After 16 years Nirmal Pal re-joined his family at West Bengal.

/

Under Pratyasha Project for the reunion process Akhbar Ali Yane Mr. Nirmal Pal aged 50 was brought to Snehalaya, Manjeshwar from Teresa Bhavan, Kannur. He was admitted at Snehalaya on 17.03.2022 and the treatment was continued as prescribed by the Psychiatric Doctor. He was encouraged to participate in all the Social and Therapeutic activities. During the counselling sessions he shared a few information about his family and native place. Based on this information our Team Members contacted Police, Panchayath and Local Leaders and coordinated with them to trace his family . Social Workers of Snehalaya came to know that he hails from Gopalpur, Paraganas District, West Bengal.

  Our team contacted his family and had telephonic conversations with his brother Sunil Pal. Team Snehalaya started their journey to Gopalpur in West Bengal and reunited Nirmal with his brother Sunil Pal on 13/04/22. Akhbar Ali’s original name was Nirmal Pal and his brother told that Nirmal is married and has seven sons. Unfortunately, his wife also has psychiatric problems. He was suffering from mental illness since 17 years and went missing 16 years ago. 

The family members accepted Nirmal Pal and  assured  a good care of him. They were thankful towards Snehalaya, Manjeshwar and Teresa Bhavan, Kannur for their kind gesture and initiative to reunite him with his family.

 

 

16 ವರ್ಷಗಳ ನಂತರ  ಪಶ್ಚಿಮ ಬಂಗಾಳದಲ್ಲಿನ ತನ್ನ ಕುಟುಂಬವನ್ನು ಮತ್ತೆ ಸೇರಿಕೊಂಡ ನಿರ್ಮಲ್ ಪಾಲ್ 

ಕುಟುಂಬದೊಂದಿಗೆ ಮರುಸೇರ್ಪಡೆ ಪ್ರಕ್ರಿಯೆಗಾಗಿ ಪ್ರತ್ಯಶಾ ಯೋಜನೆಯಡಿ 50 ವರ್ಷದ ಶ್ರೀ ಅಕ್ಬರ್ ಅಲಿ ಯಾನೇ ನಿರ್ಮಲ್ ಪಾಲ್  ಅವರನ್ನು ಕಣ್ಣೂರಿನ ತೆರೇಸಾ ಭವನದಿಂದ ಮಂಜೇಶ್ವರದ ಸ್ನೇಹಾಲಯಕ್ಕೆ ಕರೆತರಲಾಯಿತು. ಅವರನ್ನು 17.03.2022 ರಂದು ಸ್ನೇಹಾಲಯಕ್ಕೆ ದಾಖಲಿಸಲಾಯಿತು ಮತ್ತು ಮನೋವೈದ್ಯರು ಸೂಚಿಸಿದಂತೆ ಚಿಕಿತ್ಸೆಯನ್ನು ಮುಂದುವರಿಸಲಾಯಿತು. ಅವರು ಎಲ್ಲಾ ಸಾಮಾಜಿಕ ಮತ್ತು ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಯಿತು. ಕೌನ್ಸೆಲಿಂಗ್ ಸಮಯದಲ್ಲಿ ಅವರು ತಮ್ಮ ಕುಟುಂಬ ಮತ್ತು ಊರಿನ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡರು. ಈ ಮಾಹಿತಿಯ ಆಧಾರದ ಮೇಲೆ ನಮ್ಮ ತಂಡದ ಸದಸ್ಯರು ಪೊಲೀಸರು, ಪಂಚಾಯತ್ ಮತ್ತು ಸ್ಥಳೀಯ ಮುಖಂಡರನ್ನು ಸಂಪರ್ಕಿಸಿ ಅವರ ಕುಟುಂಬವನ್ನು ಪತ್ತೆಹಚ್ಚಲು ಅವರೊಂದಿಗೆ ಸಹಕರಿಸಿದರು. ಅವರು ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯ ಗೋಪಾಲ್‌ಪುರದವರು ಎಂದು ಸ್ನೇಹಾಲಯದ ಸಾಮಾಜಿಕ ಕಾರ್ಯಕರ್ತರಿಗೆ ತಿಳಿದು ಬಂತು . ನಮ್ಮ ತಂಡವು ಅವರ ಕುಟುಂಬವನ್ನು ಸಂಪರ್ಕಿಸಿ, ಅವರ ಸಹೋದರ ಸುನಿಲ್ ಪಾಲ್ ಅವರೊಂದಿಗೆ ದೂರವಾಣಿ ಸಂಭಾಷಣೆಗಳನ್ನು ನಡೆಸಿತು.

    ಸ್ನೇಹಾಲಯ ತಂಡವು ಪಶ್ಚಿಮ ಬಂಗಾಳದ ಗೋಪಾಲಪುರಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು ಮತ್ತು 13/04/22 ರಂದು ಅಕ್ಬರ್ ಅವರ ಸಹೋದರ ಸುನಿಲ್ ಪಾಲ್ ಅವರೊಂದಿಗೆ ಮತ್ತೆ ಒಂದಾಯಿತು. ಅಕ್ಬರ್ ಅಲಿ ಯವರ ನಿಜವಾದ ಹೆಸರು ನಿರ್ಮಲ್ ಪಾಲ್ ಎಂದು ತಿಳಿಯಿತು. ಅಲ್ಲದೆ ಅವರು ಮದುವೆಯಾಗಿದ್ದು ಏಳು ಗಂಡು ಮಕ್ಕಳ ತಂದೆಯಾಗಿರುವುದಾಗಿ ಅವರ ಸಹೋದರ ತಿಳಿಸಿದರು . ದುರದೃಷ್ಟವಶಾತ್, ಅವರ ಹೆಂಡತಿಗೂ ಮಾನಸಿಕ ಸಮಸ್ಯೆಗಳಿದ್ದವು. ಸುಮಾರು 17 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ನಿರ್ಮಲ್ ಪಾಲ್ 16 ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು.

ಕುಟುಂಬ ಸದಸ್ಯರು ನಿರ್ಮಲ್ ಪಾಲ್ ರನ್ನು ಸ್ವೀಕರಿಸಿದರು ಮತ್ತು ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದರು. ಕುಟುಂಬಸ್ಥರು ಸ್ನೇಹಾಲಯ, ಮಂಜೇಶ್ವರ ಮತ್ತು   ಕಣ್ಣೂರಿನ ತೆರೇಸಾ ಭವನಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *

Need Help?