21 year old Jayadev was reunited with his family at Allahabad.
Jayadev was spotted by Snehalaya team on 6/6/21 at Manjeshwar Railway Station. As he was looking psychologically ill and was without food and care he has been brought to Psycho – Social Rehabilitation Centre of Snehalaya. Along with shelter and treatment, proper care was given to Jayadev. He was made to participate at different outdoor and indoor activities and also attended several counselling sessions. These therapeutic activities helped him to improve his conditions. He was able to recognize himself and shared his family details.
With the great support of Shradha Rehabilitation centre Mumbai, we could reach his family at Koundi village in Allahabad district of Uttar Pradesh. His family members shared the information that Jayadev is of 21 years old and was suffering from mental illness since four years and went on missing.
During the reunion process he was received by his uncle Mangalprasad. Jayadev’s family was happy to receive him with better health conditions. They expressed their gratefulness towards the efforts taken by Team Snehalaya in providing care, treatment and reuniting him with his family.
21 ವರ್ಷದ ಜಯದೇವ್ ಅಲಹಾಬಾದ್ ನಲ್ಲಿನ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡ ಸಂತಸದ ಘಟನೆ.
6/6/21 ರಂದು ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥರಂತೆ ಕಾಣುವ ಮತ್ತು ಆಹಾರ ಹಾಗೂ ಯಾವುದೇ ಆರೈಕೆಯಿಲ್ಲದೆ ಬಳಲಿದ ವ್ಯಕ್ತಿಯನ್ನು ಸ್ನೇಹಾಲಯ ತಂಡದ ಸದಸ್ಯರು ರಕ್ಷಿಸಿ ತಮ್ಮ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಕರೆತಂದಿರುತ್ತಾರೆ. ಇವರು ಜಯದೇವ್ ಆಗಿದ್ದು ಇವರಿಗೆ ಸ್ನೇಹಾಲಯದಲ್ಲಿ ಆಶ್ರಯ ಮತ್ತು ಚಿಕಿತ್ಸೆಯ ಜೊತೆಗೆ ಸೂಕ್ತ ಆರೈಕೆಯನ್ನು ನೀಡಲಾಯಿತು. ಅವರು ವಿವಿಧ ಹೊರಾಂಗಣ ಮತ್ತು ಒಳಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲಾಯಿತು. ಅಲ್ಲದೆ ಅವರಿಗೆ ಅನೇಕ ಆಪ್ತಸಮಾಲೋಚನೆಗಳನ್ನು ನಡೆಸಲಾಯಿತು.
ಈ ಎಲ್ಲಾ ಚಿಕಿತ್ಸಕ ಚಟುವಟಿಕೆಗಳು ಜಯದೇವ್ ರವರ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಿತು. ಅವರು ತನ್ನನ್ನು ಗುರುತಿಸಿಕೊಳ್ಳಲು ಸಾಧ್ಯವಾಯಿತು ಮತ್ತು ಅವರು ತನ್ನ ಕುಟುಂಬದ ವಿವರಗಳನ್ನು ಹಂಚಿಕೊಂಡರು . ಮುಂಬೈ ನ ಶ್ರದ್ಧಾ ಪುನರ್ವಸತಿ ಕೇಂದ್ರದ ವಿಶೇಷ ಸಹಕಾರದೊಂದಿಗೆ ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ಕೌಂಡಿ ಗ್ರಾಮದಲ್ಲಿ ವಾಸವಾಗಿರುವ ಜಯದೇವ್ ಅವರ ಕುಟುಂಬದ ಸದಸ್ಯರನ್ನು ತಲುಪಲು ಸಾಧ್ಯವಾಯಿತು . ಜಯದೇವ್ 21 ವರ್ಷದವರಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಈ ಹಿನ್ನಲೆಯಲ್ಲಿ ನಾಪತ್ತೆಯಾಗಿರುತ್ತಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿರುತ್ತಾರೆ .
ಕುಟುಂಬದೊಂದಿಗೆ ಮರುಸೇರ್ಪಡೆ ಪ್ರಕ್ರಿಯೆಯಲ್ಲಿ ಅವರ ಚಿಕ್ಕಪ್ಪ ಮಂಗಳಪ್ರಸಾದ್ ಜಯದೇವ್ ರವರನ್ನು ಬರಮಾಡಿಕೊಂಡರು. ಕಾಣೆಯಾಗಿದ್ದ ಜಯದೇವ್ ಉತ್ತಮ ಆರೋಗ್ಯಪರಿಸ್ಥಿತಿಗಳೊಂದಿಗೆ ಮತ್ತೆ ಕುಟುಂಬ ವನ್ನು ಸೇರುವಾಗ ಕುಟುಂಬಸ್ಥರು ಅವರನ್ನು ಸಂತೋಷದಿಂದ ಸ್ವೀಕರಿಸಿದರು. ಅಲ್ಲದೆ ಜಯದೇವ್ ಅವರನ್ನು ಆರೈಕೆ ಮಾಡಿ ಆಶ್ರಯ ಹಾಗೂ ಚಿಕಿತ್ಸೆ ನೀಡಿ, ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಸುವಲ್ಲಿ ಸ್ನೇಹಾಲಯ ಸಂಸ್ಥೆಯು ಕೈಗೊಂಡ ಎಲ್ಲಾ ಪ್ರಯತ್ನಗಳಿಗೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.