Mr. Aman of 18 year age was rescued by the Snehalaya team from Thuminadu, Manjeshwar on 17th April 2021 who was suffering from psychiatric problems, lack of personal hygiene, sleep disorder and restlessness.
Snehalaya provided proper care and treatment to Aman. He was also supported to recover through counselling sessions. He made to participate at different outdoor and indoor activities. As a result of his recovery he could identify himself and recall his past. With the help of Shraddha Rehabilitation Foundation, Mumbai Snehalaya Team could contact his uncle at a shop in Madhya Pradesh and other family members too. Snehalaya arranged for the reunion of Aman with his family at Morena district of Madhya Pradesh.
Team provided the medicines for further treatment of Aman. His family members were happy to receive him and showed their gratefulness towards Snehalaya.
18 ವರ್ಷ ವಯಸ್ಸಿನ ಶ್ರೀ ಅಮನ್ ರವರನ್ನು ಮಧ್ಯಪ್ರದೇಶದ ಅವರ ಕುಟುಂಬದೊಂದಿಗೆ ಮರು ಸೇರ್ಪಡೆಗೊಳಿಸಿದ ಸಂತಸದ ಘಟನೆ.
18 ವಯಸ್ಸಿನ ಶ್ರೀ ಅಮನ್ ರವರನ್ನು 17 ಏಪ್ರಿಲ್ 2021 ರಂದು ಮಂಜೇಶ್ವರದ ತುಮಿನಾಡು ಬಳಿಯಿಂದ ಸ್ನೇಹಾಲಯ ತಂಡವು ರಕ್ಷಿಸಿತು.
ಅಮನ್, ಮನೋದೌರ್ಬಲ್ಯದ ಸಮಸ್ಯೆಗಳು, ವೈಯಕ್ತಿಕ ನೈರ್ಮಲ್ಯದ ಕೊರತೆ, ನಿದ್ರಾಹೀನತೆ ಮತ್ತು ಚಡಪಡಿಕೆಯಿಂದ ಬಳಲುತ್ತಿದ್ದರು.
ಸ್ನೇಹಾಲಯದಲ್ಲಿ ಅಮನ್ ಅವರಿಗೆ ಸೂಕ್ತ ಆರೈಕೆ ಮತ್ತು ಚಿಕಿತ್ಸೆ ನೀಡಲಾಯಿತು. ಆಪ್ತಸಮಾಲೋಚನೆಗಳ ಮೂಲಕ ಅವರಿಗೆ ಚೇತರಿಸಿಕೊಳ್ಳಲು ಬೆಂಬಲ ನೀಡಲಾಯಿತು. ಅಲ್ಲದೆ ವಿವಿಧ ಹೊರಾಂಗಣ ಮತ್ತು ಒಳಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಲಾಯಿತು.ಅಮನ್ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಳ್ಳಲಾಯಿತು. ಈ ಚೇತರಿಕೆಯ ಪರಿಣಾಮವಾಗಿ ಅಮನ್ ತನ್ನನ್ನು ಗುರುತಿಸಿಕೊಳ್ಳಲು ಮತ್ತು ತನ್ನ ಹಿಂದಿನ ಜೀವನವನ್ನು ನೆನಪಿಸಿಕೊಂಡರು. ಮುಂಬೈನ ಶ್ರದ್ಧಾ ಪುನರ್ವಸತಿ ಪ್ರತಿಷ್ಠಾನದ ಸಹಾಯದಿಂದ, ಸ್ನೇಹಾಲಯ ತಂಡವು ಮಧ್ಯಪ್ರದೇಶದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ಅವರ ಚಿಕ್ಕಪ್ಪ ನನ್ನು ಸಂಪರ್ಕಿಸಿದರು. ಇವರ ಜೊತೆ ಸಮಾಲೋಚನೆ ನಡೆಸಿ ಅಮನ್ ರನ್ನು ಮಧ್ಯಪ್ರದೇಶ ಮೊರೆನ ಜಿಲ್ಲೆಯಲ್ಲಿ ವಾಸವಾಗಿರುವ ತನ್ನ ಕುಟುಂಬದೊಂದಿಗೆ ಮರು ಸೇರ್ಪಡೆ ಮಾಡಲು ವ್ಯವಸ್ಥೆ ಮಾಡಲಾಯಿತು.
ಅಮನ್ ಅವರ ಹೆಚ್ಚಿನ ಚಿಕಿತ್ಸೆಗಾಗಿ ಔಷಧಿಗಳನ್ನು ಒದಗಿಸಲಾಯಿತು.ಅಮನ್ ಕುಟುಂಬದ ಸದಸ್ಯರು ಸಂತೋಷದಿಂದ ಅಮನ್ ನನ್ನು ಮಧ್ಯಪ್ರದೇಶದಲ್ಲಿನ ತಮ್ಮ ಮನೆಗೆ ಕರೆದೊಯ್ದರು. ಹಾಗೂ ಅಮನ್ ಗೆ ರಕ್ಷಣೆ, ವಸತಿ, ಉಟೋಪಚಾರ ಹಾಗೂ ಅವಶ್ಯಕ ಚಿಕಿತ್ಸೆ ನೀಡಿ,ಕುಟುಂಬದೊಂದಿಗೆ ಮರು ಸೇರ್ಪಡೆಗೆ ಕಾರಣವಾದ ಸ್ನೇಹಾಲಯ ಸಂಸ್ಥೆಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.