After 22 years Usha reunited with her family at Maharastra.

/

Usha aged 53 was brought to Snehalaya, Manjeshwar  from Mariya Bhavan Kannur under Pratyasha Project on 14/02/22 for reunion process.

The treatment to Usha is continued at Snehalaya as prescribed by the psychiatric Doctor. Along with this she was encouraged to participate in all social and therapeutic activities. She also participated in the counselling sessions and shared her details. Our Team Members contacted the police and other officials of her native place and collected the information about her family. Social Workers of Snehalaya came to know that she hails from Buldhana Maharashtra. After the telephonic conversation with her family members, our team journeyed to her native place on 08/03/22 and her family was happy to see her after 22 years.

Her family members told that after her son’s death Usha lost her mental balance. And all of a sudden she left her home in the year 2000 when her one more daughter was off only 4 years old. Usha’s husband searched for her everywhere but didn’t find her.

Usha was joyfully received by her husband Madukar and accepted happily back to her family. They were very grateful towards  Snehalaya and Maria Bhavan for their kind help and initiatives that made it possible to reunite Usha with the family again.

 

 

22 ವರ್ಷಗಳ ನಂತರ  ಮಹಾರಾಷ್ಟ್ರದಲ್ಲಿ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿದ ಉಷಾ.

53 ವರ್ಷ ವಯಸ್ಸಿನ ಉಷಾರನ್ನು ತನ್ನ ಕುಟುಂಬದೊಂದಿಗೆ ಮತ್ತೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗಾಗಿ ದಿನಾಂಕ 14/02/22 ರಂದು ಪ್ರತ್ಯಶಾ ಯೋಜನೆಯಡಿ ಮರಿಯ ಭವನ ಕಣ್ಣೂರಿನಿಂದ ಮಂಜೇಶ್ವರದ ಸ್ನೇಹಾಲಯಕ್ಕೆ ಕರೆತರಲಾಯಿತು.

ಮನೋವೈದ್ಯರ ಸೂಚನೆಯಂತೆ ಸ್ನೇಹಾಲಯದಲ್ಲಿ ಉಷಾಗೆ ಚಿಕಿತ್ಸೆ ಮುಂದುವರಿಸಲಾಯಿತು.ಇದರೊಂದಿಗೆ ಆಕೆಯು ಎಲ್ಲಾ ಸಾಮಾಜಿಕ ಮತ್ತು ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಯಿತು. ಅವರು ಆಪ್ತ ಸಮಾಲೋಚನೆ ಗಳಲ್ಲಿ ಭಾಗವಹಿಸಿದರು ಮತ್ತು ಅವರ ವೈಯುಕ್ತಿಕ ವಿವರಗಳನ್ನು ಹಂಚಿಕೊಂಡರು. ನಮ್ಮ ತಂಡದ ಸದಸ್ಯರು ಆಕೆಯ ಮಾಹಿತಿಯಂತೆ ಸ್ಥಳೀಯ ಪೊಲೀಸರು ಮತ್ತು ಇತರ ಅಧಿಕಾರಿಗಳನ್ನು ಸಂಪರ್ಕಿಸಿ ಆಕೆಯ ಕುಟುಂಬದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಿದರು. ಅವರು ಮಹಾರಾಷ್ಟ್ರದ ಬುಲಧಾನದವರು  ಎಂದು ಸ್ನೇಹಾಲಯದ ಸಾಮಾಜಿಕ ಕಾರ್ಯಕರ್ತರಿಗೆ ತಿಳಿದು ಬಂತು . ಆಕೆಯ ಕುಟುಂಬದ ಸದಸ್ಯರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಂತೆ ನಮ್ಮ ತಂಡವು ದಿನಾಂಕ 08/03/22 ರಂದು ಆಕೆಯ ಮನೆಗೆ ಪ್ರಯಾಣ ಬೆಳೆಸಿತು.

ಸುಮಾರು 22 ವರ್ಷಗಳ ನಂತರ ಉಷಾರ ಕುಟುಂಬವು ಆಕೆಯನ್ನು ನೋಡಿ ಬಹಳ ಸಂತೋಷಪಟ್ಟಿತು . ಮಗನ ಸಾವಿನ ನಂತರ ಉಷಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಗಿ ಆಕೆಯ ಕುಟುಂಬಸ್ಥರು ತಿಳಿಸಿರುತ್ತಾರೆ. ಮತ್ತು ಇದ್ದಕ್ಕಿದ್ದಂತೆ ಆಕೆಯು 2000 ರಲ್ಲಿ ತನ್ನ ಮಗಳು ಕೇವಲ 4 ವರ್ಷ ವಯಸ್ಸಿನವಳಗಿದ್ದಾಗ ಮನೆಯನ್ನು ತೊರೆದಿರುವುದಾಗಿ ತಿಳಿಸಿದರು .ಉಷಾಳ ಪತಿ ಆಕೆಗಾಗಿ ಎಲ್ಲೆಡೆ ಹುಡುಕಾಡಿದರೂ ಆಕೆಯು ಪತ್ತೆಯಾಗಿರಲಿಲ್ಲ.

ಉಷಾರನ್ನು ಅವರ ಪತಿ ಮಧುಕರ್ ಅವರು ಸಂತೋಷದಿಂದ ಬರಮಾಡಿಕೊಂಡರು ಮತ್ತು ಹರ್ಷದಿಂದ ತಮ್ಮ ಕುಟುಂಬಕ್ಕೆ ಮರಳಿ ಸೇರಿಸಿದರು.  ಅವರು ಸ್ನೇಹಾಲಯ ಮತ್ತು ಮರಿಯಾ ಭವನ್ ಸಂಸ್ಥೆಗಳ ನೆರವು,ಆರೈಕೆ ಮತ್ತು ಉಪಕ್ರಮಗಳಿಗಾಗಿ ಮತ್ತು ಉಷಾರನ್ನು ಮತ್ತೆ ತನ್ನ ಕುಟುಂಬದೊಂದಿಗೆ  ಸೇರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

Need Help?