Under Pratyaasha Project Anil Kumar Kashayap aged 48 was brought to Snehalaya, Manjeshwar from Teresa Bhavan Kannur for reunion process.
He was admitted at Snehalaya on 17/03/22 and the treatment was continued as prescribed by the psychiatric Doctor. Along with this he was encouraged to participate in all social and therapeutic activities. He also participated in the counselling sessions. Our Team Members contacted Police, Panchayath and Local Leaders and coordinated with them to trace his family . Social Workers of Snehalaya came to know that he hails from Mainpuri of UP.
With the help of Mainpuri Police our team contacted his family and his brother-in-law Pramod and nephew Yogesh came to Snehalaya on 29.04.2022 to receive him joyfully.
They were very happy to see him after 9 years. They told that he is a graduate and was a founder of a school. He was fond of reading books and was a teacher in his school. He has two brothers and two sisters. One of his sisters is a Police Officer and Brother-in-Law was serving in BSF. He is unmarried and after his parents’ death he developed psychiatric problems. And suddenly went on missing in 2013 . They had reported at local newspaper, Panchayath and tried to trace him. But couldn’t find him.
Now after 9 years when they received a call from Snehalaya about Anil Kashyap without delay they traveled towards Manjeshwar all the way from UP. They were happy to take him back home. They expressed their gratefulness towards Snehalaya and Theresa Bhavan for all the efforts in providing a quality life to Anil.
9 ವರ್ಷಗಳ ನಂತರ ಅನಿಲ್ ಕಶ್ಯಪ್ ಉತ್ತರ ಪ್ರದೇಶದಲ್ಲಿನ ತನ್ನ ಕುಟುಂಬವನ್ನು ಮತ್ತೆ ಸೇರಿಕೊಂಡರು.
ಪ್ರತ್ಯಾಶಾ ಯೋಜನೆಯಡಿ 48 ವರ್ಷ ವಯಸ್ಸಿನ ಅನಿಲ್ ಕುಮಾರ್ ಕಶ್ಯಪ್ ಅವರನ್ನು ಅವರ ಕುಟುಂಬ ದೊಂದಿಗೆ ಮರುಸೇರ್ಪಡೆಗೊಳಿಸುವ ಪ್ರಕ್ರಿಯೆಗಾಗಿ ತೆರೇಸಾ ಭವನ ಕಣ್ಣೂರಿನಿಂದ ಮಂಜೇಶ್ವರದ ಸ್ನೇಹಾಲಯಕ್ಕೆ ಕರೆತರಲಾಯಿತು.ಇದರಂತೆ ದಿನಾಂಕ
17/03/22 ರಂದು ಸ್ನೇಹಾಲಯದಲ್ಲಿ ದಾಖಲಾದ ಅನಿಲ್ ಕುಮಾರ್ ಕಶ್ಯಪ್ ರಿಗೆ ಮನೋವೈದ್ಯರ ಸೂಚನೆಯಂತೆ ಚಿಕಿತ್ಸೆ ಮುಂದುವರೆಸಲಾಯಿ ತು.ಇದರೊಂದಿಗೆ ಎಲ್ಲಾ ಸಾಮಾಜಿಕ ಮತ್ತು ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಯಿತು. ಅವರು ಕೌನ್ಸೆಲಿಂಗ್ ಸೆಷನ್ಗಳಲ್ಲಿಯೂ ಭಾಗವಹಿಸಿದರು. ನಮ್ಮ ತಂಡದ ಸದಸ್ಯರು ಪೊಲೀಸ್, ಪಂಚಾಯತ್ ಮತ್ತು ಸ್ಥಳೀಯ ಮುಖಂಡರನ್ನು ಸಂಪರ್ಕಿಸಿ ಅವರ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸಿದರು. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಸ್ನೇಹಾಲಯದ ಸಾಮಾಜಿಕ ಕಾರ್ಯಕರ್ತರಿಗೆ ಅನಿಲ್ ಉತ್ತರಪ್ರದೇಶದ ಮೈನ್ಪುರಿ ಮೂಲದವರು ಎಂಬ ಮಾಹಿತಿ ಲಭಿಸಿತು.
ಮೈನ್ಪುರಿ ಪೊಲೀಸರ ಸಹಾಯದಿಂದ ನಮ್ಮ ತಂಡವು ಅವರ ಕುಟುಂಬವನ್ನು ಸಂಪರ್ಕಿಸಿತು. ಮತ್ತು ಅವರ ಸೋದರ ಮಾವ ಪ್ರಮೋದ್ ಮತ್ತು ಸೋದರಳಿಯ ಯೋಗೇಶ್ ರವರು ಅನಿಲ್ ರನ್ನು ಕರೆದುಕೊಂಡು ಹೋಗಲು ದಿನಾಂಕ 29.04.2022 ರಂದು ಸ್ನೇಹಾಲಯಕ್ಕೆ ಬಂದರು.
9 ವರ್ಷಗಳ ನಂತರ ಆತನನ್ನು ನೋಡಿದಾಗ ಅವರು ತುಂಬಾ ಸಂತೋಷಪಟ್ಟರು. ಅನಿಲ್ ಪದವೀಧರರಾಗಿದ್ದು, ಊರಿನಲ್ಲಿ ಶಾಲೆಯ ಸಂಸ್ಥಾಪಕರಾಗಿದ್ದರು ಎಂದು ಅವರು ಹೇಳಿದರು. ಅವರು ಪುಸ್ತಕಗಳನ್ನು ಓದಲು ಇಷ್ಟಪಡುತ್ತಿದ್ದರು ಮತ್ತು ಅವರು ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದು, ಅವರ ಸಹೋದರಿಯರಲ್ಲಿ ಒಬ್ಬರು ಪೊಲೀಸ್ ಅಧಿಕಾರಿ ಮತ್ತು ಸೋದರ ಮಾವ BSF ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅನಿಲ್ ಅವಿವಾಹಿತರು ಮತ್ತು ಅವರ ಪೋಷಕರ ಮರಣದ ನಂತರ ಅವರು ಮಾನಸಿಕ ಸಮಸ್ಯೆಗಳನ್ನು ಎದುರಿಸಿದರು. ಮತ್ತು 2013 ರಲ್ಲಿ ಇದ್ದಕ್ಕಿದ್ದಂತೆ ಕಾಣೆಯಾದರು . ಕುಟುಂಬಸ್ಥರು ಸ್ಥಳೀಯ ಪತ್ರಿಕೆ, ಪಂಚಾಯತ್ ನಲ್ಲಿ ವರದಿ ಮಾಡಿ ಆತನ ಪತ್ತೆಗೆ ಯತ್ನಿಸಿದ್ದರು. ಆದರೆ ಅವರಿಗೆ ಆತನನ್ನು ಹುಡುಕಲಾಗಲಿಲ್ಲ.
ಈಗ 9 ವರ್ಷಗಳ ನಂತರ ಸ್ನೇಹಾಲಯದಿಂದ ಅನಿಲ್ ಕಶ್ಯಪ್ ಬಗ್ಗೆ ಕರೆ ಬಂದಾಗ ತಡಮಾಡದೆ ಅವರು ಉತ್ತರ ಪ್ರದೇಶದಿಂದ ಮಂಜೇಶ್ವರದ ಕಡೆಗೆ ಪ್ರಯಾಣಿಸಿದರು. ಅವರು ಅವನನ್ನು ಮನೆಗೆ ಕರೆದೊಯ್ಯಲು ಸಂತೋಷಪಟ್ಟರು. ಅನಿಲ್ಗೆ ಗುಣಮಟ್ಟದ ಜೀವನ ಒದಗಿಸಲು ಶ್ರಮಿಸಿದ ಸ್ನೇಹಾಲಯ ಮತ್ತು ಥೆರೆಸಾ ಭವನಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.