Reunion of Mathin at Bihar

/

As per the information received from Bandar Police Station of Mangalore, Mathin aged 45 was admitted to Snehalaya  Manjeshwar for care and treatment on 07/09/21. 

He had serious psychiatric problems and was violent in his behaviour. 

He underwent medical tests and treatment. Slowly he was encouraged to participate in various therapeutic activities. He also participated at counselling sessions. And as the days passed his physical and mental condition improved. He was sent to Shradha Rehabilitation  Foundation on 19/01/22 for further reunion process. Based on the information shared by team Snehalaya, Social workers of Shradha Rehabilitation  Foundation traced his family at Kadampura of Bihar. His Sister in law  welcomed him back home after 3 and 1/2  years. They were happy to see him  in good mental condition. According to his sister in law,  he has three brothers and two of them are teachers at government school. He had psychiatric issues and was under treatment.  And oneday he suddenly disappeared. The family searched for him, but did not find him. 

The family thanked both Snehalaya and Shraddha centre  for providing good care, treatment and reuniting Mathin.

 

ಬಿಹಾರದಲ್ಲಿನ ತನ್ನ ಕುಟುಂಬವನ್ನು ಮತ್ತೆ ಸೇರಿದ ಮತೀನ್.

ಮಂಗಳೂರಿನ ಬಂದರ್ ಪೊಲೀಸ್ ಠಾಣೆ ರವರು ನೀಡಿದ ಮಾಹಿತಿಯಂತೆ ದಿನಾಂಕ: 07/09/21 ರಂದು 45 ವರ್ಷ ವಯಸ್ಸಿನ ಮತೀನ್ ರನ್ನು ಅಲ್ಲಿಂದ ರಕ್ಷಿಸಿ ಆರೈಕೆ ಮತ್ತು ಚಿಕಿತ್ಸೆಗಾಗಿ  ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಲಾಯಿತು.

ಅವರು ಗಂಭೀರ ಮಾನಸಿಕ ಸಮಸ್ಯೆಗಳನ್ನು ಹೊಂದಿದ್ದರು ಮತ್ತು ಅವರ ನಡವಳಿಕೆಯಲ್ಲಿ ಹಿಂಸಾತ್ಮಕರಾಗಿದ್ದು ಆಕ್ರಮಣಕಾರಿಯಾಗಿದ್ದರು.

ಅವರಿಗೆ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲಾಯಿತು. ನಿಧಾನವಾಗಿ ಅವರು ವಿವಿಧ ಚಿಕಿತ್ಸಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಯಿತು. ಅವರು ಆಪ್ತಸಮಾಲೋಚನೆಗಳಲ್ಲಿಯೂ ಭಾಗವಹಿಸಿದರು.  ದಿನಗಳು ಕಳೆದಂತೆ ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿ ಸುಧಾರಿಸಿತು.

ಮತೀನ್ ರನ್ನು ಆತನ  ಕುಟುಂಬದೊಂದಿಗೆ ಮರು ಸೇರ್ಪಡೆಗೊಳಿಸುವ ಪ್ರಕ್ರಿಯೆಗಾಗಿ ದಿನಾಂಕ 19/01/22 ರಂದು ಮುಂಬೈಯ ಶ್ರದ್ಧಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಯಿತು.  ಸ್ನೇಹಾಲಯದ ತಂಡದ ಸದಸ್ಯರು  ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ, ಶ್ರದ್ಧಾ ಪುನರ್ವಸತಿ ಕೇಂದ್ರದ ಸಾಮಾಜಿಕ ಕಾರ್ಯಕರ್ತರು ಬಿಹಾರದ ಕದಂಪುರದಲ್ಲಿ ಅವರ ಕುಟುಂಬವನ್ನು ಪತ್ತೆಹಚ್ಚಿದರು. ಅವರ ಅತ್ತಿಗೆ 3 1/2 ವರ್ಷಗಳ ನಂತರ ಮನೆಗೆ ಮರಳಿದ    ಮತೀನ್ ರನ್ನು ಪ್ರೀತಿಯಿಂದ ಸ್ವಾಗತಿಸಿದರು. ಅವರು  ಉತ್ತಮ ಮಾನಸಿಕ ಸ್ಥಿತಿಯಲ್ಲಿರುವುದನ್ನು ನೋಡಿ ಸಂತೋಷಪಟ್ಟರು .

ಮತೀನ್ ಗೆ  ಮೂವರು ಸಹೋದರರಿದ್ದು ಅವರಲ್ಲಿ ಇಬ್ಬರು ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು. ಮತೀನ್ ಗೆ ಮಾನಸಿಕ ಸಮಸ್ಯೆಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಮತ್ತು ಒಂದು ದಿನ ಅವರು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವುದಾಗಿ ಆತನ ಅತ್ತಿಗೆ ತಿಳಿಸಿದರು .

ಮಂಗಳೂರಿನ ಬಂದರು ಪ್ರದೇಶದಲ್ಲಿ ಮಾನಸಿಕ ಅನಾರೋಗ್ಯದಿಂದ ಕಂಗೆಟ್ಟು, ಅನ್ನ ಆಹಾರ ವಿಲ್ಲದೆ ಕ್ಷೀಣವಾಗಿದ್ದ ಮತೀನ್ ನನ್ನು ರಕ್ಷಿಸಿ, ಉತ್ತಮ ಆರೈಕೆ, ಚಿಕಿತ್ಸೆ ನೀಡಿ,ಕುಟುಂಬದಿಂದ ಕಳೆದುಹೋದವನನ್ನು ಮತ್ತೆ  ಕುಟುಂಬದೊಂದಿಗೆ ಮರಳಿ ಸೇರಿಸಿದಕ್ಕಾಗಿ ಅವರೆಲ್ಲರು ಸ್ನೇಹಾಲಯ ಮಂಜೇಶ್ವರ ಹಾಗೂ ಶ್ರದ್ಧಾ ಮುಂಬೈ ಈ ಎರಡೂ ಸಂಸ್ಥೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *

Need Help?