provided Dipun from the street till reunion with his family.

 

18 ವರ್ಷಗಳ ನಂತರ ಜಿಬಿನ್ ತನ್ನ ಹೆಸರನ್ನು ದಿಪುನ್ ಎಂದು ಮರಳಿ ಪಡೆದರು ಮತ್ತು ಅಸ್ಸಾಂನಲ್ಲಿ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡರು.

ಪ್ರತ್ಯಶಾ ಯೋಜನೆಯಡಿ 52 ವರ್ಷ ವಯಸ್ಸಿನ ಜಿಬಿನ್ ಅವರನ್ನು 17/03/22 ರಂದು ಪುನರ್ಮಿಲನ ಪ್ರಕ್ರಿಯೆಗಾಗಿ ಕಣ್ಣೂರಿನ  ತೆರೇಸಾ ಭವನ ಚಾರಿಟೇಬಲ್ ಟ್ರಸ್ಟ್‌ನಿಂದ  ಮಂಜೇಶ್ವರದ ಸ್ನೇಹಾಲಯಕ್ಕೆ ಕರೆತರಲಾಯಿತು. ಸ್ನೇಹಾಲಯದಲ್ಲಿ  ದಾಖಲಾದ ನಂತರ ವೈದ್ಯಕೀಯ ಚಿಕಿತ್ಸೆ ಯೊಂದಿಗೆ ವಿವಿಧ ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಲಾಯಿತು. ಇದರ ಭಾಗವಾಗಿ ಆಪ್ತಸಮಾಲೋಚನೆ ಸಮಯದಲ್ಲಿ ಜಿಬಿನ್ ತಮ್ಮ ಕುಟುಂಬ ಮತ್ತುಊರಿನ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡರು. ಅವರು ಅಸ್ಸಾಂ ಮೂಲದವರೆಂದು ನಮ್ಮ ಸಾಮಾಜಿಕ ಕಾರ್ಯಕರ್ತರಿಗೆ ತಿಳಿಯಿತು. ಮತ್ತು ಅವರು ಸ್ಥಳೀಯ ಆಡಳಿತ, ಪೊಲೀಸ್ ಮತ್ತು ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿದರು. ಮತ್ತು ಅವರ ಕುಟುಂಬವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಆತನ ಕುಟುಂಬದವರ ಸಂಪರ್ಕ ವಿವರಗಳ ಸಂಗ್ರಹಿಸಿದ ನಂತರ ಸ್ನೇಹಾಲಯ ತಂಡವು ಆತನ ಸಹೋದರನೊಂದಿಗೆ ದೂರವಾಣಿ ಸಂಭಾಷಣೆ ನಡೆಸಿತು .ದಿನಾಂಕ 10/04/22 ರಂದು ಕುಟುಂಬದೊಂದಿಗೆ ಮರು ಸೇರ್ಪಡೆ ಪ್ರಕ್ರಿಯೆಗಾಗಿ ತಂಡವು ಅಸ್ಸಾಂನ ನಲ್ಬರ್ ಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು.

ಜಿಬಿನ್ ಅವರ ಜೀವನದಲ್ಲಿ ಸಂತೋಷದ ದಿನ ಬಂದಿತು, ಅವರ ಸಹೋದರ ಶ್ರೀ ನಿತ್ಯ ದಾಸ್ ಆತನನ್ನು ಸಂತೋಷದಿಂದ ಮನೆಗೆ ಸ್ವಾಗತಿಸಿದರು. 18 ವರ್ಷಗಳ ಹಿಂದೆ ದಿಪುನ್ ನಾಪತ್ತೆಯಾಗಿದ್ದು ಕಳೆದ ಸುಮಾರು 24 ವರ್ಷಗಳಿಂದ ಆತನಿಗೆ ಮಾನಸಿಕ ಸಮಸ್ಯೆ ಇದ್ದುದ್ದಾಗಿ ತಿಳಿಸಿದರು. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಇವರು ಬಹಳ ಹಿಂದೆಯೇ ತಂದೆ-ತಾಯಿಯನ್ನು ಕಳೆದುಕೊಂಡಿರುತ್ತಾರೆ. ಅವರಿಗೆ ಮೂವರು ಸಹೋದರರು ಮತ್ತು ಐದು ಸಹೋದರಿಯರಿದ್ದಾರೆ. ಅವನ ನಿಜವಾದ ಹೆಸರು ದಿಪುನ್ ಎಂಬುದಾಗಿರುತ್ತದೆ.

18 ವರ್ಷಗಳ ನಂತರ ಆತನನ್ನು ಮರಳಿ ನೋಡಲು ಕುಟುಂಬವು ತುಂಬಾ ಸಂತೋಷಭರಿತವಾಗಿತ್ತು.ಮತ್ತು ಅವರು  ಮಂಜೇಶ್ವರದ ಸ್ನೇಹಾಲಯ  ಮತ್ತು   ಕಣ್ಣೂರಿನ  ಕೃಪಾ ಭವನ ಚಾರಿಟೇಬಲ್ ಟ್ರಸ್ಟ್ ಗೆ ತಮ್ಮ ಕೃತಜ್ಞತೆಗಳನ್ನು ಅರ್ಪಿಸಿದರು. ದಿಪುನ್ ರನ್ನು  ಬೀದಿಯಿಂದ ರಕ್ಷಿಸಿ ಆರೈಕೆ,ಚಿಕಿತ್ಸೆ ನೀಡಿ ಮತ್ತೆ ತನ್ನ ಕುಟುಂಬದೊಂದಿಗೆ ಒಂದಾಗಿಸಿದ ನಿಸ್ವಾರ್ಥ ಸೇವೆಗಾಗಿ ಅವರೆಲ್ಲರು ತಮ್ಮ ಮನದಾಳದ  ಹಾರೈಕೆ ಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?