Successful Re – Union of Geeta with her family at Bihar after 10 years of missing.
On 5.2.2021, Snehalaya team rescued Geeta from the street of Talapady. She was roaming on the street restlessly without maintaining her hygiene.
After her admission at Snehalaya, team members gave a good bath, provided food and treatment. Geeta responded well for all therapeutic activities and for the treatment, which helped her speedy recovery from her psychological illness.
During the counseling sessions , she shared her address that she hails from Bhuskaul, Darbhanga of Bihar State
Immediately, team contacted Shraddha Rehabilitation Foundation at Mumbai and started the process of reuniting with her family.
With the keen interest shown by Shardha Rehabilitation foundation Geeta was taken to her home at Bhuskaul, Darbhanga of Bihar State.
Her brother in law welcomed her with love. He said her life had been quite tragic as she was married and living at Uttrakhand . She lost her husband and due to severe depression she went on missing. The family members searched for her but couldn’t find her.
Since then it has been after 10 years her brother in law was very happy to see her alive. The team guided about further treatment and medicines. The family showed their gratefulness towards Snehalaya Psycho- Social Rehabilitation Centre and Shradha Foundation Mumbai for all their efforts in treating Geeta and reuniting her with the family.
ಕಾಣೆಯಾದ 10 ವರ್ಷಗಳ ನಂತರ ಗೀತಾ ರವರನ್ನು ಬಿಹಾರದಲ್ಲಿನ ಅವರ ಕುಟುಂಬದೊಂದಿಗೆ ಮರು ಒಕ್ಕೂಟಗೊಳಿಸಿದ ಸಂತಸದ ಕ್ಷಣ.
5.2.2021 ರಂದು ಸ್ನೇಹಾಲಯ ತಂಡ ತಲಪಾಡಿಯ ಬೀದಿಯಿಂದ ಗೀತಾಳನ್ನು ರಕ್ಷಿಸಿತು. ಆಕೆಯು ಸ್ವಚ್ಛತೆ ಕಾಪಾಡದೆ, ಅನಾರೋಗ್ಯಕರ ಸ್ಥಿತಿಯಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದಳು. ಸ್ನೇಹಾಲಯಕ್ಕೆ ದಾಖಲಾದ ನಂತರ ತಂಡದ ಸದಸ್ಯರು ಆಕೆಗೆ ಚೆನ್ನಾಗಿ ಸ್ನಾನ ಮಾಡಿಸಿ ಊಟ, ಉಪಚಾರ ಮಾಡಿದರು. ಗೀತಾ ಎಲ್ಲಾ ಚಿಕಿತ್ಸಕ ಚಟುವಟಿಕೆಗಳಿಗೆ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ನಡೆಸಿದ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸಿದರು.
ಆಪ್ತ ಸಮಾಲೋಚನೆಯ ಸಮಯದಲ್ಲಿ, ಆಕೆಯು ತಾನು ಬಿಹಾರ ರಾಜ್ಯದವಳು ಎಂದು ತನ್ನ ವಿಳಾಸವನ್ನು ಹಂಚಿಕೊಂಡಳು.
ತಕ್ಷಣವೇ, ತಂಡವು ಮುಂಬೈನಲ್ಲಿರುವ ಶ್ರದ್ಧಾ ಪುನರ್ವಸತಿ ಪ್ರತಿಷ್ಠಾನವನ್ನು ಸಂಪರ್ಕಿಸಿತು ಮತ್ತು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸುವ ಪ್ರಕಿಯೆ ಯನ್ನು ಪ್ರಾರಂಭಿಸಿತು.
ಶ್ರದ್ಧಾ ಪುನರ್ವಸತಿ ಪ್ರತಿಷ್ಠಾನವು ತೋರಿಸಿದ ತೀವ್ರ ಆಸಕ್ತಿಯಿಂದ ಆಕೆಯನ್ನು ಬಿಹಾರದ ಭುಸ್ಕೌಲ್ನಲ್ಲಿರುವ ತನ್ನ ಮನೆಗೆ ಕರೆದೊಯ್ಯಲಾಯಿತು.
ಆಕೆಯ ಸೋದರಮಾವ ಆಕೆಯನ್ನು ಪ್ರೀತಿಯಿಂದ ಸ್ವಾಗತಿಸಿದರು. ಆಕೆ ಮದುವೆಯಾಗಿ ಉತ್ತರಾಖಂಡದಲ್ಲಿ ವಾಸಿಸುತ್ತಿದ್ದು, ಆಕೆಯ ಜೀವನವು ಸಾಕಷ್ಟು ದುಃಖಕರವಾಗಿದೆ ಎಂದು ಅವರು ಹೇಳಿದರು. ಪತಿಯನ್ನು ಕಳೆದುಕೊಂಡು ತೀವ್ರ ಖಿನ್ನತೆಗೆ ಒಳಗಾಗಿ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಆಕೆಗಾಗಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಅಂದಿನಿಂದ 10 ವರ್ಷಗಳು ಕಳೆದಿವೆ. ಆಕೆಯ ಸೋದರ ಮಾವ ಅವಳನ್ನು ಜೀವಂತವಾಗಿ ನೋಡಿ ತುಂಬಾ ಸಂತೋಷಪಟ್ಟರು. ಹೆಚ್ಚಿನ ಚಿಕಿತ್ಸೆ ಮತ್ತು ಔಷಧಿಗಳ ಬಗ್ಗೆ ತಂಡವು ಮಾರ್ಗದರ್ಶನ ನೀಡಿತು. ಗೀತಾರವರಿಗೆ ಚಿಕಿತ್ಸೆ ನೀಡಲು ಮತ್ತು ಅವರನ್ನು ಕುಟುಂಬದೊಂದಿಗೆ ಮತ್ತೆ ಸೇರಿಸಲು ಅವಿರತವಾಗಿ ಶ್ರಮಿಸಿದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಮತ್ತು ಶ್ರದ್ಧಾ ಫೌಂಡೇಶನ್ ಮುಂಬೈಗೆ ಕುಟುಂಬದವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿರುತ್ತಾರೆ