Naravi to Telangana – Journey of Kishan towards joyful Living with his family

/

Kishan aged 50 was roaming on Naravi Road and was brought to Snehalaya on 07/09/2021 by Mr Basavaraj Nandalike from Karkal. He was without food, hungry, weak and was suffering from psychiatric problems. He was admitted to Snehalaya for care and treatment.  Kishan actively participated in all therapeutic activities and counselling sessions. One day he shared   about his native and told that he hails from Telangana.

After collecting his family details, he was taken to Shraddha Rehabilitation Foundation, Mumbai for reunion process. Social worker Team traced his family at B.T. Nagar, Bodhan, Nizamabad of Telangana. Team could contact his brother and he said that his parents and wife has expired. Kishan has three daughters and all are married and well settled. Few years back Kishan met with a road  accident and became mentally unstable and went missing since last three years. They searched him but unfortunately couldn’t find him. 
Kishan’s brother was happy to see him alive and receive him with a better condition. He expressed his gratefulness towards Snehalaya Psycho – Social Rehabilitation Centre and Shraddha Rehabilitation Foundation Mumbai for their selfless efforts in rescuing providing care and treatment  to Kishan and reuniting him with his family.
ನಾರಾವಿಯಿಂದ ತೆಲಂಗಾಣ – ಕಿಶನ್ ರವರು ಮತ್ತೆ ತನ್ನ ಕುಟುಂಬದೊಂದಿಗೆ ಸೇರಿದರು 
50 ವರ್ಷ ವಯಸ್ಸಿನ ಕಿಶನ್ ನಾರಾವಿ ರಸ್ತೆಯಲ್ಲಿ ತಿರುಗಾಡುತ್ತಿದ್ದು, ಕಾರ್ಕಳದ ಶ್ರೀ ಬಸವರಾಜ ನಂದಳಿಕೆ ಎಂಬುವರು 07/09/2021 ರಂದು ಸ್ನೇಹಾಲಯಕ್ಕೆ ಕರೆತಂದರು. ಅವರು ಆಹಾರವಿಲ್ಲದೆ, ಹಸಿವಿನಿಂದ, ದುರ್ಬಲರಾಗಿದ್ದರು ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರನ್ನು ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯಕ್ಕೆ ದಾಖಲಿಸಲಾಗಿತ್ತು. ಕಿಶನ್ ಎಲ್ಲಾ ಚಿಕಿತ್ಸಕ ಚಟುವಟಿಕೆಗಳಲ್ಲಿ ಮತ್ತು ಆಪ್ತ ಸಮಾಲೋಚನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಒಂದು ದಿನ ಅವರು ತಮ್ಮ ಊರಿನ ಬಗ್ಗೆ ವಿಷಯಗಳನ್ನು ಹಂಚಿಕೊಂಡರು ಮತ್ತು ಅವರು ತೆಲಂಗಾಣದಿಂದ ಬಂದವರು ಎಂದು ಹೇಳಿದರು.
ಅವರ ಕುಟುಂಬದ ವಿವರಗಳನ್ನು ಸಂಗ್ರಹಿಸಿದ ನಂತರ, ಅವರನ್ನು ಪುನರ್ಮಿಲನ ಪ್ರಕ್ರಿಯೆಗಾಗಿ ಮುಂಬೈನ ಶ್ರದ್ಧಾ ಫೌಂಡೇಶನ್‌ಗೆ ಕರೆದೊಯ್ಯಲಾಯಿತು. ಸಮಾಜ ಸೇವಕ ತಂಡವು ತೆಲಂಗಾಣದ ನಿಜಾಮಾಬಾದ್ ನಲ್ಲಿನ ಬಿ.ಟಿ. ನಗರ, ಬೋಧನ್ ನಲ್ಲಿ ವಾಸವಿರುವ ಅವರ ಕುಟುಂಬವನ್ನು  ಸಂಪರ್ಕಿಸುವಲ್ಲಿ ಯಶಸ್ವಿಯಾಯಿತು.
ಕಿಶನ್ ಸಹೋದರನನ್ನು ಸಂಪರ್ಕಿಸಿದಾಗ ಆತನ ಪೋಷಕರು ಮತ್ತು ಹೆಂಡತಿಯು ತೀರಿಕೊಂಡಿದ್ದು ಕಿಶನ್‌ಗೆ ಮೂವರು ಹೆಣ್ಣು ಮಕ್ಕಳಿದ್ದು, ಎಲ್ಲರೂ ಮದುವೆಯಾಗಿ ತಮ್ಮ ಕುಟುಂಬದೊಂದಿಗೆ ನೆಲೆಸಿರುವುದಾಗಿ ತಿಳಿಸಿದರು. ಹಲವು ವರ್ಷಗಳ ಹಿಂದೆ ಕಿಶನ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದು ಇದರಿಂದ ಮಾನಸಿಕವಾಗಿ ಅಸ್ಥಿರರಾಗಿದ್ದರು ಮತ್ತು ಕಳೆದ ಮೂರು ವರ್ಷಗಳಿಂದ ನಾಪತ್ತೆಯಾಗಿರುವುದಾಗಿಯೂ ತಿಳಿಸಿದರು . ಕುಟುಂಬಸ್ಥರು ಆತನನ್ನು ಹುಡುಕಿದರು ಆದರೆ ದುರದೃಷ್ಟವಶಾತ್ ಹುಡುಕಲಾಗದೆ ಕೈಬಿಟ್ಟಿದ್ದರು.
ಕಿಶನ್‌ನ ಸಹೋದರನು ಆತನನ್ನು ಜೀವಂತವಾಗಿ ನೋಡಿ  ಮತ್ತು  ಉತ್ತಮ ಸ್ಥಿತಿಯಲ್ಲಿ ಸ್ವೀಕರಿಸಿಲು ಸಂತೋಷಪಟ್ಟನು. ಅವರು ಕಿಶನ್ ರನ್ನು ರಕ್ಷಿಸಲು, ಚಿಕಿತ್ಸೆ ನೀಡಲು ಮತ್ತು ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ   ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ  ಪುನರ್ವಸತಿ ಕೇಂದ್ರ ಮತ್ತು  ಮುಬೈನ ಶ್ರದ್ಧಾ ಫೌಂಡೇಶನ್ ನಡೆಸಿದ ಎಲ್ಲಾ ನಿಸ್ವಾರ್ಥ ಪ್ರಯತ್ನಗಳಿಗಾಗಿ  ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

Need Help?